ಧರ್ಮದ ಸದುಪಯೋಗಕ್ಕಿಂತ ದುರುಪಯೋಗವೇ ಹೆಚ್ಚು
ಕೊಡಗು

ಧರ್ಮದ ಸದುಪಯೋಗಕ್ಕಿಂತ ದುರುಪಯೋಗವೇ ಹೆಚ್ಚು

December 5, 2018

ವಿರಾಜಪೇಟೆ: ಪ್ರವಾದಿ ಮಹ ಮ್ಮದ್ ಅವರ ಜೀವನ ಸಕಲರಿಗೂ ಮಾದ ರಿಯಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಶಾಖೆಯ ಕಾರ್ಯ ದರ್ಶಿ ಕೆ.ಪಿ.ಮುಹಮ್ಮದ್ ಇಸ್ಹಾಕ್ ಹೇಳಿದ್ದಾರೆ.

ಅವರು ವಿರಾಜಪೇಟೆಗೆ ಸಮೀಪದ ಅರ ಮೇರಿಯ ಶ್ರೀ ಕಳಂಚೇರಿ ಮಠದಲ್ಲಿ ಹೊಂಬೆ ಳಕು ಮಾಸಿಕ ತತ್ವ ಚಿಂತನ ಗೋಷ್ಠಿಯ 183ನೇ ಕಿರಣದಲ್ಲಿ “ಪ್ರವಾದಿ ಮುಹಮ್ಮದ್ (ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ” ಎಂಬ ವಿಷಯದಲ್ಲಿ ಉಪನ್ಯಾಸ ನೀಡುತ್ತಿದ್ದರು.

“ಧರ್ಮವನ್ನು ಸದುಪಯೋಗಪಡಿಸು ಕೊಳ್ಳುವುದಕ್ಕಿಂತ ಹೆಚ್ಚಾಗಿ ದುರುಪಯೋಗ ಪಡಿಸುವವರ ಸಂಖ್ಯೆ ವೃದ್ಧಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಅಪ್ಪಟ ಧರ್ಮಾನು ಯಾಯಿಗಳಿಂದ ಸಮಾಜಕ್ಕೆ ಎಂದೂ ಹಾನಿ ಉಂಟಾಗುವುದಿಲ್ಲ. ದೇವರ ಮಾರ್ಗದರ್ಶ ನಕ್ಕೆ ಪ್ರವಾದಿಗಳ ಅವಲಂಬನೆ ಅತಿ ಅಗತ್ಯ. ಪ್ರಸ್ತುತ ಕೋಮುವಾದದಿಂದ ಧರ್ಮದ ಮೌಲ್ಯಗಳು ಕುಸಿತಗೊಳ್ಳುತ್ತಿದೆ. ಕೋಮು ವಾದದಿಂದ ಧರ್ಮವನ್ನು ರಕ್ಷಿಸಲು ಸಾಧ್ಯ ವಿಲ್ಲ. ಪ್ರವಾದಿ ಮಹಮ್ಮದ್(ಸ)ರವರ ಜೀವನವು ಎಲ್ಲಾ ರೀತಿಯ ಪವಾಡಗಳಿಂ ದಲೂ ಮುಕ್ತವಾಗಿತ್ತು. ಅವರು ಪವಾಡ ಪುರುಷರಾಗಲೀ ಕೇವಲ ಸಮಾಜ ಸುಧಾ ರಕರಾಗಲೀ ಆಗಿರಲಿಲ್ಲ. ಬದಲಾಗಿ ಅವರು ದೇವನ ದಿವ್ಯವಾಣಿ ಲಭಿಸಿದ ಪ್ರವಾದಿಯಾ ಗಿದ್ದರು. ಯಶಸ್ಸಿನ ಜೀವನ ಬಯಸುವ ಪ್ರತಿಯೊಬ್ಬನೂ ಪ್ರವಾದಿ(ಸ) ಅವರ ಜೀವನ, ಶಿಕ್ಷಣಗಳಿಂದ ಸ್ಫೂರ್ತಿ ಮತ್ತು ಮಾರ್ಗ ದರ್ಶನ ಪಡೆಯಬಹುದಾಗಿದೆ ಎಂದರು.
ನಿವೃತ್ತ ಮುಖ್ಯಶಿಕ್ಷಕ ಮತ್ತು ಯೋಗ ಸಂಪನ್ಮೂಲ ವ್ಯಕ್ತಿ ಪಿ.ಎ.ಲಕ್ಷ್ಮಿನಾರಾ ಯಣ ಕಾರ್ಯಕ್ರಮವನ್ನು ಉದ್ಘಾಟಿಸಿ ದರು.

ನಂತರ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿಯು ತನ್ನ ಆರೋಗ್ಯ ಮತ್ತು ಪ್ರಕೃತಿಯ ಮೇಲ್ವಿಚಾರಕನಾಗಿದ್ದು. ಇತರ ಜೀವಿಗಳೊಂದಿಗೆ ಸಹಬಾಳ್ವೆಯನ್ನು ನಡೆಸ ಬೇಕು ಎಂಬುದು ಪ್ರವಾದಿಯವರ ಶಿಕ್ಷಣ ವಾಗಿದೆ. ವ್ಯಕ್ತಿಯು ತನ್ನ ಪ್ರಕೃತಿಯ ಬಗ್ಗೆ ದೇವನ ಮುಂದೆ ಪ್ರಶ್ನಿಸಲ್ಪಡುತ್ತಾನೆ ಎಂಬುದು ಅವರ ಪಾಠವಾಗಿದೆ. ಪ್ರಕೃತಿಯ ಮೇಲೆ ದೌರ್ಜನ್ಯ ಎಸೆಗಬೇಡಿ ಎಂಬುದನ್ನು ಪ್ರವಾ ದಿಯವರು ಕಲಿಸಿದರು. ಓರ್ವ ಆಡಳಿತ ಗಾರನಿಂದ ಹಿಡಿದು ಸಾಮಾನ್ಯ ಪ್ರಜೆಗೂ ಅನುಕರಣಾರ್ಹ ಬದುಕು ಅವರದ್ದಾ ಗಿತ್ತು. ಒಂದು ಸಂಪೂರ್ಣ ನಾಗರಿಕತೆಯ ಆಧುನಿಕ ಜೀವನದ ಸಂಪೂರ್ಣ ವಿಜಯ ಸೂತ್ರಗಳು ನಮಗೆ ಪ್ರವಾದಿಗಳ ಜೀವನದಲ್ಲಿ ಲಭಿಸುತ್ತದೆ ಎಂದರು.

ದಿವ್ಯ ಸಾನಿದ್ಯವನ್ನು ವಹಿಸಿ ಆಶೀರ್ವ ಚನ ನೀಡಿದ ಮಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಧರ್ಮ ಗಳು ಶಾಂತಿ ಮತ್ತು ನೆಮ್ಮದಿಯ ಬದು ಕನ್ನು ಕಲಿಸುತ್ತದೆ. ಆದರೆ ಆಧುನಿಕ ಮನು ಷ್ಯರು ತಮ್ಮ ಹೊಣೆಗಾರಿಕೆಯನ್ನು ಅರಿಯದೆ ಇತರರ ಹಕ್ಕುಗಳನ್ನು ಕಸಿಯುವುದರಿಂದ ಸಮಸ್ಯೆಗಳು ಉದ್ಭವಿಸುತ್ತದೆ ಎಂದರು. ಜಮಾ ಅತೆ ಇಸ್ಲಾಮೀ ಹಿಂದ್ ರಾಜ್ಯ ವ್ಯಾಪಕ ವಾಗಿ ನಡೆಸುತ್ತಿರುವ “ಪ್ರವಾದಿ ಮಹಮ್ಮದ್ (ಸ)ಮಾನವಕುಲದ ಶ್ರೇಷ್ಠ ಮಾರ್ಗದರ್ಶಕ” ಎಂಬ ಅಭಿಯಾನದ ಸಮಾರೋಪದ ಅಂಗವಾಗಿ ಕಾರ್ಯಕ್ರಮ ಏರ್ಪಾಡಾಗಿತ್ತು. ವೈಲಾಶ್ ಕೊಡಗು ಹಾಗೂ ಹೆಚ್.ಆರ್. ಲೋಕೇಶ್ ಸ್ವರಚಿತ ಕವನವನ್ನು ವಾಚಿಸಿ ದರು. ಪಿ.ಕೆ.ಅಬ್ದುಲ್ ರೆಹೆಮಾನ್ ಸ್ವಾಗತಿಸಿ ದರು. ಕೆ.ಟಿ.ಬಷೀರ್ ಧನ್ಯವಾದವಿತ್ತರು.

Translate »