ಸ್ಫೋಟದಲ್ಲಿ ಸ್ಥಳೀಯರ ಪಾತ್ರ, ಮಾಹಿತಿ ನೀಡಿದರೂ ಅಧಿಕಾರಿಗಳು ನಿಷ್ಕ್ರೀಯ
ಮೈಸೂರು

ಸ್ಫೋಟದಲ್ಲಿ ಸ್ಥಳೀಯರ ಪಾತ್ರ, ಮಾಹಿತಿ ನೀಡಿದರೂ ಅಧಿಕಾರಿಗಳು ನಿಷ್ಕ್ರೀಯ

April 23, 2019

ಕೊಲಂಬೊ (ಶ್ರೀಲಂಕಾ): ಭಾನುವಾರ ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ನಡೆದ ಸರಣಿ ಸ್ಫೋಟದ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ ವಾ ದರೂ, ಶ್ರೀಲಂಕಾದ ನ್ಯಾಷನಲ್ ತೌಹಿದ್ ಜಮಾತ್ ಸಂಘ ಟನೆಯ ಕೈವಾಡ ಇದೆ ಎಂದು ಶ್ರೀಲಂಕಾ ಆರೋಗ್ಯ ಸಚಿವ ಹಾಗೂ ಸರ್ಕಾರದ ವಕ್ತಾರ ರಜಿತಾ ಸೇನಾ ರತ್ನೆ ತಿಳಿಸಿದ್ದಾರೆ.

ಭಾನುವಾರ ನಡೆದ ಎಲ್ಲಾ 8 ದಾಳಿ ಗಳಲ್ಲೂ ಸ್ಥಳೀಯರ ಕೈವಾಡವಿರುವ ಸಾಧ್ಯತೆ ಇದೆ ಎಂದಿರುವ ಅವರು, ಉಗ್ರರ ದಾಳಿಯ ಬಗ್ಗೆ ರಾಷ್ಟ್ರೀಯ ಗುಪ್ತಚರ ಸಂಸ್ಥೆಯು ಏ.11ರಂದು ಪೊಲೀಸ್ ಮಹಾ ನಿರ್ದೇಶಕರಿಗೆ ಮಾಹಿತಿ ನೀಡಿತ್ತು. ಅಲ್ಲದೇ, ಅಂತರಾಷ್ಟ್ರೀಯ ಗುಪ್ತಚರ ಸಂಸ್ಥೆಗಳು ಏ.4ರಂದು ದಾಳಿಯ ಬಗ್ಗೆ ಎಚ್ಚರಿಕೆ ನೀಡಿದ್ದವು ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ ತಾವು ಲಂಕಾದ ನ್ಯಾಷನಲ್ ತೌಹಿದ್ ಜಮಾತ್ ಉಗ್ರ ಸಂಘಟನೆಯ ಬಗ್ಗೆ 3 ವರ್ಷದ ಹಿಂದೆಯೇ ಸೇನಾ ಗುಪ್ತ ಚರ ಇಲಾಖೆಗೆ ಮಾಹಿತಿ ನೀಡಿದ್ದಾಗಿ ಶ್ರೀಲಂಕಾದ ಮುಸ್ಲಿಂ ಕೌನ್ಸಿಲ್ ಉಪಾಧ್ಯಕ್ಷ ಹಿಲ್ಮಿ ಅಹಮದ್ ತಿಳಿಸಿದ್ದಾರೆ. ಸುದ್ದಿ ವಾಹಿನಿ ವೊಂದಕ್ಕೆ ಸಂದರ್ಶನ ನೀಡಿರುವ ಅವರು, ಈ ಸಂಘಟನೆಯು ಮುಸ್ಲಿಮೇತರ ಸಮುದಾಯಗಳನ್ನು ಟಾರ್ಗೆಟ್ ಮಾಡು ವುದನ್ನು ಉತ್ತೇಜಿಸುತ್ತದೆ. ಅಲ್ಲದೇ, ಧರ್ಮದ ಹೆಸರಿನಲ್ಲಿ ಇತರೆ ಸಮುದಾಯದವರನ್ನು ಹತ್ಯೆ ಮಾಡಬೇಕೆಂದು ಆ ಸಂಘಟನೆ ಯಲ್ಲಿರುವವರು ಹೇಳುತ್ತಾರೆ ಎಂದಿರುವ ಅವರು, ಈ ಸಂಘಟನೆ ಬಗ್ಗೆ ಎಲ್ಲಾ ದಾಖಲೆ ಗಳನ್ನು ತಾವೇ ಖುದ್ದಾಗಿ ನೀಡಿದ್ದರೂ ಕೂಡ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂ ಡಿಲ್ಲ ಎಂದು ಹಿಲ್ಮಿ ಅಹಮದ್ ಹೇಳಿದ್ದಾರೆ.

Translate »