ಲಕ್ಷ್ಮಿಹೆಬ್ಬಾಳ್ಕರ್ ಬೆಂಬಲಿಗನ ಬಳಿ 14 ಲಕ್ಷ ಹಣ ಪತ್ತೆ, ಬಂಧನ
ಮೈಸೂರು

ಲಕ್ಷ್ಮಿಹೆಬ್ಬಾಳ್ಕರ್ ಬೆಂಬಲಿಗನ ಬಳಿ 14 ಲಕ್ಷ ಹಣ ಪತ್ತೆ, ಬಂಧನ

April 23, 2019

ಬೆಳಗಾವಿ: ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಹಾಗೂ ಬಿಜೆಪಿ ಸಂಸದರು, ಶಾಸಕರ ಬೆಂಬಲಿಗರ ನಿವಾಸಗಳು ಮತ್ತು ಇನ್ನಿತರ ಸ್ಥಳಗಳ ಮೇಲೆ ಆದಾಯ ತೆರಿಗೆ ಅಧಿಕಾರಿ ಗಳು ಸೋಮವಾರ ಬೆಳಿಗ್ಗೆಯಿಂದಲೇ ದಾಳಿನಡೆಸಿ, ಸುಮಾರು 14 ಲಕ್ಷ ರೂಪಾಯಿ ಲೆಕ್ಕವಿಡದ ಹಣ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬೆಂಬಲಿಗ ಶ್ರೀಕಾಂತ್ ಮುನವಳ್ಳಿ ಅವರ ಕಾರು ತಡೆದು ತಪಾಸಣೆ ನಡೆಸಿದ್ದು, ಅದರಲ್ಲಿ ಅಡಗಿಸಿಟ್ಟಿದ್ದ 14ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಶ್ರೀಕಾಂತ್ ಮುನವಳ್ಳಿ ಅವರನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದು ಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ಅವರ ಬೆಂಬಲಿಗ ಶಂಕರ ಗೌಡ ಪಾಟೀಲ ಎಂಬುವರ ನಿವಾಸ ಹಾಗೂ ತೋಟದ ಮನೆಯ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ, ಶೋಧಿಸಿ, ತೆರಿಗೆ ವಂಚನೆಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಮತ್ತೊಂದು ಪ್ರಕರಣದಲ್ಲಿ ಬೆಳಗಾವಿ ತಾಲೂಕು ಕೊಪ್ಪ ಗ್ರಾಮದ ಸುರೇಶ್ ಗೌಡ ಪಾಟೀಲ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿ 4.5ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.

Translate »