ನೆರೆ ಸಂತ್ರಸ್ತರಿಗೆ ಧರ್ಮಸ್ಥಳ ಸಂಸ್ಥೆಯಿಂದ 8 ಕೋಟಿ ರೂ. ನೆರವು ವಿತರಣೆ
ಕೊಡಗು

ನೆರೆ ಸಂತ್ರಸ್ತರಿಗೆ ಧರ್ಮಸ್ಥಳ ಸಂಸ್ಥೆಯಿಂದ 8 ಕೋಟಿ ರೂ. ನೆರವು ವಿತರಣೆ

January 10, 2019

ಮಡಿಕೇರಿ: ಪ್ರಕೃತಿ ವಿಕೋಪ ದಲ್ಲಿ ಸಂತ್ರಸ್ತರಾದವರಿಗೆ ಅನುಕಂಪದ ಬದಲಿಗೆ ಅನುಭೂತಿಯಿಂದ ಪ್ರತಿಯೊ ಬ್ಬರು ನೆರವು ನೀಡಬೇಕೆಂದು ಧರ್ಮಸ್ಥಳ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ರಾಜಶ್ರೀ ಡಾ.ಡಿ. ವೀರೇಂದ್ರ ಹೆಗ್ಗಡೆ ಕರೆ ನೀಡಿದ್ದಾರೆ.

ಪ್ರಕೃತಿ ವಿಕೋಪದಿಂದಾಗಿ ಸಂತ್ರಸ್ತರಾದ ಕೊಡಗು ಜಿಲ್ಲೆಯ 2106 ಮಂದಿಗೆ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 8 ಕೋಟಿ ರೂ.ಗಳ ನೆರವು ನೀಡಲಾಯಿತು. ಮಡಿಕೇರಿಯ ಗಾಂಧಿ ಮೈದಾನದಲ್ಲಿ ಆಯೋಜಿತ ಸಮಾರಂಭದಲ್ಲಿ ಸಾಂಕೇತಿಕವಾಗಿ ಸಂತ್ರಸ್ತಗೆ ಪರಿಹಾರದ ಚೆಕ್‍ಗ ಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿ ಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ವಿತರಿಸಿದರು.

ಬಳಿಕ ಮಾತನಾಡಿದ ಅವರು, ಕಷ್ಟಗಳು ಆಕಸ್ಮಿಕವಾಗಿ ಎದುರಾದಾಗ ಧೃತಿಗೆಡದೆ ಸವಾಲುಗಳನ್ನು ಸ್ವೀಕರಿಸುವ ದೃಢತೆ ಮತ್ತು ಛಲದ ಮನೋಭಾವ ಹೊಂದುವಂತಾಗ ಬೇಕೆಂದು ಕರೆ ನೀಡಿದರು.

ಸಂತ್ರಸ್ತರಿಗೆ ಅನುಕಂಪಕ್ಕಿಂತ ಸಹಾಯ ಮಾಡುವ ಅನುಭೂತಿ ಮುಖ್ಯವಾಗಿ ಬೇಕಾ ಗಿದೆ. ಎಲ್ಲವನ್ನೂ ಸರ್ಕಾರದಿಂದಲೇ ನಿರೀ ಕ್ಷಿಸದೇ ಸಂತ್ರಸ್ತರಿಗೆ ಪ್ರತಿಯೊಬ್ಬರೂ ಕೈಲಾದ ಸಹಾಯ ಮಾಡಬೇಕು. ಮನೆ ಕಳೆದು ಕೊಂಡ ಸಂತ್ರಸ್ತರಿಗೆ ಸರ್ಕಾರ ನಿರ್ಮಿ ಸಲು ಉದ್ದೇಶಿತ ಮನೆಗಳನ್ನು ವಿಳಂಬ ರಹಿತವಾಗಿ ಶೀಘ್ರವೇ ನಿರ್ಮಿಸಿಕೊಡ ಬೇಕು ಎಂದು ಸಲಹೆ ನೀಡಿದರು.

ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರ ಧರ್ಮ ಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿ ಯಿಂದ ಸದಸ್ಯರಿಗೆ ಜೀವವಿಮಾ ಯೋಜನೆ, ಸ್ವ ಉದ್ಯೋಗದಂಥ ಹೊಸ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದೂ ಡಾ.ವೀರೇಂದ್ರ ಹೆಗ್ಗಡೆ ಪ್ರಕಟಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಜವಾಬ್ದಾರಿಯಡಿ ಕೊಡಗಿನಾ ದ್ಯಂತ 450 ಕೋಟಿ ರೂ.ಗಳ ಸಾಲವನ್ನು ನೀಡಲಾಗಿದೆ. ಯೋಜನೆಯ ಮೂಲಕ ನೇರ ವಾಗಿ ಯಾರಿಗೂ ಸಾಲ ನೀಡಿಲ್ಲ, ಬ್ಯಾಂಕ್ ನವರಿಗೆ ಯೋಜನೆ ಸದಸ್ಯರ ಪರವಾಗಿ ಗ್ಯಾರಂಟಿಯನ್ನು ಮಾತ್ರ ನಾವು ನೀಡಿ ದ್ದೇವೆ. ಜನ ಸತ್ಯವಂತರಿದ್ದಾರೆ. ಹೀಗಾಗಿ ಸಾಲ ಮರುಪಾವತಿ ಮಾಡುತ್ತಾರೆ. ಈಗಾ ಗಲೇ ಸ್ವಸಹಾಯ ಸಂಘದ ಸಂತ್ರಸ್ತ ಸದ ಸ್ಯರ ಪರವಾಗಿ ಬ್ಯಾಂಕ್‍ಗೆ 2 ತಿಂಗಳ ಸಾಲದ ಬಡ್ಡಿಯನ್ನು ಶ್ರೀ ಕ್ಷೇತ್ರದ ವತಿಯಿಂದ ನೀಡಲಾಗಿದೆ ಎಂದೂ ರಾಜಶ್ರೀ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.

ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಪ್ರಾರಂಭದ ಹಂತದಲ್ಲಿ ಸಂತ್ರಸ್ತರ ನೆರವಿಗೆ ದೌಡಾಯಿಸಿದ ಸರ್ಕಾರ ಇತ್ತೀಚಿನ ದಿನಗಳಲ್ಲಿ ಸಂತ್ರಸ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಮಂದಗತಿಯ ಧೋರಣೆ ತಳೆದಿದೆ. ಮತ್ತೊಂದು ಮಳೆ ಗಾಲ ಸಮೀಪಿಸುತ್ತಿದ್ದರೂ ಮನೆ ನಿರ್ಮಾಣ ಕಾರ್ಯ ಪ್ರಾರಂಭವಾಗಿಲ್ಲ. ಮಾರ್ಚ್ ಅಂತ್ಯ ದೊಳಗಾಗಿ ಮನೆ ನಿರ್ಮಿಸುವ ನಿರೀಕ್ಷೆ ಹುಸಿಯಾಗುತ್ತಿದೆ ಎಂದು ದೂರಿದರಲ್ಲದೇ, ಪ್ರಕೃತಿ ವಿಕೋಪದಿಂದಾಗಿ ಹಾನಿಗೊಳಗಾದ ಗ್ರಾಮಗಳನ್ನು ಪುನರ್ ನಿರ್ಮಿಸಿ ಸಂತ್ರಸ್ತ ರಾದವರ ಜೀವನದಲ್ಲಿ ಮತ್ತೆ ಮೊದಲಿ ನಂತೆ ಸಂತೋಷವನ್ನು ತರುವ ಸಂಕಲ್ಪ ತೊಡುವುದಾಗಿ ಹೇಳಿದರು.

ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭ ಜಗತ್ತಿ ನಾದ್ಯಂತ ಜನರು ಸ್ಪಂದಿಸಿದ್ದಾರೆ. ಧರ್ಮ ಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೊಡ ಗಿಗಾಗಿ ಕೋಟ್ಯಾಂತರ ಪರಿಹಾರ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಂತ್ರಸ್ತರ ಪರವಾಗಿ ಗಾಳಿಬೀಡು ಗ್ರಾಮ ಪಂಚಾಯತ್ ಸದಸ್ಯ ಧನಂಜಯ್, ಪ್ರಕೃತಿ
ವಿಕೋಪ ಸಂಭವಿಸಿದಾಗ ನೆರವಿನ ಯಜ್ಞಕ್ಕೆ ಬಂದವರು ಸಾವಿರಾರು ಜನರು ಎಂದು ಸ್ಮರಿಸಿಕೊಂಡರಲ್ಲದೇ, ಸರ್ಕಾರ ಈಗ ಮನೆ ನೀಡಿದರೂ ಹಾನಿಗೊಳಗಾದ ಕೃಷಿ ಭೂಮಿ ಯನ್ನು ಕಳೆದುಕೊಂಡವರಿಗೆ ಕೃಷಿ ಪರಿಹಾರ ಮಾರ್ಗಗಳೇನು ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿಲ್ಲ. ಹೀಗಾಗಿ ಸಂತ್ರಸ್ತರಲ್ಲಿ ಗೊಂದಲ ಉಂಟಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಮಡಿಕೇರಿ ತಾಲೂಕು ಪಂಚಾಯತ್ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ದಿ ಯೋಜನೆಯ ಕಾರ್ಯನಿರ್ವಾ ಹಕ ನಿರ್ದೇಶಕ ಡಾ.ಎನ್.ಎಚ್. ಮಂಜು ನಾಥ್, ಪ್ರಾದೇಶಿಕ ನಿರ್ದೇಶಕ ಮಹಾ ವೀರ ಅಜ್ರಿ, ಕೊಡಗು ಜಿಲ್ಲಾ ನಿರ್ದೇಶಕ ಎ.ಯೋಗೇಶ್, ಐಡಿಬಿಐ ಬ್ಯಾಂಕ್ ಡೆಪ್ಯೂಟಿ ಜನರಲ್ ಮ್ಯಾನೇಜರ್ ಎಸ್. ರಾಮಸ್ವಾಮಿ, ಕೆನರಾ ಬ್ಯಾಂಕ್ ವಲ ಯಾಧಿಕಾರಿ ಅರುಣ್ ಸೇರಿದಂತೆ ಗಣ್ಯರು ಹಾಜರಿದ್ದರು.

ಇದೇ ಸಂದರ್ಭ ಜನಜಾಗೃತಿ ಸಂಘದ ವತಿಯಿಂದ ರಾಜಶ್ರೀ ಡಾ.ವೀರೇಂದ್ರ ಹೆಗ್ಗಡೆಯವರಿಗೆ ಕೊಡಗಿನ ಸಾಂಪ್ರ ದಾಯಿಕ ಪೇಟ ತೊಡಿಸಿ ಒಡಿಕತ್ತಿ ನೀಡಿ ಗೌರವಿಸಲಾಯಿತು.

Translate »