ಕೆ.ಆರ್.ಪೇಟೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ
ಮಂಡ್ಯ

ಕೆ.ಆರ್.ಪೇಟೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ

July 14, 2021

ಕೆ.ಆರ್.ಪೇಟೆ, ಜು.13(ಶ್ರೀನಿವಾಸ್)- ತಾಲೂಕಿನ ಹುಣಸನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ವನಮಹೋತ್ಸವದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಯೋಜನಾಧಿಕಾರಿ ಮಮತಾಶೆಟ್ಟಿ ಸಸಿನೆಟ್ಟು ನೀರುಣಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ, ಪರಿಸರವನ್ನು ಉಳಿಸಬೇಕು. ಒಂದು ಮರವನ್ನು ಕಡಿಯಬೇಕಾದರೆ 10 ಸಸಿಗಳನ್ನು ನೆಡಬೇಕು. ಪರಿಸರ ನಾಶದ ಕಾರಣದಿಂದ ನಾವು ಪ್ರಾಕೃತಿಕ ಅಸಮತೋಲನದ ದುಷ್ಪರಿಣಾಮಗಳನ್ನು ಎದುರಿಸಬೇಕಾಗಿದ್ದು, ಇದರ ಒಂದು ಭಾಗವೇ ಕೊರೊನಾ ಸೋಂಕು ಎಂದು ತಿಳಿಸಿದರು. ಪರಿಸರ ಅಸಮತೋಲನ ದಿಂದಾಗಿ ಕೋವಿಡ್ ನಂತಹ ಮಾರಕ ಕಾಯಿಲೆಗಳು ಇಡೀ ವಿಶ್ವವನ್ನು ಕಾಡು ತ್ತಿದೆ. ಕೋವಿಡ್‍ನಿಂದಾಗಿ ಆಮ್ಲಜನಕಕ್ಕೆ ಹಾಹಾಕಾರ ಉಂಟಾಗಿದೆ. ಇದು ಪರಿಸರ ವಿನಾಶದ ಪರಿಣಾಮವಾಗಿ ಆಮ್ಲಜನಕದ ಕೊರತೆ ಉಂಟಾಗಿದೆ. ಇನ್ನಾದರೂ ಪರಿಸರ ಉಳಿಸಲು ಎಲ್ಲರೂ ಕೈಜೋಡಿಸ ಬೇಕು. ಹುಟ್ಟು ಹಬ್ಬ, ವಿವಾಹ, ಹಬ್ಬ- ಹರಿದಿನಗಳ ನೆನಪಿಗಾಗಿ ಸಸಿಗಳನ್ನು ನೆಡುವುದದನ್ನು ರೂಢಿಸಿಕೊಳ್ಳಬೇಕು ಎಂದು ಮಮತಾಶೆಟ್ಟಿ ಸಲಹೆ ನೀಡಿದರು.

ಅಧ್ಯಕ್ಷತೆಯನ್ನು ಎಸ್‍ಡಿಎಂಸಿ ಮಹೇಶ್ ವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮೇಲ್ವಿಚಾರಕಿ ರೂಪರೈ, ತಾಲೂಕು ಪಂಚಾಯಿತಿ ಸದಸ್ಯೆ ಸುಶೀಲಮ್ಮ ಮಲ್ಲೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ರಂಗರಾಜು, ಸವಿತಾ, ಪದ್ಮ, ಸೌಮ್ಯ, ರತ್ನಮ್ಮ, ಪ್ರಭಾವತಿ, ಮುಖ್ಯ ಶಿಕ್ಷಕ ಧರ್ಮರತ್ನಾ ಕರ್, ವೆಂಕಟೇಶ್ ಇತರರು ಇದ್ದರು.

Translate »