ಭಾರತೀನಗರ,ಜು.10(ಅ.ಸತೀಶ್)-ಡಾ.ಜಿ.ಮಾದೇಗೌಡ ಅವರು ಆದರ್ಶ ಪುರುಷ, ಛಲವಾದಿ, ಅಪರೂಪದ ರಾಜಕಾರಣಿ ಎಂದು ಖ್ಯಾತ ಸಂಗೀತ ನಿರ್ದೇ ಶಕ ಹಂಸಲೇಖ ಬಣ್ಣಿಸಿದರು.
ಭಾರತೀನಗರದ ಬಿಇಟಿ ಕುವೆಂಪು ಸಭಾಂಗಣದಲ್ಲಿ ಡಾ.ಜಿ.ಮಾದೇಗೌಡ ಪ್ರತಿಷ್ಠಾನದಿಂದ 21ನೇ ವರ್ಷದ ರಾಜ್ಯ ಮಟ್ಟದ ಡಾ.ಜಿ.ಮಾದೇಗೌಡ ಸಮಾಜ ಸೇವಾ ಮತ್ತು ಸಾವಯವ ಕೃಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು, ಜಿ.ಮಾದೇಗೌಡ, ಕೆ.ವಿ.ಶಂಕರೇಗೌಡ ಇಂತಹ ಆದರ್ಶ ಪುರುಷರನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸಬೇಕು ಎಂದರು.
ಜಿ.ಮಾದೇಗೌಡರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇವರಿಗೆ ದೇವರು ಆರೋಗ್ಯ ಭಾಗ್ಯ ಕರುಣಿಸಿ ಗುಣಮುಖರಾಗುವಂತೆ ನಾನು ಪ್ರಾರ್ಥಿಸುತ್ತೇನೆ ಎಂದರು.
ಸಾವಯವ ಕೃಷಿಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಿವಹಳ್ಳಿ ಬೋರೇಗೌಡ, ನನ್ನ ಜಿಲ್ಲೆಯಲ್ಲಿ ಜಿ.ಮಾದೇಗೌಡ ಪ್ರತಿ ಷ್ಠಾನದಿಂದ ಅಭಿನಂದಿಸುತ್ತಿರುವುದು ನನಗೆ ದೊಡ್ಡ ಪ್ರಶಸ್ತಿ ಸಿಕ್ಕಿದಂತಾಗಿದೆ ಎಂದು ಭಾವುಕರಾದರು.
ಇದೇ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಮಧು ಜಿ.ಮಾದೇಗೌಡ, ಡಾ.ಪ್ರಕಾಶ್, ಕಸ್ತೂರಿ ಬಾ ಗಾಂಧಿಸ್ಮಾರಕ ಟ್ರಸ್ಟಿ ಪ್ರೊ.ಜಿ. ಬಿ.ಶಿವರಾಜು, ಪ್ರತಿಷ್ಠಾನದ ಅಧ್ಯಕ್ಷ ಬಿ. ಬಸವರಾಜು, ಬಿಇಟಿ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಚಂದೂಪುರ ಪಾಪಣ್ಣ, ಗುರುದೇವರಹಳ್ಳಿ ಸಿದ್ದೇಗೌಡ, ಜಯರಾಮು, ಮುದ್ದೇಗೌಡ, ಬಸವೇಗೌಡ, ಪ್ರೊ.ಮಾ. ರಾಮಕೃಷ್ಣ, ಪುಟ್ಟಸ್ವಾಮೀಗೌಡ, ಬಿ.ಎಸ್.ಬೋರೇಗೌಡ ಇತರರಿದ್ದರು.