ಜಮೀನನ್ನು ನೇರ ಖರೀದಿಸಿ ಪರಿಹಾರ ನೀಡಲು ಒತ್ತಾಯಿಸಿ ರೈತ ಸಂಘ ಪ್ರತಿಭಟನೆ
ಹಾಸನ

ಜಮೀನನ್ನು ನೇರ ಖರೀದಿಸಿ ಪರಿಹಾರ ನೀಡಲು ಒತ್ತಾಯಿಸಿ ರೈತ ಸಂಘ ಪ್ರತಿಭಟನೆ

December 5, 2018

ಹಾಸನ:  ಆಲೂರು, ಬೇಲೂರು, ಅರಸೀಕೆರೆ ಭಾಗದ ಜಮೀನನ್ನು ನೇರ ಖರೀದಿಸಿ, ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ನಗರದಲ್ಲಿ ಮಂಗಳವಾರ ರಾಜ್ಯ ರೈತ ಸಂಘ, ಎತ್ತಿನಹೊಳೆ ಸಂತ್ರಸ್ತರ ಸಮಿತಿ ಹಾಗೂ ಭಾರತೀಯ ಕಿಸಾನ್ ಸಂಘದಿಂದ ಪ್ರತಿಭಟನೆ ನಡೆಯಿತು.

ಹೇಮಾವತಿ ಪ್ರತಿಮೆಯ ಮುಂಭಾಗ ಸಮಾವೇಶಗೊಂಡ ಪ್ರತಿಭಟನಾಕಾರರು ಹಾಗೂ ರೈತರು, ಅಲ್ಲಿಂದ ಎನ್‍ಆರ್ ವೃತ್ತ, ಬಿ.ಎಂ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ದರು. ಜಮೀನು ಖರೀದಿಸಿ ಪರಿಹಾರ ನೀಡು ವಂತೆ ಫೋಷಣೆ ಕೂಗಿದರು. ಬಳಿಕ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಸಕಲೇಶಪುರ ತಾಲೂಕಿನಲ್ಲಿ ಜಮೀನು ಕಳೆದುಕೊಂಡ ರೈತರಿಗೆ ಸರ್ಕಾರ ನೇರ ಖರೀದಿ ಮಾಡಿ ಪರಿಹಾರ ನೀಡುವ ಕೆಲಸ ಮಾಡಿದ್ದಾರೆ. ಉಳಿದ ಆಲೂರು, ಬೇಲೂರು, ಅರಸೀಕೆರೆ ಭಾಗದ ಜಮೀನನ್ನು ಕೂಡ ಅದೇ ರೀತಿ ನೇರ ಖರೀದಿಸಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಬೆಳೆ ಬೆಳೆಯುವ ಭೂಮಿ ಆಗಿರುವುದರಿಂದ ಮೂರು ಪಟ್ಟು ಹೆಚ್ಚಾಗಿ ಭೂಮಿಗೆ ಪರಿಹಾರ ನೀಡಬೇಕು. ಮತ್ತು ಗುತ್ತಿಗೆದಾರರಿಗೆ ಸಾವಿ ರಾರರು ಕೋಟಿ ರೂ.ಗಳನ್ನು ನೀಡಿದರೆ. ಆದರೆ, ಜಮೀನು ಕಳೆದುಕೊಂಡ ರೈತರಿಗೆ ಕಡಿಮೆ ಪರಿಹಾರ ನೀಡುವುದು ಸರಿಯಲ್ಲ. ಜಮೀನು ಕಳೆದು ಕೊಂಡು ನಿರ್ಗತಿಕರಾಗಿರುವ ಅನ್ನದಾತರಿಗೆ ಹಾಗೂ 25 ರಿಂದ 30 ವರ್ಷ ಗಳಿಂದ ಬಗರಹುಕಂ ಸಾಗುವಳಿ ಮಾಡು ತ್ತಿರುವ ರೈತರುಗಳಿಗೆ ಇದುವರೆಗೂ ಸಾಗು ವಳಿ ಚೀಟಿ ನೀಡಿರುವುದಿಲ್ಲ. ಅಂತಹ ರೈತರಿಗೆ ಜಮೀನು ದಾಖಲಾತಿ ಸರಿಪಡಿಸಿ ಪರಿ ಹಾರ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಕಣ ಗಾಲು ಮೂರ್ತಿ, ಆಲೂರು ತಾಲೂಕು ಅಧ್ಯಕ್ಷ ಎಂ.ಕೆ. ಮಲ್ಲೇಶ್, ಕಾರ್ಯದರ್ಶಿ ಪುಟ್ಟರಾಜು, ಮುಖಂಡರಾದ ಕಾಂತ ರಾಜು, ಚೆಲುವೆಗೌಡ, ದೇವರಾಜೇಗೌಡ, ಲಕ್ಷ್ಮಣ್, ಸಿದ್ದಪ್ಪ ಇತರರು ಪಾಲ್ಗೊಂಡಿದ್ದರು.

Translate »