ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಏ.24ರಂದು 66/11 ಕೆ.ವಿ ದೇವನೂರು (ಮೈಸೂರು) ವಿದ್ಯುತ್ ವಿತರಣಾ ಕೇಂದ್ರಗಳಿಂದ 11 ಕೆ.ವಿ. ಕಾವೇರಿ ಫೀಡರ್‍ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಏ.24 ರಂದು ಬೆಳಿಗ್ಗೆ 11ರಿಂದ ಸಂಜೆ 4 ಗಂಟೆವರೆಗೆ ಡಾ|| ರಾಜ್ ಕುಮಾರ್ ರಸ್ತೆ, ಸಾತಗಳ್ಳಿ, ಕಲ್ಯಾಣಗಿರಿ, ಎಲ್.ಐ.ಜಿ, ಎಂ.ಐ.ಜಿ. ಮನೆಗಳು, ಗೌಸಿಯಾನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ನ.ರಾ. ಮೊಹಲ್ಲಾ ವಿಭಾಗದ ಕಾರ್ಯ ಮತ್ತು ಪಾಲನೆ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಬೇಡ್ಕರ್‍ರವರ ಅಪರೂಪದ ಛಾಯಾಚಿತ್ರ ಪ್ರದರ್ಶನ
April 23, 2019ಮೈಸೂರು: ನಗರದ ಕ್ಯಾತಮಾರನಹಳ್ಳಿಯ ಜೈಭೀಮ್ ಪ್ರಜ್ಞಾವಂತ ಯುವಕರ ಬಳಗದ ವತಿಯಿಂದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಅಂಗವಾಗಿ ಇಲ್ಲಿನ ಚಿಕ್ಕಗರಡಿ ಮುಂಭಾಗ ಡಾ.ಅಂಬೇಡ್ಕರ್‍ರವರ ಅಪ ರೂಪದ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಡಾ.ಅಂಬೇಡ್ಕರ್‍ರವರ ಜೀವನಾಧಾರಿತ ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ನಗರಪಾಲಿಕೆ ಸದಸ್ಯ ಶ್ರೀಧರ್ ಉದ್ಘಾಟಿಸಿ, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಮಾತನಾಡಿದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನದಿಂದ ಇಂದು ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯವಾಗಿದೆ. ದಲಿತರು, ಹಿಂದುಳಿದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿದಾಗ ಮಾತ್ರ…
ಕಸದ ಬುಟ್ಟಿಗಳಿದ್ದ ಸ್ಟ್ಯಾಂಡ್ ಈಗ ಮಕ್ಕಳ ಉಯ್ಯಾಲೆ ಆಟಿಕೆ!
April 23, 2019ಮೈಸೂರು: ಮೈಸೂರು ನಗರ ಪಾಲಿಕೆ, ಚಿಕ್ಕಗಡಿಯಾರ ಬಳಿ ಅಳವಡಿಸಿರುವ ಕಸ ಸಂಗ್ರಹಿಸುವ ಪ್ಲಾಸ್ಟಿಕ್ ಬುಟ್ಟಿ ನಾಪತ್ತೆಯಾಗಿದ್ದು, ಇದಕ್ಕೆ ಆಧಾರವಾಗಿ ಅಳವಡಿಸಿದ್ದ ಕಬ್ಬಿಣದ ಸ್ಟಾಂಡೀಗ ಚಿಕ್ಕ ಮಕ್ಕಳ ಉಯ್ಯಾಲೆ ಆಟಿಕೆಯಾಗಿ ಪರಿವರ್ತಿತವಾಗಿದೆ. ಮೈಸೂರು ನಗರ ಹೃದಯ ಭಾಗದ ದೇವರಾಜ ಮಾರುಕಟ್ಟೆ ಮುಂಭಾಗದ ಚಿಕ್ಕಗಡಿಯಾರ ಬಳಿ ಮಕ್ಕಳಿಬ್ಬರು ಕಸ ಹಾಕುವ ಪ್ಲಾಸ್ಟಿಕ್ ಬುಟ್ಟಿಗೆ ಆಧಾರವಾಗಿ ಅಳವಡಿಸಿದ್ದ ಕಬ್ಬಿಣದ ಸ್ಯಾಂಡ್‍ನಲ್ಲಿ ಸ್ವಚ್ಛಂದವಾಗಿ ಉಯ್ಯಾಲೆ ಆಡುತ್ತಿದ್ದಾರೆ. ಆದರೆ, ಕಸ ಸಂಗ್ರಹಿಸಲು ಇಟ್ಟಿದ್ದ ಪ್ಲಾಸ್ಟಿಕ್ ಬುಟ್ಟಿಗಳನ್ನು ಕಳವು ಮಾಡಿರುವುದರ ಪರಿವೇ ಇಲ್ಲದ ಮಕ್ಕಳು, ಉಯ್ಯಾಲೆ…
ಅಸಹಜ ಲೈಂಗಿಕ ಕ್ರಿಯೆಗೆ ನಕಾರ: ವ್ಯಕ್ತಿಯ ಮೇಲೆ ಹಲ್ಲೆ
April 23, 2019ಮೈಸೂರು: ಅಸಹಜ ಲೈಂಗಿಕ ಕ್ರಿಯೆಗೆ ಒಪ್ಪದ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದ ನಾಲ್ವರು ತೃತೀಯ ಲಿಂಗಿಗಳು ಸೇರಿದಂತೆ 6 ಮಂದಿಯನ್ನು ಮೈಸೂರಿನ ಲಷ್ಕರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಿಲಾದ್ ಪಾರ್ಕ್ ಸಮೀಪ ಶನಿವಾರ ಮುಸ್ತಾಫ ಎಂಬುವರ ಮೇಲೆ ಹಲ್ಲೆ ನಡೆಸಿದ್ದ ತೌಸೀಫ್, ರವೀಂದ್ರಕುಮಾರ್ ಹಾಗೂ ನಾಲ್ವರು ತೃತೀಯ ಲಿಂಗಿಗಳನ್ನು ಪೊಲೀಸರು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಪರಿಚಿತರು ಹಲ್ಲೆ ನಡೆಸಿದ್ದಾಗಿ ಹೇಳಿದ್ದ ಮುಸ್ತಾಫ, ಪೊಲೀಸರು ವಿಚಾರಣೆ ತೀವ್ರಗೊಳಿಸಿದಾಗ ತನ್ನ ತೃತೀಯಲಿಂಗಿ ಸ್ನೇಹಿತರಾದ ನಗೀನಾ ಹಾಗೂ ಸಹಚರರು ಹಲ್ಲೆ…
ಸ್ಫೋಟದಲ್ಲಿ ಸ್ಥಳೀಯರ ಪಾತ್ರ, ಮಾಹಿತಿ ನೀಡಿದರೂ ಅಧಿಕಾರಿಗಳು ನಿಷ್ಕ್ರೀಯ
April 23, 2019ಕೊಲಂಬೊ (ಶ್ರೀಲಂಕಾ): ಭಾನುವಾರ ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ನಡೆದ ಸರಣಿ ಸ್ಫೋಟದ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ ವಾ ದರೂ, ಶ್ರೀಲಂಕಾದ ನ್ಯಾಷನಲ್ ತೌಹಿದ್ ಜಮಾತ್ ಸಂಘ ಟನೆಯ ಕೈವಾಡ ಇದೆ ಎಂದು ಶ್ರೀಲಂಕಾ ಆರೋಗ್ಯ ಸಚಿವ ಹಾಗೂ ಸರ್ಕಾರದ ವಕ್ತಾರ ರಜಿತಾ ಸೇನಾ ರತ್ನೆ ತಿಳಿಸಿದ್ದಾರೆ. ಭಾನುವಾರ ನಡೆದ ಎಲ್ಲಾ 8 ದಾಳಿ ಗಳಲ್ಲೂ ಸ್ಥಳೀಯರ ಕೈವಾಡವಿರುವ ಸಾಧ್ಯತೆ ಇದೆ ಎಂದಿರುವ ಅವರು, ಉಗ್ರರ ದಾಳಿಯ ಬಗ್ಗೆ ರಾಷ್ಟ್ರೀಯ ಗುಪ್ತಚರ ಸಂಸ್ಥೆಯು ಏ.11ರಂದು ಪೊಲೀಸ್ ಮಹಾ…
ಯುದ್ಧದಿಂದ ಗೆದ್ದದ್ದು ಅಹಂಕಾರ, ಸೋತಿದ್ದು ಮಾತ್ರ ಮನುಷ್ಯತ್ವ….
April 23, 2019ಮೈಸೂರು: ಮೈಸೂ ರಿನ ಕಲಾಮಂದಿರದಲ್ಲಿ ಚಾರ್ವಾಕ ಸಂಸ್ಥೆ ಪ್ರಸ್ತುತಪಡಿಸಿದ ‘ಬುದ್ಧಯಾನ’ 6 ಗಂಟೆ ಗಳ ರಂಗಪ್ರಯೋಗದಲ್ಲಿ ಯುದ್ದದಿಂದ ಯಾವುದೇ ಸಮಸ್ಯೆ ಬಗೆಹರಿಯದು, ಉದ್ದೇಶ ಈಡೇರದು. ಯುದ್ದ ಮತ್ತೊಂದು ಯುದ್ದಕ್ಕೆ ನಾಂದಿ.ಯುದ್ದದಲ್ಲಿ ಗೆದ್ದದ್ದು ಅಹಂಕಾರ ಸೋತಿದ್ದು ಮನುಷ್ಯತ್ವ ಎಂಬುದನ್ನು ಸಾರಲಾಯಿತು. ಗೀರಿಶ್ ಮಾಚಳ್ಳಿ ನಿರ್ದೇಶನದಲ್ಲಿ ಮೂಡಿಬಂದ ‘ಬುದ್ಧಯಾನ’ ನಾಟಕ ದಲ್ಲಿ ಬುದ್ಧನ ಜೀವನದ ಬಹುಮುಖ್ಯ ಘಟನೆಗಳನ್ನು ರಂಗದ ಮೇಲೆ ಕಲಾಭಿ ಮಾನಿಗಳ ಮನಮುಟ್ಟುವಂತೆ ಬಿತ್ತರಿಸ ಲಾಯಿತು. ಕಲಾವಿದರಾದ ಮಹದೇವ ಸ್ವಾಮಿ, ಗಣೇಶ್, ಕೆ.ಕಿರಣ್‍ಕುಮಾರ್, ಸುರೇಶ್, ಸೃಜನ್ ಸೂರ್ಯ, ಧನುಷ್,…
ಮತದಾರರಿಗೆ ಹಣ ಹಂಚುತ್ತಿದ್ದಾಗಲೇ ಸಿಕ್ಕಿಬಿದ್ದ ಜೆಡಿಎಸ್ ಮುಖಂಡನ ಪುತ್ರ
April 23, 2019ಶಿವಮೊಗ್ಗ: ಮಾಜಿ ಶಾಸಕ, ಜೆಡಿಎಸ್ ಮುಖಂಡ ಅಪ್ಪಾಜಿ ಗೌಡ ಅವರ ಪುತ್ರ ಅಜಿತ್ ಕುಮಾರ್ ಮತದಾರರಿಗೆ ಹಣ ಹಂಚುತ್ತಿದ್ದಾಗಲೇ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಭದ್ರಾವತಿಯ ಎಂಪಿಎಂ ಸುರಗಿ ತೋಪಿನಲ್ಲಿ ಅಜಿತ್ ಕುಮಾರ್ ಹಣ ಹಂಚುತ್ತಿದ್ದರು. ಈ ಕುರಿತು ಐಟಿ ಅಧಿಕಾರಿಗಳಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಹೀಗಾಗಿ ಎಂಪಿಎಂ ಠಾಣೆಯ ಪೆÇಲೀಸರ ಸಹಕಾರದಿಂದ ದಾಳಿ ಮಾಡಿದ ಅಧಿಕಾರಿಗಳು 1.39 ಲಕ್ಷ ರೂ. ನಗದು ಹಣವನ್ನು ಜಪ್ತಿ ಮಾಡಿದ್ದಾರೆ. ಶಿವಮೊಗ್ಗಕ್ಕೆ ಹೊರಟಿದ್ದ ಕಾರಿನ ಸ್ಟೆಪ್ನಿಯಲ್ಲಿತ್ತು…
ಲಕ್ಷ್ಮಿಹೆಬ್ಬಾಳ್ಕರ್ ಬೆಂಬಲಿಗನ ಬಳಿ 14 ಲಕ್ಷ ಹಣ ಪತ್ತೆ, ಬಂಧನ
April 23, 2019ಬೆಳಗಾವಿ: ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಹಾಗೂ ಬಿಜೆಪಿ ಸಂಸದರು, ಶಾಸಕರ ಬೆಂಬಲಿಗರ ನಿವಾಸಗಳು ಮತ್ತು ಇನ್ನಿತರ ಸ್ಥಳಗಳ ಮೇಲೆ ಆದಾಯ ತೆರಿಗೆ ಅಧಿಕಾರಿ ಗಳು ಸೋಮವಾರ ಬೆಳಿಗ್ಗೆಯಿಂದಲೇ ದಾಳಿನಡೆಸಿ, ಸುಮಾರು 14 ಲಕ್ಷ ರೂಪಾಯಿ ಲೆಕ್ಕವಿಡದ ಹಣ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬೆಂಬಲಿಗ ಶ್ರೀಕಾಂತ್ ಮುನವಳ್ಳಿ ಅವರ ಕಾರು ತಡೆದು ತಪಾಸಣೆ ನಡೆಸಿದ್ದು, ಅದರಲ್ಲಿ ಅಡಗಿಸಿಟ್ಟಿದ್ದ 14ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಶ್ರೀಕಾಂತ್ ಮುನವಳ್ಳಿ ಅವರನ್ನು ಐಟಿ ಅಧಿಕಾರಿಗಳು…
ಸಾಹಿತಿ ಚಂಪಾಗೆ ಬಸವಶ್ರೀ ಪ್ರಶಸ್ತಿ
April 23, 2019ಚಿತ್ರದುರ್ಗ: ಚಿತ್ರದುರ್ಗದ ಮುರುಘರಾಜೇಂದ್ರ ಮಠ ಪ್ರದಾನ ಮಾಡುವ ಈ ಸಾಲಿನ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಗೆ ಖ್ಯಾತ ಸಾಹಿತಿ, ವಿಮರ್ಶಕರಾದ ಚಂದ್ರಶೇಖರ ಪಾಟೀಲ ಆಯ್ಕೆಯಾಗಿ ದ್ದಾರೆ. “ಸಾಹಿತ್ಯ ಕ್ಷೇತ್ರಕ್ಕೆ ಚಂದ್ರಶೇಖರ ಪಾಟೀಲರು ಸಲ್ಲಿಸಿದ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಬರುವ ಮೇ 7ರಂದು ನಡೆಯಲಿರುವ ಬಸವ ಜಯಂತಿ ವಿಶೇಷ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ. ಪ್ರಶಸ್ತಿಯು ಐದು ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಕಳೆದ…
ಭೂಮಿ ಮೇಲಿನ ಒತ್ತಡ ತಪ್ಪದಿದ್ದರೆ ಕಾದಿದೆ ಆಪತ್ತು
April 22, 2019ಮೈಸೂರು: ಕೃಷಿ ಭೂಮಿ ಹಾಗೂ ಗುಡ್ಡ ಕಡಿದು ಬಡಾ ವಣೆ ನಿರ್ಮಾಣ ಮಾಡುತ್ತಿರುವುದ ರಿಂದಲೇ ಭೂಮಿ ಮೇಲೆ ಒತ್ತಡ ಹೆಚ್ಚಾ ಗುತ್ತಿದ್ದು, ಇವುಗಳನ್ನು ತಡೆದು ಭೂಮಿ ಯನ್ನು ರಕ್ಷಿಸದಿದ್ದರೆ ಮುಂದಿನ ಪೀಳಿಗೆಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ ವಿಷಾದಿಸಿದ್ದಾರೆ. ಮೈಸೂರು ಜಿಲ್ಲಾ ಪಂಚಾಯತ್‍ನ ಅಬ್ದುಲ್ ನಜೀರ್‍ಸಾಬ್ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿ.ಪಂ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ `ವಿಶ್ವ ಭೂ’ ದಿನಾಚರಣೆ ಕಾರ್ಯ…










