ಜಿಪಂ, ತಾಪಂ ಚುನಾವಣೆ: ಅಭ್ಯರ್ಥಿಗಳ ಆಯ್ಕೆಗೆ ಸಮಿತಿ ರಚನೆ
ಮಂಡ್ಯ

ಜಿಪಂ, ತಾಪಂ ಚುನಾವಣೆ: ಅಭ್ಯರ್ಥಿಗಳ ಆಯ್ಕೆಗೆ ಸಮಿತಿ ರಚನೆ

July 13, 2021

ಕೆ.ಆರ್.ಪೇಟೆ, ಜು.12- ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆ ಕಾರ್ಯ ಕರ್ತರ ಸ್ವಾಭಿಮಾನದ ಚುನಾವಣೆಯಾಗ ಬೇಕು. ತಾಲೂಕಿನ ಎಲ್ಲಾ 7 ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಸೂಕ್ತ ಅಭ್ಯರ್ಥಿಗಳ ಆಯ್ಕೆಗೆ 15 ಜನರ ಆಯ್ಕೆ ಸಮಿತಿ ರಚನೆ ಮಾಡ ಲಾಗುವುದು. ಸಮಿತಿಯು ಆಯ್ಕೆ ಮಾಡಿದ ಅಭ್ಯರ್ಥಿಗಳೇ ಚುನಾವಣಾ ಕಣದಲ್ಲಿರು ತ್ತಾರೆ. ಸ್ಪರ್ಧಿಸಲಿಚ್ಚಿಸುವ ಆಕಾಂಕ್ಷಿಗಳು ತಮ್ಮ ಹೆಸರನ್ನು ಪಕ್ಷದ ಅಧ್ಯಕ್ಷರುಗಳಿಗೆ ಕೂಡಲೇ ತಿಳಿಸುವಂತೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹೇಳಿದರು.

ಅವರು ಪಟ್ಟಣದ ಕಾಂಗ್ರೆಸ್ ಕಚೇರಿ ಯಲ್ಲಿ ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾ ವಣೆಯ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ಘಟಕದ ವತಿಯಿಂದ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಮುಖಂಡರೊಂದಿಗೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಮತದಾರರು ಅಭ್ಯರ್ಥಿಗಳಿಂದ ಹಣ ನಿರೀಕ್ಷಿಸದೆ ಅಭಿವೃದ್ಧಿ ನಿರೀಕ್ಷಿಸಿ ಮತ ಚಲಾ ಯಿಸುವಂತೆ ಕಾರ್ಯಕರ್ತರು ಜಾಗೃತಿ ಮೂಡಿಸಬೇಕು. ಐದು ವರ್ಷಗಳ ಕಾಲ ಉತ್ತಮ ಆಡಳಿತ ನೀಡಿದ ಸಿದ್ದರಾಮಯ್ಯ ಅವರ ಅವಧಿಯ ಕಾರ್ಯಕ್ರಮಗಳನ್ನು ಮತದಾರರಿಗೆ ತಿಳಿಸುವ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ಲೋಪಗಳನ್ನು ಜನರಿಗೆ ತಿಳಿಸಿ ಪಕ್ಷವನ್ನು ಸಂಘಟಿಸಬೇ ಕೆಂದು ಕೆ.ಬಿ.ಚಂದ್ರಶೇಖರ್ ಕರೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಶೋಷಿತ ಸಮು ದಾಯಗಳು ಮತ್ತು ಬಡಜನರ ಅಭಿವೃದ್ಧಿ ಕೇಂದ್ರೀಕರಿಸಿ ಕಾರ್ಯಯೋಜನೆಗಳನ್ನು ರೂಪಿಸಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ ಜನತೆ ಈಗ ಬಿಜೆಪಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನತೆ ಘಾಸಿಗೊಂಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಜನ ವಿರೋಧಿ ನೀತಿ ಗಳನ್ನು ಕರಪತ್ರದ ಮೂಲಕ ಪ್ರತಿಯೊಬ್ಬ ಮತದಾರನ ಮನೆ ಬಾಗಿಲಿಗೆ ತಲುಪಿ ಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡ ಲಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಬಿ.ಪ್ರಕಾಶ್ ಮಾತ ನಾಡಿ, ಈಗಿನ ಬಿಜೆಪಿ ಸರ್ಕಾರಗಳ ಲೋಪ ಗಳು ಮತ್ತು ಕಾಂಗ್ರೆಸ್ ಪಕ್ಷದ ಸಾಧನೆ ಗಳನ್ನು ಕುರಿತ ಕರಪತ್ರಗಳನ್ನು ಮುದ್ರಿಸಿ ಹಂಚುವ ಮೂಲಕ ಕಾಂಗ್ರೆಸ್ ಪಕ್ಷದತ್ತ ಮತದಾರರನ್ನು ಸೆಳೆಯಬೇಕು. ತಾಲೂಕಿನ ಯಾವುದಾದರೂ ಎರಡು ಜಿಲ್ಲಾ ಪಂಚಾ ಯತಿ ಕ್ಷೇತ್ರಗಳ ಸಂಪೂರ್ಣ ಜವಬ್ದಾರಿ ಯನ್ನು ನನಗೆ ವಹಿಸಿದರೆ ಆ ಎರಡೂ ಜಿ.ಪಂ ಕ್ಷೇತ್ರಗಳು ಮತ್ತು ಅವುಗಳ ಕ್ಷೇತ್ರ ವ್ಯಾಪ್ತಿಯ ಎಲ್ಲಾ ತಾಲೂಕು ಪಂಚಾ ಯತಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವುದಾಗಿ ಭರವಸೆ ನೀಡಿದರು.

ವಲಸಿಗರಿಗೆ ಟಿಕೆಟ್ ಬೇಡ: ವಲಸಿಗರ ಬದಲು ಸ್ಥಳೀಯರಿಗೆ ಟಿಕೆಟ್ ಕೊಡಿ, ವೈಯ ಕ್ತಿಕ ಹಿತಕ್ಕಿಂತ ಪಕ್ಷದ ಹಿತ ಮುಖ್ಯವೆಂದು ಕೆಲಸ ಮಾಡುವ ಕಾರ್ಯಕರ್ತರಿಗೆ ಪಕ್ಷದ ವೇದಿಕೆಗಳಲ್ಲಿ ಸೂಕ್ತ ಗೌರವ ನೀಡಿ. ಕಳೆದ ಜಿಪಂ ಮತ್ತು ತಾಪಂ ಹಾಗೂ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಗೆದ್ದವರು ಮತ್ತು ಸೋತವರೆಲ್ಲರನ್ನೂ ಒಗ್ಗೂಡಿಸಿ. ಟಿಕೆಟ್ ಅತೃಪ್ತರು ಪಕ್ಷ ವಿರೋಧಿ ಕೆಲಸ ಮಾಡದಂತೆ ಸೂಕ್ತ ಎಚ್ಚರಿಕೆ ನೀಡಿ. ಹಣದ ಆಮಿಷಕ್ಕೆ ಕಾಂಗ್ರೆಸ್ಸಿಗರು ಬಲಿಯಾಗುತ್ತಾ ರೆಂಬ ಆರೋಪವಿದ್ದು, ಇದನ್ನು ಸುಳ್ಳು ಮಾಡುವಂತೆ ಪಕ್ಷದ ಮುಖಂಡರು ಕೆಲಸ ಮಾಡಬೇಕು. ಚುನಾವಣೆಯಲ್ಲಿ ಸೋಲುವ ಭಯದಿಂದಲೇ ಆಡಳಿತಾರೂಢ ಬಿಜೆಪಿ ಶೇ.78 ರಷ್ಟು ಸ್ಥಾನಗಳನ್ನು ಮಹಿಳೆಯ ರಿಗೆ ಮೀಸಲಿರಿಸಿ ಚುನಾವಣೆಯಲ್ಲಿ ಪುರು ಷರ ಉತ್ಸಾಹ ಕುಂದಿಸುವ ಕೆಲಸ ಮಾಡಿದೆ. ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮಹಿಳೆಯರಿಗೆ ಅಗತ್ಯ ಶಕ್ತಿ ತುಂಬುವ ಕೆಲಸ ಮಾಡುವಂತೆ ಕಾರ್ಯಕರ್ತರು ಸಭೆಯಲ್ಲಿ ಆಗ್ರಹಿಸಿದರು.

ಕಿಕ್ಕೇರಿ ಸುರೇಶ್, ಕೆ.ಯುಐಡಿಎಫ್‍ಸಿ ನಿಗಮದ ಮಾಜಿ ರಾಜ್ಯಾಧ್ಯಕ್ಷ ಎಂ.ಡಿ. ಕೃಷ್ಣಮೂರ್ತಿ, ಜಿಪಂ ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ತಾಲೂಕು ಎಸ್‍ಸಿ ಕಾಂಗ್ರೆಸ್ ಅಧ್ಯಕ್ಷ ರಾಜಯ್ಯ, ಶಿವಣ್ಣ, ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಬಿ.ಚೇತನ ಕುಮಾರ್, ಪ್ರಸನ್ನಕುಮಾರ್, ಪುರಸಭಾ ಸದಸ್ಯರಾದ ಕೆ.ಆರ್.ರವೀಂದ್ರಬಾಬು, ಡಿ. ಪ್ರೇಮಕುಮಾರ್, ಕೆ.ಕೆ.ರಮೇಶ್, ಉಮೇಶ್, ಮುಖಂಡರಾದ ಡಾ.ರಾಮಕೃಷ್ಣೇಗೌಡ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದ ರಾಜು, ಬಸ್ತಿರಂಗಪ್ಪ, ಬದ್ರಿ, ಚೌಡೇನಹಳ್ಳಿ ದೇವರಾಜು, ಎ.ಬಿ.ಕುಮಾರ್, ಮಾಕವಳ್ಳಿ ಸುನಿಲ್, ಕುಂದನಹಳ್ಳಿ ಕುಮಾರಸ್ವಾಮಿ, ತಾಪಂ ಸದಸ್ಯೆ ವಿನುತಾ ಸುರೇಶ್, ಸಣ್ಣ ನಿಂಗೇಗೌಡ, ನಿಂಗೇಗೌಡ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.

Translate »