ಮಡಿಕೇರಿ: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಮಡಿಕೇರಿ ಶಾಖಾ ಕಚೇರಿ ವತಿಯಿಂದ ಕೈಗಾರಿಕಾ ಅಭಿವೃದ್ಧಿ ಸಮಾವೇಶವು ಡಿ.7 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಹೋಟೆಲ್ ಕೂರ್ಗ್ ಇಂಟರ್ ನ್ಯಾಷನಲ್‍ನಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಡಿ.ಕೆ.ಲಿಂಗರಾಜು, ಬೆಂಗಳೂರಿನ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಪ್ರಧಾನ ಕಚೇರಿಯ ಪ್ರಧಾನ ವ್ಯವಸ್ಥಾಪಕರಾದ ಬಿ.ಸಿ.ಶಿವಪ್ರಕಾಶ್ ಇತರರು ಪಾಲ್ಗೊಳ್ಳಲಿದ್ದಾರೆ.
ಸಾಲಬಾಧೆ: ವೃದ್ಧ ದಂಪತಿ ಆತ್ಮಹತ್ಯೆ
December 6, 2018ಸೋಮವಾರಪೇಟೆ: ಸಾಲಬಾಧೆಯಿಂದ ವೃದ್ಧ ದಂಪತಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲ್ಲೂಕಿನ ತಾಕೇರಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಗ್ರಾಮದ ಕಾಫಿ ಬೆಳೆಗಾರರಾದ ಎಸ್.ಎಂ.ಅಪ್ಪಯ್ಯ(81), ಪತ್ನಿ ಬೊಳ್ಳಮ್ಮ(75) ಮೃತಪಟ್ಟವರು. ಬುಧವಾರ ಮಧ್ಯಾಹ್ನದ ಹೊತ್ತಿಗೆ ಘಟನೆ ನಡೆದಿದೆ ಎನ್ನಲಾಗಿದೆ. ದಂಪತಿಗಳು ಏಣಿಯೊಂದಿಗೆ ಪಕ್ಕದ ಕಾಫಿ ತೋಟಕ್ಕೆ ತೆರಳಿ ಸಿಲ್ವರ್ ಮರ ಹಾಗೂ ಹುಳಿ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಬೆಳಿಗ್ಗೆ ಮಗ ಸೊಸೆ ಸೋಮವಾರಪೇಟೆಯಲ್ಲಿನ ಮದುವೆ ಸಮಾರಂಭಕ್ಕೆ ತೆರಳಿದ ನಂತರ ದಂಪತಿಗಳು ನೇಣು ಬಿಗಿದುಕೊಂಡಿದ್ದಾರೆ. ಸಂಜೆ ಮನೆಯಲ್ಲಿ ಪೋಷಕರು ಇರದಿದ್ದಾಗ ಕುಟುಂಬಸ್ಥರು ಹುಡುಕಾಟ…
ನಾಳೆ ಅಂಚೆ ಅದಾಲತ್
December 6, 2018ಮಡಿಕೇರಿ: ಅಂಚೆ ಅದಾಲತ್ ಸಭೆಯು ಡಿ.7 ರಂದು ಬೆಳಗ್ಗೆ 11 ಗಂಟೆಗೆ ಕೊಡಗು ಅಂಚೆ ವಿಭಾಗದ ವಿಭಾಗೀಯ ಕಚೇರಿಯಲ್ಲಿ ನಡೆಯಲಿದೆ. ಸಭೆಯಲ್ಲಿ ಕೊಡಗು ಅಂಚೆ ವಿಭಾಗದ ಅಂಚೆ ಸೇವೆಗೆ ಸಂಬಂಧಿಸಿದ ಎಲ್ಲಾ ತರಹದ ದೂರುಗಳನ್ನು ಸ್ವೀಕರಿಸಿ ಚರ್ಚಿಸಲಾಗುತ್ತದೆ. ದೂರುಗಳಿದ್ದಲ್ಲಿ ಅಂಚೆ ಅದಾಲತ್ ಎಂದು ಬರೆದು ಅಂಚೆ ಅಧೀಕ್ಷಕರು, ಕೊಡಗು ಅಂಚೆ ವಿಭಾಗ, ಮಡಿಕೇರಿ ಇವರಿಗೆ ಡಿ.6ರೊಳಗೆ ತಲುಪುವಂತೆ ಕಳುಹಿಸಲು ಕೋರಿದೆ. ನಂತರ ಡಿ.7ರಂದು ನಡೆಯುವ ಸಭೆಯಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಬಂದು ಭಾಗವಹಿಸ ಬಹುದು ಎಂದು ಕೊಡಗು…
ರಸ್ತೆ-ತಡೆಗೋಡೆ, ಚರಂಡಿ ನಿರ್ಮಾಣಕ್ಕೆ ಸೂಚನೆ
December 5, 2018ಮಡಿಕೇರಿ: ಮುಂದಿನ ಮುಂಗಾರು ಮಳೆಗೆ ಮಣ್ಣು ಕುಸಿಯದಂತೆ ರಸ್ತೆಗೆ ತಡೆಗೋಡೆ ಹಾಗೂ ಚರಂಡಿ ನಿರ್ಮಾಣ ಮಾಡುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯ ದರ್ಶಿ ಅನ್ಬುಕುಮಾರ್ ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಮಂಗಳವಾರ ಅಧಿಕಾರಿಗಳೊಂ ದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಮುಂದಿನ ಮುಂಗಾರು ಮಳೆಗಾಲದ ಅವಧಿಯಲ್ಲಿ ಪ್ರಸಕ್ತ ವರ್ಷ ಸುರಿದ ಅರ್ಧ ದಷ್ಟು ಮಳೆ ಸುರಿದರು ಬರೆ ಕುಸಿಯುವ ಸಾಧ್ಯತೆ ಇದೆ. ಆದ್ದರಿಂದ ರಸ್ತೆ ನಿರ್ಮಿಸು ವಾಗ ತಡೆಗೋಡೆ ಹಾಗೂ…
ಭಾಗಮಂಡಲ ಜಿಪಂ ಕ್ಷೇತ್ರದ ಬಿಜೆಪಿ ಸದಸ್ಯ ಆಯ್ಕೆ ಅಸಿಂಧು
December 5, 2018ಪರಾಜಿತ ದೇವಂಗೋಡಿ ತಿಲಕ ಸುಬ್ರಾಯಗೆ ಗೆಲುವಿನ ಹೂರಣ ಮಡಿಕೇರಿ: ಕೊಡಗು ಜಿಲ್ಲಾ ಪಂಚಾಯಿ ತಿಯ ಭಾಗಮಂಡಲದ ಕ್ಷೇತ್ರದ ಚುನಾಯಿತ ಪ್ರತಿನಿಧಿ ಬಿಜೆಪಿಯ ಕವಿತಾ ಪ್ರಭಾಕರ್ ಅವರ ಗೆಲುವನ್ನು ಅಸಿಂಧು ಎಂದು ಘೋಷಿಸಿ ಮಡಿಕೇರಿ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದೆ. ಮಾತ್ರವಲ್ಲದೆ, ಕವಿತಾ ಪ್ರಭಾಕರ್ ಅವರ ಎದುರಾಳಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ದೇವಂಗೋಡಿ ತಿಲಕ ಸುಬ್ರಾಯ ಅವರನ್ನು ವಿಜೇತ ಅಭ್ಯರ್ಥಿಯಾಗಿ ಘೋಷಿಸಿ ನ್ಯಾಯಾಲಯ ಅಪರೂಪದ ತೀರ್ಪು ನೀಡಿದೆ. ಪ್ರಕರಣ ಹಿನ್ನಲೆ: ಭಾಗಮಂಡಲ ಜಿಲ್ಲಾ ಪಂಚಾ ಯಿತಿನ ಮಹಿಳಾ ಮೀಸಲಾತಿ…
ಡಿ.7 ರಂದು ಕೊಡಗು ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ
December 5, 2018ಮಡಿಕೇರಿ: ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ನಿರಾಶ್ರಿತ ಕುಟುಂ ಬದವರಿಗೆ ಮನೆ ನಿರ್ಮಿಸುವ ಕಾಮಗಾರಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಡಿಸೆಂಬರ್ 7 ರಂದು ಮಾದಾಪುರದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಡಿ.7 ರಂದು ಮಧ್ಯಾಹ್ನ 12 ಗಂಟೆಗೆ ಮಾದಾಪುರದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮನೆ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ…
ಪಾಲಿಬೆಟ್ಟ ಗ್ರಾಪಂಗೆ ಅಂತರಾಷ್ಟ್ರೀಯ ಪ್ರಶಿಕ್ಷಣಾರ್ಥಿಗಳ ಅಧ್ಯಯನ ತಂಡ ಭೇಟಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ
December 5, 2018ಸಿದ್ದಾಪುರ: ಸಮೀಪದ ಪಾಲಿ ಬೆಟ್ಟ ಗ್ರಾಮ ಪಂಚಾಯಿತಿಗೆ ಅಂತರಾ ಷ್ಟ್ರೀಯ ಪ್ರಶಿಕ್ಷಣಾರ್ಥಿಗಳ ಅಧ್ಯಯನ ತಂಡ ಭೇಟಿ ನೀಡಿ ಅಭಿವೃದ್ಧಿ ಕಾರ್ಯ ಗಳ ಬಗ್ಗೆ ಮಾಹಿತಿ ಪಡೆದರು. ಅಂತರಾಷ್ಟ್ರೀಯ ಪ್ರಶಿಕ್ಷಣಾರ್ಥಿಗಳ ಗ್ರಾಮೀ ಣಾಭಿವೃದ್ಧಿ ಕಾರ್ಯಗಳ ಬಗ್ಗೆ ಅಧ್ಯ ಯನ ನಡೆಸಲು ಆಫ್ರಿಕಾ, ಶ್ರೀಲಂಕ, ನೈಜೇರಿಯ, ಕೀನ್ಯ, ಉಗಾಂಡ, ಇರಾಕ್, ಸೌತ್ ಆಫ್ರಿಕಾ, ಬಾಂಗ್ಲಾದೇಶ, ಉಜ್ಜೆಕಿ ಸ್ತಾನ್ ಬೋಟ್ಸ್ವಾನ್, ಈಜಿಪ್ಟ್, ಮಾರಿಷಸ್, ಸೂಡಾನ್ ಕೋಂಗೋ ಅಲ್ಜೀರಿಯ, ತಜಕಿ ಸ್ತಾನ್, ನಮೀಬಿಯ ರಾಷ್ಟ್ರಗಳ 24 ಮಂದಿ ಹಿರಿಯ ಅಧಿಕಾರಿಗಳು ನ್ಯಾಷ ನಲ್…
ಕಲ್ಲು ಕ್ವಾರೆಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ
December 5, 2018ಕುಶಾಲನಗರ: ನೀರು ತುಂಬಿದ ಕಲ್ಲುಕ್ವಾರೆಗೆ ಹಾರಿ ತಾಯಿ-ಮಗಳು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಗೊಂದಿಬಸವನಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಂದಿಬಸವನಹಳ್ಳಿ ಗ್ರಾಮದ ನಿವಾಸಿ ಸ್ವಾಮಿನಾಯಕ್ ಎಂಬು ವರ ಪತ್ನಿ ತಾಯಮ್ಮ(40 ವರ್ಷ) ಹಾಗೂ ಮಗಳು ದಿವ್ಯಶ್ರೀ ಅಲಿಯಾಸ್ ಗಾನವಿ (11 ವರ್ಷ) ಮೃತಪಟ್ಟಿರುವ ತಾಯಿ-ಮಗಳು. ಮಗಳು ದಿವ್ಯಶ್ರೀ ಗೊಂದಿ ಬಸವನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 5 ತರಗತಿ ವ್ಯಾಸಂಗ ಮಾಡುತ್ತಿ ದ್ದಳು. ತಾಯಮ್ಮನ ಪತಿ ಸ್ವಾಮಿ ನಾಯಕ…
ಕುಟ್ಟಂದಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರ ಕೊಲೆ ಪ್ರಕರಣ: ಆರೋಪಿ ದೋಷ ಮುಕ್ತ
December 5, 2018ವಿರಾಜಪೇಟೆ: ಮೂರು ವರ್ಷಗಳ ಹಿಂದೆ ಕುಟ್ಟಂದಿ ಗ್ರಾಮದಲ್ಲಿ ನಡೆದ ಇಲ್ಲಿನ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಚೇರಂಡ ಸಾಬು ನಾಣಯ್ಯ ಅವರ ಕೊಲೆಗೆ ಸಂಬಂಧಿಸಿ ದಂತೆ ಅವರ ಸಂಬಂಧಿಕ ಆರೋಪಿ ಚೇರಂಡ ಮೋಹನ್ ಎಂಬಾತನನ್ನು ಎರಡನೇ ಜಿಲ್ಲಾ ಮತ್ತು ಅಡಿಷನಲ್ ಸೆಷನ್ಸ್ ನ್ಯಾಯಾಧೀಶರಾದ ಬಿ.ಜಿ.ರಮಾ ದೋಷ ಮುಕ್ತನೆಂದು ತೀರ್ಪು ನೀಡಿ ಕೊಲೆ ಆರೋಪದಿಂದ ಬಿಡುಗಡೆಗೊಳಿಸಿದ್ದಾರೆ. ದಿನಾಂಕ 7-9-2015 ರಂದು ಬೆಳಗ್ಗೆ ಸಾಬು ನಾಣಯ್ಯ ಅವರು ಎಂದಿನಂತೆ ಕಾಫಿ ತೋಟಕ್ಕೆ ಸ್ಕೂಟರ್‍ನಲ್ಲಿ ಹೋಗುತ್ತಿದ್ದಾಗ ಎದುರು ಬದಿಯಿಂದ ಬಂದ ಸಾಬು ನಾಣಯ್ಯ…
ಗೋಣಿಕೊಪ್ಪದಲ್ಲಿ ಕಾವೇರಿ ಕಲರವ
December 5, 2018ಗೋಣಿಕೊಪ್ಪಲು: ಗೋಣಿಕೊಪ್ಪ ಕಾವೇರಿ ಪದವಿ ಪೂರ್ವ ಕಾಲೇಜು ವತಿಯಿಂದ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಕಾವೇರಿ ಕಲರವ ಕಾರ್ಯಕ್ರಮದಲ್ಲಿ ಜಿಲ್ಲೆಯ 36 ಶಾಲೆಗಳಿಂದ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಕಾಲೇಜಿನ ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾನಪದ ನೃತ್ಯ, ರಸಪ್ರಶ್ನೆ, ನಿಧಿ ಶೋಧ, ಥ್ರೋ ಬಾಲ್ ಹಾಗೂ ಕ್ರಿಕೆಟ್ ನಡೆಯಿತು. ಜಾನಪದ ನೃತ್ಯ ಸ್ಪರ್ಧೆಯಲ್ಲಿ ಕುಶಾಲನಗರ ಫಾತಿಮ ಪ್ರೌಢ ಶಾಲೆ ಪ್ರಥಮ, ದೇವರಪುರ ರಾಜರಾಜೇಶ್ವರಿ ಪ್ರೌಢ ಶಾಲೆ ದ್ವಿತೀಯ, ಟಿ.ಶೆಟ್ಟಿಗೇರಿ ರೂಟ್ಸ್…










