ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಅವರ ಸಂಪುಟ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳು ಆಡಳಿತಯಂತ್ರಕ್ಕೆ ಮರಳಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ಪೂರ್ಣಗೊಳ್ಳುತ್ತಿದ್ದಂತೆ, ತಮ್ಮ ಮೂಲ ಕಾರ್ಯಕ್ಕೆ ಹಿಂತಿರುಗಿದ್ದಾರೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಇಡೀ ರಾಜ್ಯದ ಚಿತ್ರಣ ಕಂಡಿರುವ ಮುಖ್ಯ ಮಂತ್ರಿ ಹಾಗೂ ಅವರ ಸಂಪುಟದ ಕೆಲವು ಸಚಿವರಿಗೆ, ಬರದ ಭೀಕರತೆ ಅರಿವಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿಗೆ ವಾಪಸಾಗುತ್ತಿದ್ದಂತೆ ಮುಖ್ಯಮಂತ್ರಿ ಅವರು, ಮುಂದಿನ ವಾರ ಬರ ಪರಿಸ್ಥಿತಿ ಪರಿಶೀಲನೆ…
ಹೆಚ್‍ಎಂಟಿ ಡೆಲ್ಲಿಗೆ ಹೋಗೋದು ಖಚಿತ
April 25, 2019ಹಾಸನ: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‍ನ ಹೆಚ್‍ಎಂಟಿ (ಹಾಸನ, ಮಂಡ್ಯ, ತುಮ ಕೂರು) ಅಭ್ಯರ್ಥಿಗಳು ಗೆಲ್ಲುವುದು ನೂರಕ್ಕೆ ನೂರರಷ್ಟು ಖಚಿತವಾಗಿದ್ದು, ಸಂಸದರಾಗಿ ಡೆಲ್ಲಿಗೆ ಹೋಗುತ್ತಾರೆ. ಜೊತೆಗೆ, ರಾಜ್ಯದಲ್ಲಿ ಮೈತ್ರಿ ಸರ್ಕಾರ 5 ವರ್ಷ ಸುಭದ್ರವಾಗಿರುತ್ತದೆ ಎಂದು ಲೋಕೋಪಯೋಗಿ ಸಚಿವ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಖಾಸಗಿ ಹೋಟೆಲೊಂದರಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಬಿದ್ದು ಹೋಗುತ್ತದೆ ಎಂದು ಬಿಜೆಪಿ ಮುಖಂಡರು ಕಾಯು ತ್ತಿದ್ದಾರೆ. ಆದರೆ ಹಾಸನ, ಮಂಡ್ಯ ಹಾಗೂ ತುಮಕೂರಿನಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಪಡೆದು…
ನಿಮ್ಮ ಬೈಕ್ ಇಲ್ಲವೇ ಸ್ಕೂಟರ್ ನೋ ಪಾರ್ಕಿಂಗ್‍ನಲ್ಲಿದ್ದರೆ‘ವ್ಹೀಲ್ ಲಾಕ್’
April 25, 2019ಮೈಸೂರು: ವಾಹನ ಸಂಚಾರ ಸುಗಮಗೊಳಿಸಿ, ಅಪಘಾತಗಳನ್ನು ತಪ್ಪಿಸಲು ಸಂಚಾರಿ ಪೊಲೀಸರು ಹತ್ತು ಹಲವು ನಿಯಮ ಗಳನ್ನು ಜಾರಿ ಮಾಡಿದಾಗ್ಯೂ ವಾಹನ ಬಳಕೆ ದಾರರು ಅವುಗಳನ್ನು ಪಾಲಿಸುತ್ತಿಲ್ಲ. ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ ಯಾದರೂ, ರಸ್ತೆಗಳು ಮಾತ್ರ ಇದ್ದ ಸ್ಥಿತಿಯಲ್ಲೇ ಇರುವುದರಿಂದ ಲಭ್ಯವಿರುವ ರಸ್ತೆ, ಪಾರ್ಕಿಂಗ್ ಸ್ಥಳವನ್ನು ಯೋಜನಾಬದ್ಧ ಹಾಗೂ ನಿಯಮಾ ನುಸಾರ ಬಳಸಿಕೊಳ್ಳದೇ ಅನ್ಯಮಾರ್ಗವಿಲ್ಲ. ಎಲ್ಲೆಂದರಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿದ್ದರಿಂದ ಇನ್ನಿತರೆ ವಾಹನ ಚಾಲಕರು ಹಾಗೂ ಪಾದಚಾರಿಗಳಿಗೆ ಉಂಟಾಗುವ ತೊಂದರೆ ತಪ್ಪಿಸಲೆಂದು ಈ ಹಿಂದಿನಿಂದಲೂ ಮೈಸೂರು…
ಬೆಂಗಳೂರಿಗೆ ಐವರ ಪಾರ್ಥಿವ ಶರೀರ
April 25, 2019ಬೆಂಗಳೂರು: ಭಾನುವಾರ ಶ್ರೀಲಂಕಾ ದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಸಾವಿ ಗೀಡಾಗಿದ್ದ ಐವರು ಕನ್ನಡಿಗರ ಮೃತದೇಹ ನಿನ್ನೆ ತಡರಾತ್ರಿ ಬೆಂಗಳೂರು ತಲುಪಿದೆ. ಬುಧವಾರ ಮಧ್ಯಾಹ್ನ ಬೆಂಗಳೂರಿನಲ್ಲಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮತ್ತು ಕರ್ನಾಟಕದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮೃತ ಜೆಡಿಎಸ್ ಮುಖಂಡ ರಾದ ಕೆ.ಜಿ. ಹನುಮಂತರಾಯಪ್ಪ, ಎಂ.ರಂಗಪ್ಪ ಅವರ ಅಂತಿಮ ದರ್ಶನ ಪಡೆದು ಗೌರವ ಸಮರ್ಪಿ ಸಿದ್ದಾರೆ. ಬಾಂಬ್ ದಾಳಿಯಲ್ಲಿ ಮಡಿದ ರಾಜ್ಯದ ಮೃತರ ದರ್ಶನ ಪಡೆದ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಕುಟುಂಬ ಸದಸ್ಯರಿಗೆ…
ಬಾಂಬರ್ ಪೈಕಿ ಓರ್ವ ಮಹಿಳೆ, ಇನ್ನೋರ್ವ ಯುಕೆಯಲ್ಲಿ ವ್ಯಾಸಂಗ ಮಾಡಿದ್ದ!
April 25, 2019ಕೊಲಂಬೋ: ಈಸ್ಟರ್ ಹಬ್ಬದಂದು ಶ್ರೀಲಂಕಾದ ಕೊಲಂಬೋದಲ್ಲಿ ಭೀಕರ ಸ್ಫೋಟಗಳನ್ನು ನಡೆಸಿದ್ದ ಒಂಬತ್ತು ಆತ್ಮಾಹುತಿ ಬಾಂಬರ್‍ಗಳ ಪೈಕಿ ಒಬ್ಬ ಮಹಿಳೆಯೂ ಸೇರಿದ್ದಾಳೆ ಎಂದು ಶ್ರೀಲಂಕಾ ಉಪ ರಕ್ಷಣಾ ಸಚಿವರು ಬುಧ ವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸ್ಫೋಟಗಳನ್ನು ಒಂಬತ್ತು ಅತ್ಮಾಹುತಿ ಬಾಂಬರ್ ನಡೆಸಿದ್ದರು ಎಂದು ಖಚಿತ ಪಡಿಸಿ, 8 ಮಂದಿಯನ್ನು ಪೊಲೀಸರು ಗುರುತಿಸಿದ ನಂತರ ರಕ್ಷಣಾ ಸಚಿವ ರುವಾನ್ ವಿಜೆವರ್ದನೆ ಈ ವಿಷಯ ತಿಳಿಸಿದ್ದಾರೆ. ಈ ಪೈಕಿ ಒಬ್ಬ ವ್ಯಕ್ತಿ ಬ್ರಿಟನ್ ಹಾಗೂ ಆಸ್ಟ್ರೇಲಿಯಾದಲ್ಲಿ ವ್ಯಾಸಂಗ ನಡೆಸಿದ್ದ ಎಂದು ಸ್ಟ್ರೈಟ್…
ಕೊಲಂಬೋದಲ್ಲಿ ಮತ್ತೊಂದು ಸಜೀವ ಬಾಂಬ್ ಪತ್ತೆ
April 25, 2019ಕೊಲಂಬೋ: ಬರೋಬ್ಬರಿ 359 ಮಂದಿಯ ಸಾವಿಗೆ ಕಾರಣವಾಗಿದ್ದ ಇಸಿಸ್ ಉಗ್ರರ ಮಾರಣ ಹೋಮ ನಡೆದ ಮೂರು ದಿನಗಳ ಬಳಿಕ ಶ್ರೀಲಂಕಾದ ಕೊಲಂಬೋದಲ್ಲಿ ಮತ್ತೊಂದು ಸಜೀವ ಬಾಂಬ್ ಪತ್ತೆಯಾಗಿದೆ. ಈಸ್ಟರ್ ಸಂಡೇ ದಿನದಂದೇ ಮೂರು ಚರ್ಚ್‍ಗಳು, ನಾಲ್ಕು ಹೋಟೆಲ್‍ಗಳಲ್ಲಿ ಆತ್ಮಹತ್ಯಾ ದಾಳಿಕೋರರು ಬಾಂಬ್ ಸ್ಫೋಟ ನಡೆಸಿ 359 ಮಂದಿಯ ಸಾವಿಗೆ ಕಾರಣರಾಗಿದ್ದರು. ಅಲ್ಲದೆ ಘಟನೆಯಲ್ಲಿ 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಇಸಿಸ್ ಜೊತೆ ಸ್ಥಳೀಯ ಇಸ್ಲಾಮಿಕ್ ಉಗ್ರ ಸಂಘಟನೆ ನ್ಯಾಷನಲ್ ಥೌವೀತ್ ಜಮಾತ್ ಕೈ…
ಮೈಸೂರಲ್ಲಿ ಕನ್ನಡ ರತ್ನ ಡಾ.ರಾಜ್ ಜನ್ಮ ದಿನಾಚರಣೆ
April 25, 2019ಮೈಸೂರು: ಕನ್ನಡಿಗರ ಕಣ್ಮಣಿಯಾಗಿ ಮೆರೆದ ವರ ನಟ, ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಬುಧವಾರ ಮೈಸೂರಿನ ನಾನಾ ಕಡೆಗಳಲ್ಲಿ ಅರ್ಥ ಪೂರ್ಣವಾಗಿ ಆಚರಿಸಿದರು. ಡಾ.ರಾಜ್‍ಕುಮಾರ್ ಪ್ರತಿಮೆ, ಪುತ್ಥಳಿ, ಭಾವಚಿತ್ರಗಳಿಗೆ ಹಾರ ಅರ್ಪಿಸಿ, ಸಿಹಿ ವಿತರಿ ಸಿದರು. ಸಾವಿರಾರು ಮಂದಿಗೆ ಅನ್ನ ಸಂತ ರ್ಪಣೆ ನಡೆಸಿ ತಮ್ಮ ಮೆಚ್ಚಿನ `ಅಣ್ಣಾವ್ರ’ನ್ನು ಸ್ಮರಿಸಿದರು, ಅಭಿಮಾನ ಮೆರೆದರು. ಮೈಸೂರಿನ ಅರಮನೆ ಬಳಿಯ ಡಾ.ರಾಜ್‍ಕುಮಾರ್ ಉದ್ಯಾನವನದಲ್ಲಿ ಡಾ.ರಾಜ್‍ರ ಪ್ರತಿಮೆ, ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ…
ಶ್ರೀಲಂಕಾದಿಂದ ಸುರಕ್ಷಿತವಾಗಿ ಹಿಂದಿರುಗಿದಮೈಸೂರಿನ ಭೂಗರ್ಭಶಾಸ್ತ್ರಜ್ಞರು, ಅವರ ಕುಟುಂಬ
April 25, 2019ಮೈಸೂರು: ಶ್ರೀಲಂಕಾ ಪ್ರವಾಸದಲ್ಲಿದ್ದ ಮೈಸೂರಿನ ಐವರು ಭೂಗರ್ಭಶಾಸ್ತ್ರಜ್ಞರ ಕುಟುಂಬ ಸದಸ್ಯರು ಬುಧವಾರ ರಾತ್ರಿ ಸುರಕ್ಷಿತ ವಾಗಿ ಹಿಂದಿರುಗಿದ್ದಾರೆ. ಇಂದು ಸಂಜೆ 6.30 ಗಂಟೆಗೆ ಶ್ರೀಲಂಕಾದಿಂದ ವಿಮಾನದಲ್ಲಿ ಪ್ರಯಾಣ ಬೆಳೆಸಿ ಬೆಂಗಳೂರಿಗೆ ಬಂದು ಅಲ್ಲಿಂದ ರಸ್ತೆ ಮೂಲಕ ತಡರಾತ್ರಿ ಎಲ್ಲಾ 14 ಮಂದಿ ಮೈಸೂರು ತಲುಪಿದರು. ಏಪ್ರಿಲ್ 19ರಂದು ಮುಂಜಾನೆ ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿ ಅಂದು ದಕ್ಷಿಣ ಶ್ರೀಲಂಕಾದ ಕ್ಯಾಂಡಿ ತಲುಪಿದ್ದರು. ಆರಂಭದಲ್ಲೇ ಕೊಲಂಬೋಗೆ ತೆರ ಳಲು ಉದ್ದೇಶಿಸಿದ್ದ ಅವರು, ಕಡೇ ಘಳಿಗೆ ಯಲ್ಲಿ ಮನಸ್ಸು…
ಪೈಲಟ್ ಇಲ್ಲದೆ ವಿಮಾನ ಹಾರಬಹುದೆ!?
April 25, 2019ಮೈಸೂರು: ವಿಮಾನ ದಲ್ಲಿ ಬ್ಲಾಕ್ ಬಾಕ್ಸ್ ಏಕೆ ಇಟ್ಟಿರುತ್ತಾರೆ. ಅದರ ಕೆಲಸವೇನು?, ವಿಮಾನಕ್ಕೆ ಯಾವ ಲೋಹ ಬಳಸುತ್ತಾರೆ?, ಪೈಲಟ್ ಇಲ್ಲದೇ ವಿಮಾನ ಹಾರಾಟ ಮಾಡಲು ಆಗುವುದಿ ಲ್ಲವಾ? ಏಕೆ?, ಈಗಾಗಲೇ ಹಾರುವ ಕಾರನ್ನು ತಯಾರಿಸಲಾಗಿದ್ದು, ಜನದಟ್ಟಣೆ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಬಲ್ಲದೆ?, ಕ್ರಿ.ಪೂ.ದಲ್ಲೇ ಭಾರತದಲ್ಲಿ ವಿಮಾನ ಬಳಕೆ ಮಾಡಲಾಗಿದೆ ಎಂಬ ಪ್ರತೀತಿ ಇದೆ. ಅದು ನಿಜವೇ?, ಎಂಬ ಚಿಣ್ಣರ ಮುಗ್ಧ ಪ್ರಶ್ನೆಗಳು ಅನಾವರಣಗೊಂಡವು. ರಂಗಾಯಣದ ಚಿಣ್ಣರ ಮೇಳದಲ್ಲಿ ಬುಧವಾರ ಆಯೋಜಿಸಿದ್ದ ಚಿಣ್ಣರೊಂ ದಿಗೆ ಸಂವಾದದಲ್ಲಿ ವೈಮಾನಿಕ ವಿಜ್ಞಾನಿ ಸುಧೀಂದ್ರ…
ಶ್ರೀಲಂಕಾ ಸ್ಫೋಟದಲ್ಲಿ ಮೃತಪಟ್ಟವರಿಗೆ ಮೈಸೂರಿನ ಕ್ರಿಶ್ಚಿಯನ್ ಸಂಘಟನೆಗಳ ಶ್ರದ್ಧಾಂಜಲಿ
April 25, 2019ಮೈಸೂರು: ಶ್ರೀಲಂಕಾ ದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕರುಣಿಸಿ, ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿದ ಮೈಸೂರು ಬಿಷಪ್ ಹಾಗೂ ಯುಸಿಎಫ್ ಮೈಸೂರು ವಲಯ ಅಧ್ಯಕ್ಷ ರೆವರೆಂಡ್ ಫಾದರ್ ಕೆ.ಎಂ. ವಿಲಿಯಂ, ಕೃತ್ಯ ನಡೆಸಿದ ದುಷ್ಕರ್ಮಿಗಳನ್ನು ಮನ್ನಿಸಿ ಅವರ ಮನಪರಿವರ್ತನೆ ಮಾಡು ವಂತೆಯೂ ದೇವರಲ್ಲಿ ಪ್ರಾರ್ಥಿಸಿದರು. ಯುನೈಟೆಡ್ ಕ್ರಿಶ್ಚಿಯನ್ ಫೋರಮ್ (ಯುಸಿಎಫ್) ಮೈಸೂರು ವಲಯದ ವತಿಯಿಂದ ಮೈಸೂರಿನ ಸಂತ ಫಿಲೋ ಮಿನಾ ಚರ್ಚ್‍ನಲ್ಲಿ ಬುಧವಾರ ಶ್ರೀಲಂಕಾ ದಲ್ಲಿ…










