ಜಿ.ಮಾದೇಗೌಡರ ಆರೋಗ್ಯ ವಿಚಾರಿಸಿದ ಶಾಸಕ ಜಿಟಿಡಿ
ಮಂಡ್ಯ

ಜಿ.ಮಾದೇಗೌಡರ ಆರೋಗ್ಯ ವಿಚಾರಿಸಿದ ಶಾಸಕ ಜಿಟಿಡಿ

July 14, 2021

ಭಾರತೀನಗರ, ಜು.13- ಮಾಜಿ ಸಂಸದ ಹಾಗೂ ಕಾವೇರಿ ಹೋರಾಟ ಗಾರರಾದ ಜಿ.ಮಾದೇಗೌಡರನ್ನು ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಭೇಟಿ ಯಾಗಿ, ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಟಿಡಿ, ಜಿ.ಮಾದೇಗೌಡರಿಗೆ ಹೋರಾಟವೇ ಉಸಿರು. ಶಾಸಕರಾಗಿ, ಅರಣ್ಯ ಸಚಿವ ರಾಗಿ, ಎರಡು ಬಾರಿ ಲೋಕಸಭಾ ಸದಸ್ಯ ರಾಗಿ ರಾಜಕಾರಣದ ಮೂಲಕವೂ ರೈತರ ಪರವಾಗಿ ದುಡಿದಿದ್ದಾರೆ. ಸಂದರ್ಭ ಬಂದಾಗ ಅಧಿಕಾರಕ್ಕೂ ಸೆಡ್ಡು ಹೊಡೆದು ರೈತರ ಏಳಿಗೆಗಾಗಿ ಶ್ರಮಿಸಿದ್ದಾರೆ. ಕಾವೇರಿ ನದಿ ವಿಚಾರವಾಗಿ ಎಂದೂ ತುಂಬಾ ಎಚ್ಚರಿಕೆ ವಹಿಸಿ, ನಾಡಿಗೆ, ರೈತರಿಗೆ ಅನ್ಯಾಯವಾಗುವ ಸಣ್ಣ ವ್ಯತ್ಯಾಸವಾದರೂ ಹೋರಾಟ ನಡೆಸಿ ದ್ದಾರೆ. ರೈತರ ಹಿತಕ್ಕಾಗಿ ಅಧಿಕಾರವನ್ನೇ ತ್ಯಜಿಸಿ, ಸರ್ಕಾರಗಳಿಗೆ ಎಚ್ಚರಿಕೆ ನೀಡುವ ಮೂಲಕ ರೈತರ ಕಣ್ಮಣಿ ಎನಿಸಿಕೊಂಡಿ ದ್ದಾರೆ ಎಂದು ಬಣ್ಣಿಸಿದರು.

ಜಿ.ಮಾದೇಗೌಡರ ಗಟ್ಟಿ ನಾಯಕತ್ವ ಎಲ್ಲರಿಗೂ ಮಾದರಿ. ರಾಜಕಾರಣ, ಕಾವೇರಿ ಹೋರಾಟ ಮಾತ್ರವಲ್ಲ ಸಮಾಜಕ್ಕೂ ಸಾಕಷ್ಟು ಕೊಡುಗೆ ನೀಡಿದ್ದಾರೆ. ಶಿಕ್ಷಣ ಸಂಸ್ಥೆಗಳ ಮೂಲಕ ಸಾವಿರಾರು ವಿದ್ಯಾರ್ಥಿ ಗಳಿಗೆ ನೆರವಾಗಿದ್ದಾರೆ. ಆಸ್ಪತ್ರೆಗಳ ಮೂಲಕ ಜನರಿಗೆ ಆರೋಗ್ಯ ಸೇವೆ ಕಲ್ಪಿಸಿಕೊಟ್ಟಿ ದ್ದಾರೆ. ಇನ್ನೂ ಹತ್ತಾರು ವರ್ಷಗಳ ಕಾಲ ಜಿ.ಮಾದೇಗೌಡರ ಮಾರ್ಗದರ್ಶನ, ಆಶೀರ್ವಾದ ರೈತರು ಹಾಗೂ ಯುವ ಸಮುದಾಯಕ್ಕೆ ಸಿಗುವಂತೆ ತಾಯಿ ಚಾಮುಂಡೇಶ್ವರಿ, ಅವರಿಗೆ ಆರೋಗ್ಯ ಕರುಣಿಸಲಿ ಎಂದು ಹಾರೈಸಿದ ಜಿಟಿಡಿ, ಜಿ.ಮಾದೇಗೌಡ ಹಾದಿಯಲ್ಲೇ ಅವರ ಪುತ್ರ ಮಧು ನಡೆಯುತ್ತಿದ್ದಾರೆ. ತಂದೆ ಮಾರ್ಗದರ್ಶನದಲ್ಲಿ ಸಂಸ್ಥೆಗಳನ್ನು ತುಂಬಾ ಅಚ್ಚುಕಟ್ಟಾಗಿ ಮುನ್ನಡೆಸುತ್ತಿದ್ದಾರೆ. ಭವಿಷ್ಯದಲ್ಲಿ ಒಳ್ಳೆಯ ನಾಯಕನಾಗುವ ಗುಣ ಲಕ್ಷಣಗಳಿವೆ ಎಂದು ಅಭಿಪ್ರಾಯಿಸಿದರು.

Translate »