ಅಕ್ರಮ ಗಣಿಗಾರಿಕೆಯಿಂದ 1200 ಕೋಟಿ  ರಾಜಧನದಲ್ಲಿ 1 ಕೋಟಿಯೂ ವಸೂಲಿ ಆಗಿಲ್ಲ
ಮಂಡ್ಯ

ಅಕ್ರಮ ಗಣಿಗಾರಿಕೆಯಿಂದ 1200 ಕೋಟಿ ರಾಜಧನದಲ್ಲಿ 1 ಕೋಟಿಯೂ ವಸೂಲಿ ಆಗಿಲ್ಲ

July 14, 2021

ಮಂಡ್ಯ, ಜು.13- ಅಕ್ರಮ ಗಣಿ ಗಾರಿಕೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಲೋಪ ಎದ್ದು ಕಾಣುತ್ತಿದ್ದು, ಮಾಹಿತಿ ನೀಡು ವಂತೆ ಸೂಚಿಸಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಗೆ ಹಲವು ಬಾರಿ ದಂಡ ಹಾಕಿ ದ್ದಾರೆ. ಸುಮಾರು 1200 ಕೋಟಿ ರೂ. ರಾಜಧನ ಬರಬೇಕಿದ್ದು, ದಂಡ ಕಟ್ಟುವಂತೆ ನೋಟಿಸ್ ನೀಡಿದ್ದರೂ ಇದುವರೆಗೂ ಯಾರೂ ಕಟ್ಟಿಲ್ಲ. ಅಧಿಕಾರಿಗಳು ಸಹ ಸುಮ್ಮನಾಗಿದ್ದಾರೆ ಎಂದು ಕಿಡಿಕಾರಿದರು.

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಸ್ಪಷ್ಟವಾದ ಉತ್ತರ ಸಿಗುತ್ತಿಲ್ಲ. ಅಧಿಕಾರಿಗಳ ಲೋಪ ಹಾಗೂ ಬೇಜವ ಬ್ದಾರಿತನ ಎದ್ದು ಕಾಣುತ್ತಿದೆ. ಯಾರಿಗೆ ದಂಡ ಹಾಕಿದ್ದೀರಿ. ಪ್ರಕರಣ ದಾಖಲಿಸಿ ದ್ದೀರಾ, ರಾಜಧನ ವಸೂಲಿ ಮಾಡಿರುವ ಬಗ್ಗೆ ಮಾಹಿತಿ ನೀಡಿ ಎಂದರೆ ಯಾವುದಕ್ಕೂ ಸರಿಯಾದ ಉತ್ತರ ನೀಡುತ್ತಿಲ್ಲ. ಹಾಗಾಗಿ ಜಿಲ್ಲಾಧಿಕಾರಿಗೆ ರಾಜಧನ ಸಂಗ್ರಹಿಸು ವಂತೆ ಸೂಚನೆ ನೀಡಿದ್ದೇನೆ ಎಂದರು.
ಅಕ್ರಮ ಗಣಿಗಾರಿಕೆ ಬಗ್ಗೆ ಸ್ಥಳೀಯರು ಮಾಹಿತಿ ಕೊಟ್ಟಿದ್ದಾರೆ. ಅಧಿಕಾರಿಗಳು ಅಲ್ಲಿ ಏನು ನಡೆಯುತ್ತಿಲ್ಲ ಎನ್ನುತ್ತಾರೆ. ಇದರ ಬಗ್ಗೆ ಸಚಿವರಿಗೆ ಮಾಹಿತಿ ಕೊಡುತ್ತೇನೆ. ರಾಜಧನ ಸಂಗ್ರಹಿಸುವುದಕ್ಕೆ ಅಧಿಕಾರಿಗಳು 3 ತಿಂಗಳ ಕಾಲಾವಧಿ ಕೇಳಿದ್ದಾರೆ. ಅದಷ್ಟು ಬೇಗ ರಾಜಧನ ಸಂಗ್ರಹಿಸಬೇಕು ಎಂದು ತಿಳಿಸಿರುವುದಾಗಿ ಸುಮಲತಾ ಹೇಳಿದರು.

1200 ಕೋಟಿ ರೂ. ರಾಜಧನದಲ್ಲಿ ಒಂದು ಕೋಟಿಯನ್ನು ಸಹ ಕಟ್ಟಿಲ್ಲ. ಅಧಿಕಾರಿಗಳ ಬೇಜವಬ್ದಾರಿ ಎದ್ದು ಕಾಣುತ್ತಿದೆ. ಅಧಿಕಾರಿಗಳಿಗೆ ಯಾರ ಒತ್ತಡ ಇದೆ ಎಂಬುದನ್ನು ಲಿಖಿತ ರೂಪದಲ್ಲಿ ನೀಡುವಂತೆ ಸೂಚಿಸಿದ್ದೇನೆ. ಜಿಲ್ಲೆಯಲ್ಲಿ ರಾಜಧನ ಸಂಗ್ರಹವಾದರೆ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಕೆಆರ್‍ಎಸ್ ಜಲಾಶಯ ಹೈ ಸೆಕ್ಯೂರಿಟಿ ಇರಬೇಕಾದ ಸ್ಥಳವಾಗಿದೆ. ಆದರೆ ನಾಲ್ಕು ಜನ ಮೋಜು ಮಸ್ತಿ ಮಾಡಲು ಬರುತ್ತಾರೆ ಅಂದರೆ ಏನ್ ಅರ್ಥ? ಇದರ ಬಗ್ಗೆ ಡ್ಯಾಂ ಸೆಕ್ಯೂರ್ ಆಗಿದೆ ಎಂದು ಕೂತ್ಕೊಂಡು ಹೇಳುವವರು ತಿಳಿಸಬೇಕು. ಅವರು ಇದರ ಬಗ್ಗೆ ಯಾಕೆ ಮಾತನಾಡಲ್ಲ. ಐದೇ ನಿಮಿಷ ದಲ್ಲಿ ಏನೆಲ್ಲ ಮಾಡಬಹುದು ಎಂಬ ಅರಿವು ಇಲ್ಲವೇ?. ಗಣಿ ಸಚಿವರನ್ನು ಇಲ್ಲಿಗೆ ಕರೆಸಿ ಪರಿಶೀಲಿಸಿ ಕ್ರಮ ಕೈಗೊಳ್ಳ ಬೇಕಾಗಿದೆ. ಇದಕ್ಕೆ ಸಮಯಾವಕಾಶ ಅಗತ್ಯವಿದೆ ಎಂದರು.

Translate »