ಅನ್‍ಲಾಕ್ ನಂತರ ಜನರಲ್ಲಿ ನಿರ್ಲಕ್ಷ್ಯ ಹೆಚ್ಚಾಗಿದೆ: ಶಾಸಕ ಸುರೇಶ್‍ಗೌಡ
ಮಂಡ್ಯ

ಅನ್‍ಲಾಕ್ ನಂತರ ಜನರಲ್ಲಿ ನಿರ್ಲಕ್ಷ್ಯ ಹೆಚ್ಚಾಗಿದೆ: ಶಾಸಕ ಸುರೇಶ್‍ಗೌಡ

July 11, 2021

ನಾಗಮಂಗಲ, ಜು.10- ಕೊರೊನಾ ಮೂರನೇ ಅಲೆ ತೀವ್ರತೆ ಬಗ್ಗೆ ತಜ್ಞರು ಎಚ್ಚರಿಸಿದ್ದರೂ ಜನರ ಜೀವನ ನಿರ್ವಹಣೆ ದೃಷ್ಟಿಯಿಂದ ಸರ್ಕಾರ ರಾಜ್ಯವನ್ನು ಅನ್‍ಲಾಕ್ ಮಾಡಿದ್ದು, ಜನರು ನಿರ್ಲಕ್ಷ್ಯ ವಹಿಸದೆ ಹೆಚ್ಚು ಜಾಗೃತ ರಾಗಿರಬೇಕು ಎಂದು ಶಾಸಕ ಸುರೇಶ್ ಗೌಡ ಮನವಿ ಮಾಡಿದರು.
ತಾಲೂಕಿನ ಬೆಳ್ಳೂರು, ಹೊಣಕೆರೆ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ, ಗ್ರಾಮಸ್ಥರಿಗೆ ಕೊರೊನಾ ಕುರಿತು ಜಾಗೃತಿ ಮೂಡಿಸಿದರು.

ಕೊರೊನಾ ಗುಣಲಕ್ಷಣಗಳು ಕಂಡು ಬಂದರೆ ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್‍ಗಳಲ್ಲಿ ಚಿಕಿತ್ಸೆ ಪಡೆಯದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆ ನಡೆಸಿ ಕೊಳ್ಳುವ ಮೂಲಕ ಸೋಂಕು ಬೇಗ ಪತ್ತೆಹಚ್ಚಲು ಜನತೆ ಸಹಕರಿಸಬೇಕಿದೆ. ಮೊದ ಲನೇ ಅಲೆ ಹಾಗೂ ಎರಡನೇ ಅಲೆಗಳಿ ಗಿಂತಲೂ ಮೂರನೇ ಅಲೆ ತುಂಬಾ ತೀವ್ರತೆಯಿಂದ ಕೂಡಿರುವುದರಿಂದ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂಬಂತೆ ಪ್ರತಿಯೊಬ್ಬರೂ ಜಾಗೃತರಾಗಬೇಕಿದೆ. ರಾಜ್ಯಾದ್ಯಂತ ಅನ್‍ಲಾಕ್ ಮಾಡಿರುವು ದರಿಂದ ಕೊರೊನಾ ಇಲ್ಲವೆಂಬ ಮನೋ ಭಾವದಲ್ಲಿ ಜನರಿದ್ದಾರೆ. ಆದರೆ ಜನರು ಕೊರೊನಾ ನಿಯಮ ಪಾಲಿಸದಿದ್ದರೆ ಮತ್ತೆ ಲಾಕ್‍ಡೌನ್ ಮಾಡುವುದಾಗಿ ಸರ್ಕಾರ ಆಗಿಂದ್ದಾಗ್ಗೆ ಎಚ್ಚರಿಸುತ್ತಿದೆ. ಆದರೂ ಜನರು ಜಾಗೃತರಾಗದೆ ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಲ್ಲ ಎಂದರು.

ಲಸಿಕೆಯ ಮಹತ್ವ ಕುರಿತಾಗಿ ಸರ್ಕಾರ ಅಷ್ಟು ಪ್ರಚಾರ ಮಾಡುತ್ತಿದ್ದರೂ ಇದು ವರೆಗೂ ಭಯಪಟ್ಟು ಲಸಿಕೆ ಪಡೆಯದಿರು ವವರು ಇದ್ದಾರೆ. ಯಾರೊಬ್ಬರೂ ಲಸಿಕೆ ಪಡೆಯಲು ಹಿಂದೇಟು ಹಾಕದೆ ಕಡ್ಡಾಯ ವಾಗಿ ಲಸಿಕೆಯನ್ನು ಪಡೆದುಕೊಳ್ಳಬೇಕಿದೆ. ಮೂರನೇ ಅಲೆಯಲ್ಲಿ ಸಾವು-ನೋವುಗಳನ್ನು ತಡೆಯಲು ಇರುವುದು ಲಸಿಕೆಯೊಂದೇ ಮಾರ್ಗ ಎಂದರು.

ಈ ಸಂದರ್ಭ ತಟ್ಟೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಾದಿಹಳ್ಳಿ ನಾಗೇಗೌಡ, ಪಿಎಲ್‍ಡಿ ಬ್ಯಾಂಕ್ ನಿರ್ದೇ ಶಕ ನಿಂಗೇಗೌಡ, ಬೋಗಾದಿ ಗ್ರಾಪಂ ಸದಸ್ಯ ನರಸಿಂಹ, ಗ್ರಾಪಂ ಮಾಜಿ ಉಪಾಧ್ಯಕ್ಷ ದೇವರಾಜು, ಮುಖಂಡರಾದ ಕಲ್ಲೇನ ಹಳ್ಳಿ ದಿನೇಶ್ ಸೇರಿದಂತೆ ಮತ್ತಿತರಿದ್ದರು.

Translate »