ಕುಶಾಲನಗರ: ಸಮೀಪದ ಕೂಡಿಗೆಯ ಹಳೆಯ ಸೇತುವೆ ಮೇಲಿಂದ ಕೆಳಕ್ಕೆ ಬಿದ್ದು ಅವಿವಾಹಿತ ಕಿರಣ (40) ಎಂಬಾತ ಮೃತಪಟ್ಟಿರುವ ಘಟನೆ ನಡೆದಿದೆ.
ಕಿರಣ್ ಮೂರ್ಚೆ ರೋಗಿಯಾಗಿದ್ದು, ಸೋಮವಾರ ಕೂಡ ರೋಗ ಕಾಣಿಸಿಕೊಂಡು ನೆಲ ಕ್ಕುರುಳಿದ ಈತನನ್ನು ಸಾರ್ವಜನಿಕರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಕಿರಣ್ ಮನೆಗೆ ಹೋಗುತ್ತಿದ್ದ ವೇಳೆ ರಾತ್ರಿ 8 ಗಂಟೆ ವೇಳೆ ಸೇತುವೆ ಮೇಲಿಂದ ಬಿದ್ದು ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತಗೊಂಡಿದೆ. ಮಂಗಳವಾರ ಬೆಳಗ್ಗೆ ಸೇತುವೆ ಕೆಳಗೆ ಈತನ ಮೃತದೇಹ ಪತ್ತೆಯಾಗಿದೆ. ಪೆÇೀಷಕರಿಲ್ಲದ ಈತ ಅಲ್ಲಲ್ಲಿ ಕೂಲಿ ಕೆಲಸ ಮಾಡಿಕೊಂಡು ಸಿಕ್ಕ ಸ್ಥಳಗಳಲ್ಲಿ ತಂಗುತ್ತಿದ್ದ ಎನ್ನಲಾಗಿದೆ. ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ.