ಕುಟ್ಟಂದಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರ ಕೊಲೆ ಪ್ರಕರಣ: ಆರೋಪಿ ದೋಷ ಮುಕ್ತ
ಕೊಡಗು

ಕುಟ್ಟಂದಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರ ಕೊಲೆ ಪ್ರಕರಣ: ಆರೋಪಿ ದೋಷ ಮುಕ್ತ

December 5, 2018

ವಿರಾಜಪೇಟೆ: ಮೂರು ವರ್ಷಗಳ ಹಿಂದೆ ಕುಟ್ಟಂದಿ ಗ್ರಾಮದಲ್ಲಿ ನಡೆದ ಇಲ್ಲಿನ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಚೇರಂಡ ಸಾಬು ನಾಣಯ್ಯ ಅವರ ಕೊಲೆಗೆ ಸಂಬಂಧಿಸಿ ದಂತೆ ಅವರ ಸಂಬಂಧಿಕ ಆರೋಪಿ ಚೇರಂಡ ಮೋಹನ್ ಎಂಬಾತನನ್ನು ಎರಡನೇ ಜಿಲ್ಲಾ ಮತ್ತು ಅಡಿಷನಲ್ ಸೆಷನ್ಸ್ ನ್ಯಾಯಾಧೀಶರಾದ ಬಿ.ಜಿ.ರಮಾ ದೋಷ ಮುಕ್ತನೆಂದು ತೀರ್ಪು ನೀಡಿ ಕೊಲೆ ಆರೋಪದಿಂದ ಬಿಡುಗಡೆಗೊಳಿಸಿದ್ದಾರೆ.

ದಿನಾಂಕ 7-9-2015 ರಂದು ಬೆಳಗ್ಗೆ ಸಾಬು ನಾಣಯ್ಯ ಅವರು ಎಂದಿನಂತೆ ಕಾಫಿ ತೋಟಕ್ಕೆ ಸ್ಕೂಟರ್‍ನಲ್ಲಿ ಹೋಗುತ್ತಿದ್ದಾಗ ಎದುರು ಬದಿಯಿಂದ ಬಂದ ಸಾಬು ನಾಣಯ್ಯ ಅವರ ಸಹೋದರನ ಮಗ ಚೇರಂಡ ಮೋಹನ್ ಸ್ಕೂಟರ್‍ನ್ನು ಅಡ್ಡಗಟ್ಟಿ, ಕೋವಿಯಿಂದ ನೇರವಾಗಿ ತಲೆ ಹಾಗೂ ಮುಖದ ಭಾಗಕ್ಕೆ ಗುಂಡು ಹೊಡೆದು ಕೊಲೆ ಮಾಡಿದನೆಂದು ಆರೋಪಿಸಿ ಗ್ರಾಮಾಂತರ ಪೊಲೀಸರು ಮೋಹನ್ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಸಾಬೀತು ಪಡಿಸುವಲ್ಲಿ ಪೊಲೀಸರು ವಿಫಲರಾದ ಹಿನ್ನೆಲೆಯಲ್ಲಿ ಮೋಹನನ್ನು ದೋಷ ಮುಕ್ತನೆಂದು ತೀರ್ಪು ನೀಡಿದ್ದಾರೆ.

2015 ರಲ್ಲಿ ಚೇರಂಡ ಸಾಬು ನಾಣಯ್ಯ ವಿರಾಜಪೇಟೆಯ ಪಿ.ಎಲ್.ಡಿ ಬ್ಯಾಂಕ್‍ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಆರೋಪಿ ಪರ ವಕೀಲ ಬಿ.ಆರ್.ಶೆಟ್ಟಿ ವಾದಿಸಿದ್ದರು.

Translate »