ಶ್ರೀಲಂಕಾದಿಂದ ಸುರಕ್ಷಿತವಾಗಿ ಹಿಂದಿರುಗಿದಮೈಸೂರಿನ ಭೂಗರ್ಭಶಾಸ್ತ್ರಜ್ಞರು, ಅವರ ಕುಟುಂಬ
ಮೈಸೂರು

ಶ್ರೀಲಂಕಾದಿಂದ ಸುರಕ್ಷಿತವಾಗಿ ಹಿಂದಿರುಗಿದಮೈಸೂರಿನ ಭೂಗರ್ಭಶಾಸ್ತ್ರಜ್ಞರು, ಅವರ ಕುಟುಂಬ

April 25, 2019

ಮೈಸೂರು: ಶ್ರೀಲಂಕಾ ಪ್ರವಾಸದಲ್ಲಿದ್ದ ಮೈಸೂರಿನ ಐವರು ಭೂಗರ್ಭಶಾಸ್ತ್ರಜ್ಞರ ಕುಟುಂಬ ಸದಸ್ಯರು ಬುಧವಾರ ರಾತ್ರಿ ಸುರಕ್ಷಿತ ವಾಗಿ ಹಿಂದಿರುಗಿದ್ದಾರೆ.

ಇಂದು ಸಂಜೆ 6.30 ಗಂಟೆಗೆ ಶ್ರೀಲಂಕಾದಿಂದ ವಿಮಾನದಲ್ಲಿ ಪ್ರಯಾಣ ಬೆಳೆಸಿ ಬೆಂಗಳೂರಿಗೆ ಬಂದು ಅಲ್ಲಿಂದ ರಸ್ತೆ ಮೂಲಕ ತಡರಾತ್ರಿ ಎಲ್ಲಾ 14 ಮಂದಿ ಮೈಸೂರು ತಲುಪಿದರು. ಏಪ್ರಿಲ್ 19ರಂದು ಮುಂಜಾನೆ ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿ ಅಂದು ದಕ್ಷಿಣ ಶ್ರೀಲಂಕಾದ ಕ್ಯಾಂಡಿ ತಲುಪಿದ್ದರು.

ಆರಂಭದಲ್ಲೇ ಕೊಲಂಬೋಗೆ ತೆರ ಳಲು ಉದ್ದೇಶಿಸಿದ್ದ ಅವರು, ಕಡೇ ಘಳಿಗೆ ಯಲ್ಲಿ ಮನಸ್ಸು ಬದಲಾಯಿಸಿ ಕೊಲಂಬೋ ದಿಂದ ಸುಮಾರು 50 ಕಿ.ಮೀ. ದೂರದ ಬೆಂಟೋಟಗೆ ಭೇಟಿ ನೀಡಿ ಹೈಬಿಸ್ಕಸ್ ಎಂಬ ಹೋಟೆಲಿನಲ್ಲಿ ವಾಸ್ತವ್ಯ ಹೂಡಿ ದ್ದರು. ಅಷ್ಟರಲ್ಲಿ ಏಪ್ರಿಲ್ 21ರಂದು ಕೊಲಂಬೋದ ಚರ್ಚ್‍ಗಳಲ್ಲಿ ಸರಣಿ ಸ್ಫೋಟ ಸಂಭವಿಸಿದ್ದರಿಂದ ಆಘಾತಕ್ಕೊಳ ಗಾಗಿದ್ದರು. ಶ್ರೀಲಂಕಾದಲ್ಲಿ ತುರ್ತು ಪರಿ ಸ್ಥಿತಿ ಘೋಷಣೆಯಾಗಿ ಕಫ್ರ್ಯೂ ಜಾರಿ ಯಲ್ಲಿರುವುದರಿಂದಾಗಿ ಅವರಿಗೆ ಫ್ಲೈಟ್ ಗಳು ಸಿಕ್ಕಿರಲಿಲ್ಲ. ಇಂದು ತಡರಾತ್ರಿ, ಬಿಜೆಪಿ ಮುಖಂಡ ಮೈ.ವಿ.ರವಿಶಂಕರ್, ಉಮೇಶ್ ಸೇರಿದಂತೆ ಎಲ್ಲಾ 14 ಮಂದಿ ಸುರಕ್ಷಿತವಾಗಿ ಮೈಸೂರು ತಲುಪಿದ್ದಾರೆ.

Translate »