ಮೈಸೂರಲ್ಲಿ ಕನ್ನಡ ರತ್ನ ಡಾ.ರಾಜ್ ಜನ್ಮ ದಿನಾಚರಣೆ
ಮೈಸೂರು

ಮೈಸೂರಲ್ಲಿ ಕನ್ನಡ ರತ್ನ ಡಾ.ರಾಜ್ ಜನ್ಮ ದಿನಾಚರಣೆ

April 25, 2019

ಮೈಸೂರು: ಕನ್ನಡಿಗರ ಕಣ್ಮಣಿಯಾಗಿ ಮೆರೆದ ವರ ನಟ, ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಬುಧವಾರ ಮೈಸೂರಿನ ನಾನಾ ಕಡೆಗಳಲ್ಲಿ ಅರ್ಥ ಪೂರ್ಣವಾಗಿ ಆಚರಿಸಿದರು.

ಡಾ.ರಾಜ್‍ಕುಮಾರ್ ಪ್ರತಿಮೆ, ಪುತ್ಥಳಿ, ಭಾವಚಿತ್ರಗಳಿಗೆ ಹಾರ ಅರ್ಪಿಸಿ, ಸಿಹಿ ವಿತರಿ ಸಿದರು. ಸಾವಿರಾರು ಮಂದಿಗೆ ಅನ್ನ ಸಂತ ರ್ಪಣೆ ನಡೆಸಿ ತಮ್ಮ ಮೆಚ್ಚಿನ `ಅಣ್ಣಾವ್ರ’ನ್ನು ಸ್ಮರಿಸಿದರು, ಅಭಿಮಾನ ಮೆರೆದರು.

ಮೈಸೂರಿನ ಅರಮನೆ ಬಳಿಯ ಡಾ.ರಾಜ್‍ಕುಮಾರ್ ಉದ್ಯಾನವನದಲ್ಲಿ ಡಾ.ರಾಜ್‍ರ ಪ್ರತಿಮೆ, ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ರುವ ಡಾ.ರಾಜ್ ಪುತ್ಥಳಿ, ಚಾಮರಾಜ ಜೋಡಿ ರಸ್ತೆಯ ಡಾ.ರಾಜ್ ಪುತ್ಥಳಿಗೂ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.

ಜಿಲ್ಲಾಡಳಿತದಿಂದ ಡಾ.ರಾಜ್‍ಗೆ ಗೌರವ: ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯದ ಎದುರಿನಲ್ಲಿರುವ ಡಾ. ರಾಜ್‍ಕುಮಾರ್ ಉದ್ಯಾನವನದ ಡಾ. ರಾಜ್‍ಕುಮಾರ್ ಪ್ರತಿಮೆಗೆ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಪಂ ಸಿಇಓ ಕೆ.ಜ್ಯೋತಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್, ಉಪ ಆಯುಕ್ತ ಕುಸುಮಾ ಕುಮಾರಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕಾಂತರಾಜ್, ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ವಾರ್ತಾ ಮತ್ತು ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಆರ್.ರಾಜು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ, ಪಾಲಿಕೆ ಕಾರ್ಯಪಾಲಕ ಅಭಿಯಂತರ ನಾಗರಾಜು, ಅಭಿವೃದ್ಧಿ ಅಧಿ ಕಾರಿ ಎಂ.ಸಿ.ಶ್ರೀನಿವಾಸ್, ಡಿಹೆಚ್‍ಓ ಡಾ. ವೆಂಕಟೇಶ್ ಇನ್ನಿತರರು ಹಾಜರಿದ್ದರು.
ಹೋಟೆಲ್ ಮಾಲೀಕರ ಸಂಘ: ಹೋಟೆಲ್ ಮಾಲೀಕರ ಸಂಘದ ಪದಾ ಧಿಕಾರಿಗಳು ಡಾ.ರಾಜ್‍ಕುಮಾರ್ ಉದ್ಯಾನ ದಲ್ಲಿ ರಾಜ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿ ದರು. ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ, ಪದಾಧಿಕಾರಿಗಳಾದ ರವಿಶಾಸ್ತ್ರಿ, ಸುಬ್ರಹ್ಮಣ್ಯ ತಂತ್ರಿ, ಪ್ರಭಾಕರ್, ಮಹೇಶ್ ಕಾಮತ್, ಮಲ್ಲಿಕಾರ್ಜುನ, ಮರಿದೇವರು, ಮುರಳಿ, ಮಹದೇವು, ಪುರುಷೋತ್ತಮ್, ಎ.ಸಿ.ರವಿ, ಚಂದ್ರು ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಚಾಮರಾಜ ಜೋಡಿ ರಸ್ತೆ: ಚಾಮ ರಾಜ ಜೋಡಿ ರಸ್ತೆಯಲ್ಲಿರುವ ಡಾ.ರಾಜ್ ಪುತ್ಥಳಿಗೆ ಮಯೂರ ಕನ್ನಡ ಯುವಕರ ಸಂಘದ ಆಶ್ರಯದಲ್ಲಿ ಅಧ್ಯಕ್ಷ ಶ್ರೀನಾಥ್ ಬಾಬು ಮಾಲಾರ್ಪಣೆ ಮಾಡಿ ಗೌರ ವಿಸಿದರು. ಬಳಿಕ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.
ಸ್ವಾತಂತ್ರ್ಯ ಹೋರಾಟಕ್ಕೆ ಮಹಾತ್ಮ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಹೇಗೆ ನಾಯಕತ್ವ ವಹಿಸಿ ದೇಶ ಕ್ಕಾಗಿ ಹೋರಾಡಿದರೋ ಅದೇ ರೀತಿ ಕನ್ನಡ ಮೇರು ನಟ ಡಾ.ರಾಜ್‍ಕುಮಾರ್ ಕನ್ನಡ ಭಾಷೆ, ನೆಲ, ಜಲ ವಿಚಾರವಾಗಿ ಮುಂದಾಳತ್ವ ವಹಿಸಿ ಗೋಕಾಕ್ ಚಳ ವಳಿಯಲ್ಲಿ ಯಶಸ್ವಿಯಾದರು. ಅವರ ಪ್ರತಿಯೊಂದು ಚಿತ್ರವೂ ಕೌಟುಂಬಿಕ ಪ್ರಧಾನವಾಗಿದ್ದು, ಸಮಾಜಕ್ಕೆ ಉತ್ತಮ ಸಂದೇಶ ನೀಡಿವೆ. ಸ್ವತಃ ಯೋಗಾಭ್ಯಾಸಿ ಯಾಗಿ ಸಹಸ್ರಾರು ಜನರು ಯೋಗ ಮಾಡುವಂತೆ ಪ್ರೇರೇಪಿಸಿದವರು. ಅಭಿ ಮಾನಿಗಳೇ ನಮ್ಮ ದೇವರು ಎನ್ನುವ ಅವರ ಸರಳತೆ ಪ್ರತಿಯೊಬ್ಬ ನವ ಕಲಾ ವಿದನಿಗೂ ಮಾದರಿಯಾಗಿದೆ ಎಂದರು. ಮಯೂರ ಕನ್ನಡ ಯುವಕರ ಬಳಗದ ಪದಾಧಿಕಾರಿಗಳಾದ ಕಿಶೋರ್, ಜಿ.ರಾಘ ವೇಂದ್ರ, ಪುನೀತ್, ಶೇಖರ್, ಡೈರಿ ವೆಂಕಟೇಶ್, ಲೋಕೇಶ್, ಎಸ್.ಎನ್. ರಾಜೇಶ್, ಮಂಜುನಾಥ್, ಕಿಶೋರ್, ವಿಕ್ರಂ ಅಯ್ಯಂಗಾರ್, ವಿನಯ್ ಕಣ ಗಾಲ್ ಇನ್ನಿತರರು ಉಪಸ್ಥಿತರಿದ್ದರು.

ಮಜ್ಜಿಗೆ, ಪಾನಕ ವಿತರಣೆ: ರಾಜ್ ಹುಟ್ಟು ಹಬ್ಬದ ಅಂಗವಾಗಿ ಮೈಸೂರಿನ ವಿವಿಧೆಡೆ ಅಭಿಮಾನಿಗಳು ಡಾ.ರಾಜ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಬಳಿಕ ಮಜ್ಜಿಗೆ, ಪಾನಕ ವಿತರಿಸಿದರು.

ಡಾ.ರಾಜ್ ಉದ್ಯಾನದಲ್ಲಿರುವ ರಾಜ್ ಪ್ರತಿಮೆಗೆ ಜೈ ಕರುನಾಡ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ಬಿ.ರಾಜು, ಪುನೀತ್, ಪ್ರಸನ್ನ, ಮಂಜು ನಾಥ್, ಷರೀಫ್, ಮಹೇಶ್ ಇನ್ನಿತರರು ಹಾಜರಿದ್ದರು. ಶಿವಸೈನ್ಯ ಡಾ.ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬಿ.ಎಸ್.ರವಿ ಹಾಗೂ ಪದಾಧಿ ಕಾರಿಗಳೂ ಈವೇಳೆ ಉಪಸ್ಥಿತರಿದ್ದರು.

Translate »