ಬಾಂಬರ್ ಪೈಕಿ ಓರ್ವ ಮಹಿಳೆ, ಇನ್ನೋರ್ವ ಯುಕೆಯಲ್ಲಿ ವ್ಯಾಸಂಗ ಮಾಡಿದ್ದ!
ಮೈಸೂರು

ಬಾಂಬರ್ ಪೈಕಿ ಓರ್ವ ಮಹಿಳೆ, ಇನ್ನೋರ್ವ ಯುಕೆಯಲ್ಲಿ ವ್ಯಾಸಂಗ ಮಾಡಿದ್ದ!

April 25, 2019

ಕೊಲಂಬೋ: ಈಸ್ಟರ್ ಹಬ್ಬದಂದು ಶ್ರೀಲಂಕಾದ ಕೊಲಂಬೋದಲ್ಲಿ ಭೀಕರ ಸ್ಫೋಟಗಳನ್ನು ನಡೆಸಿದ್ದ ಒಂಬತ್ತು ಆತ್ಮಾಹುತಿ ಬಾಂಬರ್‍ಗಳ ಪೈಕಿ ಒಬ್ಬ ಮಹಿಳೆಯೂ ಸೇರಿದ್ದಾಳೆ ಎಂದು ಶ್ರೀಲಂಕಾ ಉಪ ರಕ್ಷಣಾ ಸಚಿವರು ಬುಧ ವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸ್ಫೋಟಗಳನ್ನು ಒಂಬತ್ತು ಅತ್ಮಾಹುತಿ ಬಾಂಬರ್ ನಡೆಸಿದ್ದರು ಎಂದು ಖಚಿತ ಪಡಿಸಿ, 8 ಮಂದಿಯನ್ನು ಪೊಲೀಸರು ಗುರುತಿಸಿದ ನಂತರ ರಕ್ಷಣಾ ಸಚಿವ ರುವಾನ್ ವಿಜೆವರ್ದನೆ ಈ ವಿಷಯ ತಿಳಿಸಿದ್ದಾರೆ. ಈ ಪೈಕಿ ಒಬ್ಬ ವ್ಯಕ್ತಿ ಬ್ರಿಟನ್ ಹಾಗೂ ಆಸ್ಟ್ರೇಲಿಯಾದಲ್ಲಿ ವ್ಯಾಸಂಗ ನಡೆಸಿದ್ದ ಎಂದು ಸ್ಟ್ರೈಟ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ದಕ್ಷಿಣ ಏಷ್ಯಾದ ಇತಿಹಾಸದಲ್ಲೇ ಅತ್ಯಂತ ಭಯಾ ನಕ ಎಂದೇ ಪರಿಗಣಿಸಲಾಗಿರುವ ಈ ಸ್ಫೋಟಗಳಲ್ಲಿ ಈವರೆಗೆ ಕನಿಷ್ಠ 359 ಮಂದಿ ಮೃತಪಟ್ಟಿದ್ದು, ಈ ಪೈಕಿ 50ಕ್ಕೂ ಅಧಿಕ ಮಂದಿ ವಿದೇಶಿಯರು ಸೇರಿದ್ದಾರೆ.

Translate »