ಜಿ.ಮಾದೇಗೌಡರ ಆರೋಗ್ಯ ಸುಧಾರಣೆಗೆ ವಿಶೇಷ ಪೂಜೆ
ಮಂಡ್ಯ

ಜಿ.ಮಾದೇಗೌಡರ ಆರೋಗ್ಯ ಸುಧಾರಣೆಗೆ ವಿಶೇಷ ಪೂಜೆ

July 12, 2021

ಭಾರತೀನಗರ, ಜು.11(ಅ.ಸತೀಶ್)- ಇಲ್ಲಿಗೆ ಸಮೀಪದ ಚಿಕ್ಕರಸಿನಕೆರೆ ಗ್ರಾಮದ ಶ್ರೀಕಾಲ ಭೈರವೇಶ್ವರ ದೇವ ಸ್ಥಾನದಲ್ಲಿ ಜಿ.ಮಾದೇ ಗೌಡರು ಬೇಗ ಗುಣ ಮುಖರಾಗಿ ಹೊರ ಬರಲಿ ಎಂದು ಅಭಿಮಾನಿ ಗಳು ವಿಶೇಷ ಪೂಜೆ ಸಲ್ಲಿಸಿದರು.

ಭಾರತೀನಗರದ ಜಿ.ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಿ.ಮಾದೇಗೌಡರ ಆರೋಗ್ಯ ಚೇತರಿಕೆ ಕಂಡು ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬರಲಿ ಎಂದು ರಂಗಭೂಮಿ ಕಲಾವಿದರ ಸಂಘದ ಹೋಬಳಿ ಅಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡರ ನೇತೃತ್ವದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿ.ಮಾದೇಗೌಡರು ನಾಡಿಗೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಕುಗ್ರಾಮವಾಗಿದ್ದ ಕೆ.ಎಂ.ದೊಡ್ಡಿಯನ್ನು ಭಾರತೀನಗರವನ್ನಾಗಿ ಮಾಡಿ ದೊಡ್ಡ ಪಟ್ಟಣವನ್ನಾಗಿ ಪರಿವರ್ತನೆ ಮಾಡಿದ್ದಾರೆ. ಹಾಗೆಯೇ ಇವರ ಗರಡಿಯಲ್ಲಿ ಅನೇಕ ರಾಜಕಾರಣಿಗಳು ಇಂದು ದೊಡ್ಡಮಟ್ಟದಲ್ಲಿ ಬೆಳೆದಿದ್ದಾರೆಂದು ಬಣ್ಣಿಸಿದರು.

ಈ ವೇಳೆ ತಾಪಂ ಮಾಜಿ ಸದಸ್ಯ ಭರತೇಶ್, ಯಜಮಾನ್ ಶಿವಲಿಂಗೇಗೌಡ, ಶಿವಲಿಂಗಯ್ಯ, ಕಳ್ಳಿಮೆಳೆದೊಡ್ಡಿ ಪ್ರಸನ್ನ, ಹುಣ್ಣನದೊಡ್ಡಿ ದೊಡ್ಡೇಗೌಡ, ದಾಸಪ್ಪ, ದ್ಯಾಪೇಗೌಡ, ಪುಟ್ಟರಾಜ, ಬೀರೇಶ್, ಗ್ರಾಪಂ ಸದಸ್ಯ ಬಿ.ಎಂ.ಕೃಷ್ಣ ಸೇರಿದಂತೆ ಇತರರಿದ್ದರು.

Translate »