ಮಂಡ್ಯ, ಜು.13- ಅಕ್ರಮ ಗಣಿ ಗಾರಿಕೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಲೋಪ ಎದ್ದು ಕಾಣುತ್ತಿದ್ದು, ಮಾಹಿತಿ ನೀಡು ವಂತೆ ಸೂಚಿಸಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಗೆ ಹಲವು ಬಾರಿ ದಂಡ ಹಾಕಿ ದ್ದಾರೆ. ಸುಮಾರು 1200 ಕೋಟಿ ರೂ. ರಾಜಧನ ಬರಬೇಕಿದ್ದು, ದಂಡ ಕಟ್ಟುವಂತೆ ನೋಟಿಸ್ ನೀಡಿದ್ದರೂ ಇದುವರೆಗೂ ಯಾರೂ ಕಟ್ಟಿಲ್ಲ. ಅಧಿಕಾರಿಗಳು ಸಹ ಸುಮ್ಮನಾಗಿದ್ದಾರೆ…
ಮಂಡ್ಯ ಜಿಲ್ಲೆ ರೈತರ ಹಿತಕ್ಕೆ ನಿರಂತರ ಹೋರಾಟ
July 14, 2021ಮದ್ದೂರು, ಜು.13- ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ರೈತರಿಗೆ ಕೊಟ್ಟ ಮಾತಿನಂತೆ ಅಕ್ರಮ ಗಣಿಗಾರಿಕೆ ತಡೆ, ಮೈಷುಗರ್ ಪುನರ್ ಆರಂಭ, ಹಾಲು ಉತ್ಪಾದಕರ ಹಿತ ಕಾಯಲು ತಮ್ಮ ಹೋರಾಟಗಳು ನಿರಂತರವೆಂದು ಸಂಸದೆ ಸುಮಲತಾಅಂಬರೀಷ್ ತಿಳಿಸಿದರು. ಮದ್ದೂರು ತಾಲೂಕಿನ ಗೆಜ್ಜಲಗೆರೆ ಮನ್‍ಮುಲ್ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ಹಾಲು-ನೀರು ಮಿಶ್ರಿತ ಪ್ರಕರಣ ಹಾಗೂ ಮನ್‍ಮುಲ್ ಅವ್ಯವಹಾರ ಸಿಬಿಐ ತನಿಖೆಗೆ ವಹಿಸುವ ಸಂಬಂಧÀ ಆಯೋ ಜಿಸಿದ್ದ ಸಭೆಯಲ್ಲಿ…
ಜಿಪಂ, ತಾಪಂ ಚುನಾವಣೆ: ಅಭ್ಯರ್ಥಿಗಳ ಆಯ್ಕೆಗೆ ಸಮಿತಿ ರಚನೆ
July 13, 2021ಕೆ.ಆರ್.ಪೇಟೆ, ಜು.12- ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆ ಕಾರ್ಯ ಕರ್ತರ ಸ್ವಾಭಿಮಾನದ ಚುನಾವಣೆಯಾಗ ಬೇಕು. ತಾಲೂಕಿನ ಎಲ್ಲಾ 7 ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಸೂಕ್ತ ಅಭ್ಯರ್ಥಿಗಳ ಆಯ್ಕೆಗೆ 15 ಜನರ ಆಯ್ಕೆ ಸಮಿತಿ ರಚನೆ ಮಾಡ ಲಾಗುವುದು. ಸಮಿತಿಯು ಆಯ್ಕೆ ಮಾಡಿದ ಅಭ್ಯರ್ಥಿಗಳೇ ಚುನಾವಣಾ ಕಣದಲ್ಲಿರು ತ್ತಾರೆ. ಸ್ಪರ್ಧಿಸಲಿಚ್ಚಿಸುವ ಆಕಾಂಕ್ಷಿಗಳು ತಮ್ಮ ಹೆಸರನ್ನು ಪಕ್ಷದ ಅಧ್ಯಕ್ಷರುಗಳಿಗೆ ಕೂಡಲೇ ತಿಳಿಸುವಂತೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹೇಳಿದರು. ಅವರು ಪಟ್ಟಣದ ಕಾಂಗ್ರೆಸ್ ಕಚೇರಿ ಯಲ್ಲಿ ಮುಂಬರುವ ಜಿಲ್ಲಾ ಪಂಚಾಯತ್…
ಜನಸಂಖ್ಯೆ ಹೆಚ್ಚಳದಿಂದ ಸಮಸ್ಯೆ: ನಿಯಂತ್ರಣ ಅಗತ್ಯ
July 13, 2021ಮಂಡ್ಯ, ಜು.12- ಜನಸಂಖ್ಯೆ ಹೆಚ್ಚಳದಿಂದ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಆದ್ದ ರಿಂದ ಜನಸಂಖ್ಯೆ ನಿಯಂತ್ರಣ ಅಗತ್ಯ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಧನಂಜಯ ಹೇಳಿದರು. ಇಂದು ಡಿಎಚ್‍ಒ ಕಚೇರಿಯ ಮುಂಭಾಗ ದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯ ಅಂಗವಾಗಿ ನಡೆದ ಜಾಥಾ ದಲ್ಲಿ ಮಾತ ನಾಡಿದ ಅವರು, ಜುಲೈ 12 ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಇಡೀ ಪ್ರಪಂಚದಾ ದ್ಯಂತ ಆಚರಿಸಲಾಗುತ್ತದೆ. ಭಾರತ ದೇಶ ವಿಶ್ವದಲ್ಲೆ ಅತಿ ಹೆಚ್ಚು ಜನಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ಪ್ರತಿಯೊಬ್ಬರು ಜನಸಂಖ್ಯಾ ನಿಯಂತ್ರಣ ಮಾಡಿ ನಮ್ಮ ದೈನಂದಿನ…
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು
July 13, 2021ಮಂಡ್ಯ, ಜು.12- ಗಣಿಗಾರಿಕೆ ನಡೆಸುವ ಪ್ರದೇಶಕ್ಕೆ ಅಧಿಕಾರಿಗಳು ಭೇಟಿ ಕೊಡುವುದೇ ಇಲ್ಲ. ಎಲ್ಲೆಲ್ಲಿ ಎಷ್ಟು ಪ್ರಮಾಣದಲ್ಲಿ ಕಲ್ಲು ತೆಗೆಯುತ್ತಿದ್ದಾರೆ ಎನ್ನುವ ಮಾಹಿತಿಯೇ ಇಲ್ಲ. ಕೆಲ ಅಧಿಕಾರಿಗಳ ಶಾಮೀಲಾತಿ ಹಾಗೂ ನಿರ್ಲಕ್ಷ್ಯದಿಂದಲೇ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಡ್ಯಾಂ ಸುತ್ತ ಗಣಿಗಾರಿಕೆ ಇದೆ. ಅಲ್ಲಿ ಬ್ಲಾಸ್ಟ್ ಮಾಡಿದಾಗ ಸುತ್ತಲ ಪ್ರದೇ ಶದ ಜನರಿಗೆ ಗೊತ್ತಾಗುತ್ತೆ. ಆದರೆ ಅಧಿಕಾರಿ ಗಳಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ಇದು ಬೇಲಿಯೆ ಎದ್ದು ಹೊಲ ಮೇಯ್ದ ರೀತಿ ಯಂತಾಗಿದೆ ಎಂದು ಮಂಡ್ಯ ಜಿಲ್ಲಾ…
ಜಿ.ಮಾದೇಗೌಡರ ಆರೋಗ್ಯ ಸುಧಾರಣೆಗೆ ವಿಶೇಷ ಪೂಜೆ
July 12, 2021ಭಾರತೀನಗರ, ಜು.11(ಅ.ಸತೀಶ್)- ಇಲ್ಲಿಗೆ ಸಮೀಪದ ಚಿಕ್ಕರಸಿನಕೆರೆ ಗ್ರಾಮದ ಶ್ರೀಕಾಲ ಭೈರವೇಶ್ವರ ದೇವ ಸ್ಥಾನದಲ್ಲಿ ಜಿ.ಮಾದೇ ಗೌಡರು ಬೇಗ ಗುಣ ಮುಖರಾಗಿ ಹೊರ ಬರಲಿ ಎಂದು ಅಭಿಮಾನಿ ಗಳು ವಿಶೇಷ ಪೂಜೆ ಸಲ್ಲಿಸಿದರು. ಭಾರತೀನಗರದ ಜಿ.ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಿ.ಮಾದೇಗೌಡರ ಆರೋಗ್ಯ ಚೇತರಿಕೆ ಕಂಡು ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬರಲಿ ಎಂದು ರಂಗಭೂಮಿ ಕಲಾವಿದರ ಸಂಘದ ಹೋಬಳಿ ಅಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡರ ನೇತೃತ್ವದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿ.ಮಾದೇಗೌಡರು ನಾಡಿಗೆ…
ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ಬೀಳುತ್ತಾ ಶಾಶ್ವತ ಬ್ರೇಕ್..?
July 12, 2021ಮಂಡ್ಯ, ಜು.11- ಸದ್ಯ ಒಂದು ವಾರದಿಂದ ಸಕ್ಕರೆ ನಾಡು ಮಂಡ್ಯ ಜಿಲ್ಲೆ ಅಕ್ರಮ ಗಣಿಗಾರಿಕೆ, ಕೆಆರ್‍ಎಸ್ ಬಿರುಕು ವಿಚಾರದಲ್ಲಿ ರಾಜ್ಯ ವ್ಯಾಪಿ ಸುದ್ದಿಯಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಅಣೆಕಟ್ಟೆ ಬಿರುಕು ಬಿಟ್ಟಿದೆ ಎಂಬ ಸುಮಲತಾ ಹೇಳಿಕೆಯಿಂದ ಹಿಡಿದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಪ್ರತಿ ಹೇಳಿಕೆ, ಜೆಡಿಎಸ್ ಶಾಸಕರಿಂದ ಸುಮಲತಾಗೆ ತಿರುಗೇಟು ಸೇರಿದಂತೆ ದಿ.ಅಂಬರೀಷ್ ಅವರನ್ನು ಈ ವಿಚಾರಕ್ಕೆ ಎಳೆದು ತರುವವರೆಗೂ ನಡೆದಿದ್ದ ಮಾತಿನ ಭರಾಟೆಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಆದರೆ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಿಯೇ…
ಅನ್‍ಲಾಕ್ ನಂತರ ಜನರಲ್ಲಿ ನಿರ್ಲಕ್ಷ್ಯ ಹೆಚ್ಚಾಗಿದೆ: ಶಾಸಕ ಸುರೇಶ್‍ಗೌಡ
July 11, 2021ನಾಗಮಂಗಲ, ಜು.10- ಕೊರೊನಾ ಮೂರನೇ ಅಲೆ ತೀವ್ರತೆ ಬಗ್ಗೆ ತಜ್ಞರು ಎಚ್ಚರಿಸಿದ್ದರೂ ಜನರ ಜೀವನ ನಿರ್ವಹಣೆ ದೃಷ್ಟಿಯಿಂದ ಸರ್ಕಾರ ರಾಜ್ಯವನ್ನು ಅನ್‍ಲಾಕ್ ಮಾಡಿದ್ದು, ಜನರು ನಿರ್ಲಕ್ಷ್ಯ ವಹಿಸದೆ ಹೆಚ್ಚು ಜಾಗೃತ ರಾಗಿರಬೇಕು ಎಂದು ಶಾಸಕ ಸುರೇಶ್ ಗೌಡ ಮನವಿ ಮಾಡಿದರು. ತಾಲೂಕಿನ ಬೆಳ್ಳೂರು, ಹೊಣಕೆರೆ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ, ಗ್ರಾಮಸ್ಥರಿಗೆ ಕೊರೊನಾ ಕುರಿತು ಜಾಗೃತಿ ಮೂಡಿಸಿದರು. ಕೊರೊನಾ ಗುಣಲಕ್ಷಣಗಳು ಕಂಡು ಬಂದರೆ ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್‍ಗಳಲ್ಲಿ…
ಡಾ.ಜಿ.ಮಾದೇಗೌಡರು ಆದರ್ಶ ಪುರುಷ, ಛಲವಾದಿ: ಹಂಸಲೇಖ
July 11, 2021ಭಾರತೀನಗರ,ಜು.10(ಅ.ಸತೀಶ್)-ಡಾ.ಜಿ.ಮಾದೇಗೌಡ ಅವರು ಆದರ್ಶ ಪುರುಷ, ಛಲವಾದಿ, ಅಪರೂಪದ ರಾಜಕಾರಣಿ ಎಂದು ಖ್ಯಾತ ಸಂಗೀತ ನಿರ್ದೇ ಶಕ ಹಂಸಲೇಖ ಬಣ್ಣಿಸಿದರು. ಭಾರತೀನಗರದ ಬಿಇಟಿ ಕುವೆಂಪು ಸಭಾಂಗಣದಲ್ಲಿ ಡಾ.ಜಿ.ಮಾದೇಗೌಡ ಪ್ರತಿಷ್ಠಾನದಿಂದ 21ನೇ ವರ್ಷದ ರಾಜ್ಯ ಮಟ್ಟದ ಡಾ.ಜಿ.ಮಾದೇಗೌಡ ಸಮಾಜ ಸೇವಾ ಮತ್ತು ಸಾವಯವ ಕೃಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು, ಜಿ.ಮಾದೇಗೌಡ, ಕೆ.ವಿ.ಶಂಕರೇಗೌಡ ಇಂತಹ ಆದರ್ಶ ಪುರುಷರನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸಬೇಕು ಎಂದರು. ಜಿ.ಮಾದೇಗೌಡರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇವರಿಗೆ ದೇವರು ಆರೋಗ್ಯ ಭಾಗ್ಯ ಕರುಣಿಸಿ ಗುಣಮುಖರಾಗುವಂತೆ ನಾನು…
ಮೈಮುಟ್ಟಿದ ಅಭಿಮಾನಿ ಕೆನ್ನೆಗೆ ಬಾರಿಸಿದ ಡಿ.ಕೆ.ಶಿವಕುಮಾರ್
July 11, 2021ಮಂಡ್ಯ, ಜು.10-ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ತಮ್ಮ ಮೈ ಮುಟ್ಟಿದ ಅಭಿಮಾನಿಯ ಕೆನ್ನೆಗೆ ಬಾರಿಸಿದ ಘಟನೆ ಭಾರತೀನಗರದ ಜಿ.ಮಾದೇಗೌಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆವರಣದಲ್ಲಿ ಶುಕ್ರ ವಾರ ನಡೆದಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜೆಡಿಎಸ್ ಕಾರ್ಯಕರ್ತನಾಗಿದ್ದು, ಶಾಸಕ ಡಿ.ಸಿ.ತಮ್ಮಣ್ಣ ಅವರ ಕಟ್ಟಾ ಅಭಿ ಮಾನಿ ಆಗಿರುವ ತೊರೆಬೊಮ್ಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಟಿ.ಬಿ.ಉಮೇಶ್ ಅವರೇ ಡಿ.ಕೆ. ಶಿವಕುಮಾರ್ ಅವರಿಂದ ಹೊಡೆಸಿಕೊಂಡ ವರಾಗಿದ್ದಾರೆ. ಇವರು ಜೆಡಿಎಸ್ ಕಾರ್ಯ ಕರ್ತರಾದರೂ, ಡಿಕೆಶಿ ಅಭಿಮಾನಿಯಾ ಗಿದ್ದು,…