ಗೋಣಿಕೊಪ್ಪದಲ್ಲಿ ಕಾವೇರಿ ಕಲರವ
ಕೊಡಗು

ಗೋಣಿಕೊಪ್ಪದಲ್ಲಿ ಕಾವೇರಿ ಕಲರವ

December 5, 2018

ಗೋಣಿಕೊಪ್ಪಲು:  ಗೋಣಿಕೊಪ್ಪ ಕಾವೇರಿ ಪದವಿ ಪೂರ್ವ ಕಾಲೇಜು ವತಿಯಿಂದ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಕಾವೇರಿ ಕಲರವ ಕಾರ್ಯಕ್ರಮದಲ್ಲಿ ಜಿಲ್ಲೆಯ 36 ಶಾಲೆಗಳಿಂದ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.

ಕಾಲೇಜಿನ ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾನಪದ ನೃತ್ಯ, ರಸಪ್ರಶ್ನೆ, ನಿಧಿ ಶೋಧ, ಥ್ರೋ ಬಾಲ್ ಹಾಗೂ ಕ್ರಿಕೆಟ್ ನಡೆಯಿತು.

ಜಾನಪದ ನೃತ್ಯ ಸ್ಪರ್ಧೆಯಲ್ಲಿ ಕುಶಾಲನಗರ ಫಾತಿಮ ಪ್ರೌಢ ಶಾಲೆ ಪ್ರಥಮ, ದೇವರಪುರ ರಾಜರಾಜೇಶ್ವರಿ ಪ್ರೌಢ ಶಾಲೆ ದ್ವಿತೀಯ, ಟಿ.ಶೆಟ್ಟಿಗೇರಿ ರೂಟ್ಸ್ ತೃತೀಯ ಸ್ಥಾನ ಪಡೆದುಕೊಂಡಿತು.

ರಸಪ್ರಶ್ನೆ ಸ್ಪರ್ಧೆಯಲ್ಲಿ ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆ ಪ್ರಥಮ, ಪಾಲಿಬೆಟ್ಟ ಲೂಡ್ರ್ಸ್ ಪ್ರೌಢ ಶಾಲೆ ದ್ವಿತೀಯ, ಕಳತ್ಮಾಡು ಲಯನ್ಸ್ ಪ್ರೌಢ ಶಾಲೆ ತೃತೀಯ, ನಿಧಿಶೋಧ ಸ್ಪರ್ಧೆಯಲ್ಲಿ ಪೊನ್ನಂಪೇಟೆ ಸರ್ಕಾರಿ ಪ್ರೌಢ ಶಾಲೆ ಪ್ರಥಮ, ಕಳತ್ಮಾಡು ಲಯನ್ಸ್ ಪ್ರೌಢ ಶಾಲೆ ದ್ವಿತೀಯ, ಬಾಲಕಿಯರಿಗಾಗಿ ನಡೆದ ಥ್ರೋಬಾಲ್ ನಲ್ಲಿ ಅರ್ವತೊಕ್ಲು ಸರ್ವದೈವತಾ ಶಾಲೆ ಪ್ರಥಮ, ಕುಮಟೂರು ಜೆ.ಸಿ. ಪ್ರೌಢಶಾಲೆ ದ್ವಿತೀಯ, ಕ್ರಿಕೆಟ್‍ನಲ್ಲಿ ಸರ್ವದೈವತಾ ಶಾಲೆಯ ದರ್ಶಿತ ಉತ್ತಮ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡರು.

ಬಾಲಕರಿಗಾಗಿ ನಡೆದ ಕ್ರಿಕೆಟ್‍ನಲ್ಲಿ ಟಿ. ಶೆಟ್ಟಿಗೇರಿ ರೂಟ್ಸ್ ಪ್ರೌಢ ಶಾಲೆ ಪ್ರಥಮ, ಅತ್ತೂರು ನ್ಯಾಷನಲ್ ಅಕಾಡಮಿ ಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡಿತು. ಕ್ರಿಕೆಟ್‍ನಲ್ಲಿ ರೂಟ್ಸ್ ಶಾಲೆಯ ಗೌತಮ್ ಉತ್ತಮ ಆಟಗಾರ ಪ್ರಶಸ್ತಿ, ಅರುಣ್ ಸರಣಿ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು.

ಪಿಡಬ್ಲೂಡಿ ಜೂನಿಯರ್ ಇಂಜಿನಿಯರ್ ಸಣ್ಣುವಂಡ ನವೀನ್ ಪಾರಿತೋಷಕಗಳ ಅನಾವರಣ ಮಾಡಿದರು. ಬಹುಮಾನ ವಿತರಣೆಯಲ್ಲಿ ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ.ಎ.ಸಿ. ಗಣಪತಿ, ಕಾರ್ಯದರ್ಶಿ ಕೆ.ಜಿ. ಉತ್ತಪ್ಪ, ದಾನಿಗಳಾದ ಸಿ.ಎಂ. ಶರತ್ ಹಾಗೂ ಕೆ.ಪಿ.ಧರ್ಮಜ, ಜನ ಜಾಗೃತಿ ವೇದಿಕೆ ಅಧ್ಯಕ್ಷ ಬಾನಂಗಡ ಅರುಣ ಬಹುಮಾನ ವಿತರಿಸಿದರು. ವಸುಂಧರ ಪ್ರಾರ್ಥಿಸಿದರು, ಎಂ.ಕೆ. ಪದ್ಮ ಸ್ವಾಗತಿಸಿದರು.

Translate »