ಮೈಸೂರು

ಶ್ರೀಲಂಕಾದಲ್ಲಿ ಸರಣಿ ಸ್ಫೋಟ: ರಾಜ್ಯದ 8 ಮಂದಿ ಸಾವು
ಮೈಸೂರು

ಶ್ರೀಲಂಕಾದಲ್ಲಿ ಸರಣಿ ಸ್ಫೋಟ: ರಾಜ್ಯದ 8 ಮಂದಿ ಸಾವು

April 23, 2019

ಕೊಲಂಬೊ (ಶ್ರೀಲಂಕಾ): ಶ್ರೀಲಂಕಾದ 3 ಚರ್ಚ್‍ಗಳು, 3 ಪಂಚ ತಾರಾ ಹೋಟೆಲ್‍ಗಳು ಸೇರಿದಂತೆ 8 ಕಡೆ ಭಾನುವಾರ ಬೆಳಿಗ್ಗೆ ನಡೆದ ಸರಣಿ ಸ್ಫೋಟದ ಪರಿಣಾಮ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ನಿನ್ನೆ (ಭಾನು ವಾರ) 207 ರಷ್ಟಿದ್ದ ಸಾವಿನ ಸಂಖ್ಯೆಯು ಇಂದು 290ಕ್ಕೆ ಏರಿದೆ. ಶ್ರೀಲಂಕಾ ಪ್ರವಾಸ ತೆರಳಿದ್ದ 7 ಜೆಡಿಎಸ್ ಮುಖಂಡರಲ್ಲಿ 6 ಮಂದಿ ಸೇರಿದಂತೆ ರಾಜ್ಯದ 8 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಬೆಂಗಳೂರಿನ ದಾಸರಹಳ್ಳಿ 8ನೇ ಮೈಲಿನ ಹನುಮಂತರಾಯಪ್ಪ, ತುಮಕೂರಿನ ರಮೇಶ್‍ಗೌಡ, ನೆಲಮಂಗಲದ ಕಾಚನಹಳ್ಳಿಯ…

ಐವರು ಭೂಗರ್ಭಶಾಸ್ತ್ರಜ್ಞರು ಸೇರಿ ಮೈಸೂರಿನ 14 ಮಂದಿ ಶ್ರೀಲಂಕಾದಲ್ಲಿ ಸುರಕ್ಷಿತ
ಮೈಸೂರು

ಐವರು ಭೂಗರ್ಭಶಾಸ್ತ್ರಜ್ಞರು ಸೇರಿ ಮೈಸೂರಿನ 14 ಮಂದಿ ಶ್ರೀಲಂಕಾದಲ್ಲಿ ಸುರಕ್ಷಿತ

April 23, 2019

ಮೈಸೂರು: ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಮೈಸೂರಿನ ಐದು ಮಂದಿ ಭೂಗರ್ಭಶಾಸ್ತ್ರಜ್ಞರು ಸೇರಿದಂತೆ ಒಟ್ಟು 14 ಮಂದಿ ಸುರಕ್ಷಿತವಾಗಿದ್ದಾರೆ. ಭೂಗರ್ಭಶಾಸ್ತ್ರಜ್ಞರಾದ ಎಂ.ವಿ.ರವಿಶಂಕರ್ (ಬಿಜೆಪಿ ಮುಖಂಡರು), ಕೆ.ವಿ.ವೇದಮೂರ್ತಿ, ಚನ್ನಬಸಪ್ಪ, ವಿನಯ್ ರಂಗನಾಥ್, ಹೆಚ್.ಎನ್. ಉಮೇಶ್ ಸೇರಿದಂತೆ ಈ ಐವರ ಕುಟುಂಬ ಸದಸ್ಯರಾದ ಶೈಲಾ, ಮೌನಾ ಉಮೇಶ್, ಪೂರ್ಣಿಮಾ ರವಿಶಂಕರ್, ಅನುಪ್ ರವಿಶಂಕರ್, ಬಿ.ಎಸ್.ಶಾಲಿನಿ, ಸ್ವರೂಪ, ಗೌತಮಿ ವೇದಮೂರ್ತಿ ಹಾಗೂ ಸನತ್ ರಂಗನಾಥ್ ಸದ್ಯ ಸರಣಿ ಬಾಂಬ್ ಸ್ಫೋಟ ಸಂಭವಿಸಿರುವ ಕೊಲಂಬೋದಿಂದ 40 ಕಿಮೀ ದೂರದಲ್ಲಿರುವ ಬೆಂಟೋಟಾದ ಹಿಬಿಸ್ಕಸ್ ಹೋಟೆಲ್‍ನಲ್ಲಿ ಸುರಕ್ಷಿತವಾಗಿದ್ದಾರೆ….

ಮೈಸೂರು ಎಂಜಿ ರಸ್ತೆ ಕಾಮಗಾರಿಯಲ್ಲಿ 1.40 ಕೋಟಿ ರೂ. ಗುಳುಂ ಪ್ರಕರಣ: ಮೇಯರ್ ನೇತೃತ್ವದ ಸತ್ಯ ಶೋಧನಾ ಸಮಿತಿಯಿಂದ ಸರ್ಕಾರಕ್ಕೆ ವರದಿ
ಮೈಸೂರು

ಮೈಸೂರು ಎಂಜಿ ರಸ್ತೆ ಕಾಮಗಾರಿಯಲ್ಲಿ 1.40 ಕೋಟಿ ರೂ. ಗುಳುಂ ಪ್ರಕರಣ: ಮೇಯರ್ ನೇತೃತ್ವದ ಸತ್ಯ ಶೋಧನಾ ಸಮಿತಿಯಿಂದ ಸರ್ಕಾರಕ್ಕೆ ವರದಿ

April 23, 2019

ಮೈಸೂರು: ಮೈಸೂರಿನ ಪ್ರತಿಷ್ಠಿತ ರಸ್ತೆಗಳಲ್ಲಿ ಒಂದಾದ ಮಹಾತ್ಮ ಗಾಂಧಿ ರಸ್ತೆ ಅಭಿವೃದ್ಧಿ ಕಾಮಗಾರಿ ಹೆಸರಲ್ಲಿ ನಡೆದಿದೆ ಎನ್ನಲಾದ 1.40 ಕೋಟಿ ರೂ. ಅವ್ಯವಹಾರ ‘ಸತ್ಯ’ ಎಂದು ಸತ್ಯಶೋಧನಾ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಮೈಸೂರು ನಗರದ ಮಹಾತ್ಮಗಾಂಧಿ ರಸ್ತೆಯ ಜಿಲ್ಲಾ ನ್ಯಾಯಾಲಯದ ಎದುರಿ ನಿಂದ ರಾಷ್ಟ್ರೀಯ ಹೆದ್ದಾರಿ 212 ಸೇರುವ ವರೆಗೆ ಆಯ್ದ ಭಾಗಗಳಲ್ಲಿ ರಸ್ತೆ ಹಾಗೂ ಪಾದಚಾರಿ ಮಾರ್ಗ ಅಭಿವೃದ್ಧಿಪಡಿಸುವ 50 ಕೋಟಿ ರೂ. ಎಸ್‍ಎಫ್‍ಸಿ ವಿಶೇಷ ಅನುದಾನದಡಿ 4 ಕೋಟಿ ರೂ. ಕಾಮಗಾರಿಯ 3ನೇ…

ರಾಜ್ಯದ ಬಾಕಿ 14 ಲೋಕಸಭಾ ಕ್ಷೇತ್ರಗಳಲ್ಲಿಇಂದು ಮತದಾನ
ಮೈಸೂರು

ರಾಜ್ಯದ ಬಾಕಿ 14 ಲೋಕಸಭಾ ಕ್ಷೇತ್ರಗಳಲ್ಲಿಇಂದು ಮತದಾನ

April 23, 2019

ಬೆಂಗಳೂರು: ಜೋಳ ಹಾಗೂ ಸಕ್ಕರೆ ಕಣಜವಾಗಿರುವ ರಾಜ್ಯದ ಉತ್ತರ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ. ಈಗಾಗಲೇ ಮೊದಲ ಹಂತದಲ್ಲಿ ಹಳೇ ಮೈಸೂರು ಮತ್ತು ಕರಾವಳಿ ತೀರದ 14 ಲೋಕ ಸಭಾ ಕ್ಷೇತ್ರಗಳಿಗೆ ಮತದಾನ ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ ರಾಜ್ಯದ ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ಬಳ್ಳಾರಿ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್, ವಿಜಾಪುರ, ಬಾಗಲಕೋಟೆ, ಚಿಕ್ಕೋಡಿ, ಬೆಳಗಾವಿ, ಧಾರವಾಡ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರಗಳಿಗೆ ನಾಳೆ ಬೆಳಿಗ್ಗೆ 7 ರಿಂದ ಸಂಜೆ…

ಮೈಸೂರಲ್ಲಿ ಆಸ್ತಿ ನೋಂದಣಿ ಕಾರ್ಯ ಸ್ಥಗಿತ
ಮೈಸೂರು

ಮೈಸೂರಲ್ಲಿ ಆಸ್ತಿ ನೋಂದಣಿ ಕಾರ್ಯ ಸ್ಥಗಿತ

April 23, 2019

ಮೈಸೂರು: ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಅಗತ್ಯ ವಸ್ತುಗಳಿಲ್ಲದ ಕಾರಣ ಸೋಮವಾರ ಕಾರ್ಯ ಚಟುವಟಿಕೆ ಸ್ಥಗಿತಗೊಂಡು ಸಾರ್ವಜನಿಕರು ಪರಿತಪಿಸುವಂತಾಗಿತ್ತು. ಮೈಸೂರು ನಗರದಲ್ಲಿರುವ ಐದು ಕಚೇರಿ ಸೇರಿದಂತೆ ಜಿಲ್ಲೆಯಲ್ಲಿರುವ ಒಟ್ಟು 14 ಉಪ ನೋಂದಣಾಧಿಕಾರಿಗಳ ಕಚೇರಿ ಯಲ್ಲಿ ಪೇಪರ್, ಕಾಟ್ರೇಜ್ ಇನ್ನಿತರ ಅಗತ್ಯ ವಸ್ತುಗಳಿಲ್ಲದೆ ಇಂದು ಬೆಳಿಗ್ಗೆ ಯಿಂದಲೇ ಕಾರ್ಯ ಚಟುವಟಿಕೆ ಸ್ಥಗಿತ ಗೊಂಡಿತ್ತು. ಆಸ್ತಿ ನೋಂದಣಿಗೆ, ಋಣ ಭಾರ ಪ್ರಮಾಣ ಪತ್ರ, ದಾಖಲೆಗಳ ದೃಢೀ ಕೃತ ನಕಲು ಪ್ರತಿಗಾಗಿ ಬಂದ ಸಾರ್ವ ಜನಿಕರು ಪರದಾಡುವಂತಾಗಿತ್ತು. ಅಧಿ ಕಾರಿಗಳು ಹಾಗೂ…

ಪಾರಂಪರಿಕ ಅಂಚೆ ಬಸಪ್ಪ, ಅಶ್ವದಳದ ಅಧಿಕಾರಿ ಭುಜಂಗರಾವ್ ಪ್ರತಿಮೆಗಳ ಸ್ಥಳಾಂತರಕ್ಕೆ ಸಿದ್ಧತೆ
ಮೈಸೂರು

ಪಾರಂಪರಿಕ ಅಂಚೆ ಬಸಪ್ಪ, ಅಶ್ವದಳದ ಅಧಿಕಾರಿ ಭುಜಂಗರಾವ್ ಪ್ರತಿಮೆಗಳ ಸ್ಥಳಾಂತರಕ್ಕೆ ಸಿದ್ಧತೆ

April 23, 2019

ಮೈಸೂರು: ಶತ ಮಾನದಷ್ಟು ಹಳೆಯದಾದ ಮೈಸೂರು ಸಂಸ್ಥಾನದ ಅಂದಿನ ಅಂಚೆ ವಿತರಕ ಬಸಪ್ಪ ಹಾಗೂ ಅಶ್ವದಳದ ಅಧಿಕಾರಿ ಭುಜಂಗರಾವ್ ಪ್ರತಿಮೆಗಳ ಸ್ಥಳಾಂತರ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪರಂ ಪರೆ ಸಮಿತಿಯ ಸದಸ್ಯ ಪ್ರೊ.ರಂಗರಾಜು ನೇತೃತ್ವದ ತಂಡ ಸೋಮವಾರ ಸಂಜೆ ಸ್ಥಳ ಪರಿಶೀಲಿಸಿತು. ಮೈಸೂರು ರೇಸ್‍ಕೋರ್ಸ್ ರಸ್ತೆಯ ಕರ್ನಾಟಕ ಸಶಸ್ತ್ರ ಮೀಸಲು ಪೊಲೀಸ್‍ನ (ಕೆಎಸ್‍ಆರ್‍ಪಿ) ಅಶ್ವಾರೋಹಿ ದಳದ ಪ್ರವೇಶ ದ್ವಾರದ ಮುಂಭಾಗದಲ್ಲಿ ಬಲ ಭಾಗದಲ್ಲಿ ಬಸಪ್ಪರ ಪ್ರತಿಮೆ ಹಾಗೂ ಎಡಭಾಗದಲ್ಲಿ ಭುಜರಂಗರಾವ್ ಪ್ರತಿಮೆ ಗಳಿದ್ದು, ಇವೆರಡು ಪ್ರತಿಮೆಗಳನ್ನು ಸುಮಾರು…

ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಸೂಕ್ತ ತನಿಖೆಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಸೂಕ್ತ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

April 23, 2019

ಮೈಸೂರು: ರಾಯಚೂರು ನಗರದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಅನುಮಾ ನಾಸ್ಪದ ಸಾವು ಪ್ರಕರಣ ಸಂಬಂಧ ಸೂಕ್ತ ತನಿಖೆಗೆ ಒತ್ತಾಯಿಸಿ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಮೈಸೂರು ನಗರದಲ್ಲಿ ಸೋಮವಾರ ಪ್ರತ್ಯೇಕ ಮೂರು ಪ್ರತಿಭಟನೆಗಳು ನಡೆದವು. ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಎದುರು ಜಮಾಯಿಸಿದ ಗಂಧದ ಗುಡಿ ಫೌಂಡೇಷನ್ ಕಾರ್ಯಕರ್ತರು, ಮಧು ಪತ್ತಾರ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರವೇ ತನಿಖೆ ಪೂರ್ಣಗೊಳಿಸಿ ಕೃತ್ಯ ನಡೆಸಿದ ಪಾತಕಿಗಳನ್ನು ಗಲ್ಲಿಗೇರಿಸಬೇಕು. ಇಂತಹ ಕಠಿಣ ಶಿಕ್ಷೆ ವಿಧಿಸದಿದ್ದಲ್ಲಿ ಇಂತಹ ಕೃತ್ಯಗಳು…

ಬಲಮುರಿಯಲ್ಲಿ ಮುಳುಗಿ ಮೈಸೂರಿನ ವ್ಯಕ್ತಿ ಸಾವು
ಮೈಸೂರು

ಬಲಮುರಿಯಲ್ಲಿ ಮುಳುಗಿ ಮೈಸೂರಿನ ವ್ಯಕ್ತಿ ಸಾವು

April 23, 2019

ಮೈಸೂರು: ನಾಲ್ವರು ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಮೈಸೂರು ವ್ಯಕ್ತಿ ಬಲಮುರಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರಂತ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಮೈಸೂರಿನ ಹೆಬ್ಬಾಳು ಬಡಾವಣೆಯ ಸುಬ್ರಹ್ಮಣ್ಯೇಶ್ವರ ನಗರ ನಿವಾಸಿ ಲೇಟ್ ಬಸವರಾಜು ಅವರ ಮಗ ರಾಮು (40) ನೀರಲ್ಲಿ ಮುಳುಗಿ ಸಾವನ್ನ ಪ್ಪಿದವರು. ಭಾನುವಾರ ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ 5 ಮಂದಿ ಬೆಳಗೊಳ ಬಳಿಯ ಬಲಮುರಿಗೆ ತೆರಳಿದ್ದರು. ಐವರು ಈಜಲು ಆರಂಭಿಸಿದ್ದಾರೆ. ಫಾಲ್ಸ್ ಹಿಂಭಾಗ ಈಜುತ್ತಿದ್ದ ರಾಮು, ಮುಳುಗಿ ದ್ದಾರೆ. ಅವರನ್ನು ರಕ್ಷಿಸಲು ಜೊತೆಯಲ್ಲಿದ್ದವರು ಪ್ರಯತ್ನಿಸಿದರಾದರೂ…

ಡಿಯೋ ಸ್ಕೂಟರ್‍ಗೆ ಸ್ವಿಫ್ಟ್ ಡಿಸೈರ್ ಕಾರು ಡಿಕ್ಕಿ: ಮೈಸೂರಲ್ಲಿ ಕೇರಳ ಯುವಕ ಸಾವುಮತ್ತೋರ್ವನಿಗೆ ಗಾಯ
ಮೈಸೂರು

ಡಿಯೋ ಸ್ಕೂಟರ್‍ಗೆ ಸ್ವಿಫ್ಟ್ ಡಿಸೈರ್ ಕಾರು ಡಿಕ್ಕಿ: ಮೈಸೂರಲ್ಲಿ ಕೇರಳ ಯುವಕ ಸಾವುಮತ್ತೋರ್ವನಿಗೆ ಗಾಯ

April 23, 2019

ಮೈಸೂರು: ಮಾರುತಿ ಸ್ವಿಫ್ಟ್ ಡಿಸೈರ್ ಕಾರೊಂದು ಡಿಯೋ ಸ್ಕೂಟರ್‍ಗೆ ಡಿಕ್ಕಿ ಹೊಡೆದ ಪರಿಣಾಮ ಕೇರಳದ ಯುವಕನೋರ್ವ ಸ್ಥಳದಲ್ಲೇ ಸಾವನ್ನ ಪ್ಪಿದ್ದು, ಮತ್ತೋರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ಮೈಸೂರಿನ ಜೆ.ಕೆ. ಮೈದಾನದ ಬಳಿಯ ಸಿಗ್ನಲ್ ಲೈಟ್ ಸರ್ಕಲ್‍ನಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಕೇರಳದ ವೈನಾಡಿನ ಅರವಿಂದ(20) ಸಾವನ್ನಪ್ಪಿದವನು. ಘಟನೆಯಿಂದ ತೀವ್ರವಾಗಿ ಗಾಯಗೊಂಡಿರುವ ವಿಪಿನ್(21)ನನ್ನು ಕೆ.ಆರ್.ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಹಳೇ ಆರ್‍ಎಂಸಿ ಕಡೆಯಿಂದ ಡಿಯೋ ಸ್ಕೂಟರ್‍ನಲ್ಲಿ ಗಾಯತ್ರಿ ಭವನ ಕಡೆಗೆ ಹೋಗು ತ್ತಿದ್ದ ವೇಳೆ ರೈಲ್ವೇ ನಿಲ್ದಾಣದ ಕಡೆಯಿಂದ ವೇಗವಾಗಿ…

ಬೈಕಿಗೆ ವಾಹನ ಡಿಕ್ಕಿ: ವ್ಯಕ್ತಿ ಸಾವು
ಮೈಸೂರು

ಬೈಕಿಗೆ ವಾಹನ ಡಿಕ್ಕಿ: ವ್ಯಕ್ತಿ ಸಾವು

April 23, 2019

ಮೈಸೂರು: ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಭಾನುವಾರ ಸಂಭವಿಸಿದೆ. ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದವರಾದ ಲೇಟ್ ಮಾದೇಗೌಡರ ಮಗ ಜಯಕುಮಾರ್(50) ಸಾವನ್ನಪ್ಪಿದವರು. ಶ್ರೀರಂಗಪಟ್ಟಣದಲ್ಲಿ ವಾಸವಿದ್ದ ಅವರು ಬಾಬು ರಾಯನ ಕೊಪ್ಪಲಿನಲ್ಲಿ ಸಿನಿಮಾ ಮಂದಿರವನ್ನು ಬಾಡಿಗೆಗೆ ಪಡೆದು ನಡೆಸುತ್ತಿದ್ದರು. ಏ.19ರಂದು ಬಾಬುರಾಯನಕೊಪ್ಪಲಿನಿಂದ ಬೈಕಿನಲ್ಲಿ ಶ್ರೀರಂಗಪಟ್ಟಣಕ್ಕೆ ಹೋಗುತ್ತಿ ದ್ದಾಗ ಹಿಂದಿನಿಂದ ಬಂದ ವಾಹನವೊಂದು ಕಾವೇರಿ ನದಿ ಸೇತುವೆ ಬಳಿ ರಾತ್ರಿ 8.15 ಗಂಟೆ ವೇಳೆಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ತಲೆಗೆ…

1 1,025 1,026 1,027 1,028 1,029 1,611
Translate »