ಯುದ್ಧದಿಂದ ಗೆದ್ದದ್ದು ಅಹಂಕಾರ, ಸೋತಿದ್ದು ಮಾತ್ರ ಮನುಷ್ಯತ್ವ….
ಮೈಸೂರು

ಯುದ್ಧದಿಂದ ಗೆದ್ದದ್ದು ಅಹಂಕಾರ, ಸೋತಿದ್ದು ಮಾತ್ರ ಮನುಷ್ಯತ್ವ….

April 23, 2019

ಮೈಸೂರು: ಮೈಸೂ ರಿನ ಕಲಾಮಂದಿರದಲ್ಲಿ ಚಾರ್ವಾಕ ಸಂಸ್ಥೆ ಪ್ರಸ್ತುತಪಡಿಸಿದ ‘ಬುದ್ಧಯಾನ’ 6 ಗಂಟೆ ಗಳ ರಂಗಪ್ರಯೋಗದಲ್ಲಿ ಯುದ್ದದಿಂದ ಯಾವುದೇ ಸಮಸ್ಯೆ ಬಗೆಹರಿಯದು, ಉದ್ದೇಶ ಈಡೇರದು. ಯುದ್ದ ಮತ್ತೊಂದು ಯುದ್ದಕ್ಕೆ ನಾಂದಿ.ಯುದ್ದದಲ್ಲಿ ಗೆದ್ದದ್ದು ಅಹಂಕಾರ ಸೋತಿದ್ದು ಮನುಷ್ಯತ್ವ ಎಂಬುದನ್ನು ಸಾರಲಾಯಿತು.

ಗೀರಿಶ್ ಮಾಚಳ್ಳಿ ನಿರ್ದೇಶನದಲ್ಲಿ ಮೂಡಿಬಂದ ‘ಬುದ್ಧಯಾನ’ ನಾಟಕ ದಲ್ಲಿ ಬುದ್ಧನ ಜೀವನದ ಬಹುಮುಖ್ಯ ಘಟನೆಗಳನ್ನು ರಂಗದ ಮೇಲೆ ಕಲಾಭಿ ಮಾನಿಗಳ ಮನಮುಟ್ಟುವಂತೆ ಬಿತ್ತರಿಸ ಲಾಯಿತು. ಕಲಾವಿದರಾದ ಮಹದೇವ ಸ್ವಾಮಿ, ಗಣೇಶ್, ಕೆ.ಕಿರಣ್‍ಕುಮಾರ್, ಸುರೇಶ್, ಸೃಜನ್ ಸೂರ್ಯ, ಧನುಷ್, ವರಲಕ್ಷ್ಮಿ, ಬಿ.ಸೌಂದರ್ಯ, ನಿಖಿಲ್, ಆಕರ್ಷಣ, ಸಾಕ್ಷಿ, ಭವಾನಿ, ಪಂಕಜ, ಬಾಬು, ಸಚ್ಚತ್, ಬಾಬು, ಸ್ವಪ್ನ ಶಿವಣ್ಣ, ಮಲ್ಲಿಕಾರ್ಜುನ ತನುಜ, ಪ್ರಕಾಶ್, ರವಿ, ಗಾಯತ್ರಿ, ಕೋಮಲ ಮತ್ತು ಅಂಜಲಿ ತಮ್ಮ ಅಮೋಘ ಅಭಿನಯದಿಂದ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು.

ಜೀವನ್‍ಕುಮಾರ್ ಬಿ.ಹೆಗ್ಗೋಡು ಬೆಳಕು, ಸಿ.ಯು. ಸಿಂಚನ ಸಂಗೀತ, ಶ್ರೇಯಸ್ ಬಡಗಲಪುರ ಹಿನ್ನೆಲೆ ಸಂಗೀತ, ಮಹೇಶ್ವರಿ ವರ್ಧನ ನೃತ್ಯ ಸಂಯೋಜನೆ, ಹಾಗೂ ಸೋಮು ರಂಗಸಜ್ಜಿಗೆ ಒದಗಿಸಿ ದರು. ಇದಕ್ಕೂ ಮೊದಲು ಕಾರ್ಯಕ್ರಮ ವನ್ನು ಉದ್ಘಾಟಿಸಿದ ಕೊಳ್ಳೇಗಾಲ ಜೇತವನ ಬುದ್ಧವಿಹಾರದ ಬಂತೇ ಮನೋರಖ್ಖಿತ ಮಾತನಾಡಿ, ಎಲ್ಲರೂ ಬುದ್ಧ ತತ್ವ ಅನುಸರಿಸಿದಾಗ ಸಮಾಜದಲ್ಲಿ ಸಮಾನತೆ ಬರುತ್ತದೆ. ಮನುಷ್ಯ ಜಾತಿ, ಪಂಥ ಬಿಟ್ಟು ಒಂದೇ ಎಂದು ಬದುಕ ಬೇಕು. ಚಾರ್ವಾಕ ಸಂಸ್ಥೆಯು ಹೊಸ ಹೊಸ ಪ್ರಯೋಗ ಮಾಡುವ ಮೂಲಕ ಈ ನಾಟಕದ ಪ್ರಸ್ತುತಿ ವಹಿಸಿದೆ ಎಂದು ಅವರು ಹೇಳಿದರು.

ಬುದ್ಧಿಸ್ಟ್ ಇಂಟರ್‍ನ್ಯಾಷನಲ್ ನೆಟ್ ವರ್ಕ್‍ನ ಅಧ್ಯP್ಷÀ ಸಿದ್ದಾರ್ಥ ಮಾತನಾಡಿ, ಬುದ್ಧನ ನಿಯಮ ರೂಢಿಸಿಕೊಳ್ಳುವುದ ರಿಂದ ಮಾತ್ರ ಎಲ್ಲರೂ ಸಮಾನರಾಗಿ ಇರಲು ಸಾಧ್ಯ. ತಾಳ್ಮೆಯನ್ನು ಪ್ರತಿಯೊ ಬ್ಬರೂ ಮೈಗೂಡಿಸಿಕೊಳ್ಳಬೇಕು. ಏಕೆಂ ದರೆ ಈವರೆಗೂ ನಾವು ಬುದ್ಧನ ಮಾರ್ಗ ದಲ್ಲಿಯೇ ಬಂದಿz್ದÉೀವೆ. ಅದೇ ರೀತಿ ಮುಂದುವರೆಯಬೇಕು. ಆತನ ನಿಯಮ ರೂಢಿಸಿಕೊಂಡಾಗ ಎಲ್ಲರೂ ಒಟ್ಟಾಗಿ, ಸಮಾನತೆಯಿಂದ ಇರಲು ಸಾಧ್ಯ ವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಊರುಗೋಲು ವೈಚಾರಿಕ ಸಂಘದ ಅಧ್ಯಕ್ಷ ಹನುಮಪ್ಪ, ಇಂಜಿನಿಯರ್ ರಾಮಚಂದ್ರ, ಎವಿ ಎಸ್‍ಎಸ್ ಸಂಸ್ಥೆ ಅಧ್ಯಕ್ಷ ತುಂಬಲ ರಾಮಣ್ಣ, ಮೈಸೂರು ಮಿರಾಕಲ್ಸ್ ಡ್ಯಾನ್ಸ್ ತಂಡದ ಮುಖ್ಯಸ್ಥ ಮೋಹನ್, ನೇರಳೇ ಕರೆ ಮಂಜು, ಕಲಾವಿದ ಮಹಾದೇವು, ಎಚ್‍ಎಎಲ್‍ನ ಶಿವಲಿಂಗಯ್ಯ ಶೆಟ್ಟಹಳ್ಳಿ, ಜೀವಿಕ ಸಂಸ್ಥೆ ಮುಖ್ಯಸ್ಥ ಗೋವಿಂದ ರಾಜು ಉಪಸ್ಥಿತರಿದ್ದರು.

Translate »