ನಿಮ್ಮ ಬೈಕ್ ಇಲ್ಲವೇ ಸ್ಕೂಟರ್ ನೋ ಪಾರ್ಕಿಂಗ್‍ನಲ್ಲಿದ್ದರೆ‘ವ್ಹೀಲ್ ಲಾಕ್’
ಮೈಸೂರು

ನಿಮ್ಮ ಬೈಕ್ ಇಲ್ಲವೇ ಸ್ಕೂಟರ್ ನೋ ಪಾರ್ಕಿಂಗ್‍ನಲ್ಲಿದ್ದರೆ‘ವ್ಹೀಲ್ ಲಾಕ್’

April 25, 2019

ಮೈಸೂರು: ವಾಹನ ಸಂಚಾರ ಸುಗಮಗೊಳಿಸಿ, ಅಪಘಾತಗಳನ್ನು ತಪ್ಪಿಸಲು ಸಂಚಾರಿ ಪೊಲೀಸರು ಹತ್ತು ಹಲವು ನಿಯಮ ಗಳನ್ನು ಜಾರಿ ಮಾಡಿದಾಗ್ಯೂ ವಾಹನ ಬಳಕೆ ದಾರರು ಅವುಗಳನ್ನು ಪಾಲಿಸುತ್ತಿಲ್ಲ.

ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ ಯಾದರೂ, ರಸ್ತೆಗಳು ಮಾತ್ರ ಇದ್ದ ಸ್ಥಿತಿಯಲ್ಲೇ ಇರುವುದರಿಂದ ಲಭ್ಯವಿರುವ ರಸ್ತೆ, ಪಾರ್ಕಿಂಗ್ ಸ್ಥಳವನ್ನು ಯೋಜನಾಬದ್ಧ ಹಾಗೂ ನಿಯಮಾ ನುಸಾರ ಬಳಸಿಕೊಳ್ಳದೇ ಅನ್ಯಮಾರ್ಗವಿಲ್ಲ.

ಎಲ್ಲೆಂದರಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿದ್ದರಿಂದ ಇನ್ನಿತರೆ ವಾಹನ ಚಾಲಕರು ಹಾಗೂ ಪಾದಚಾರಿಗಳಿಗೆ ಉಂಟಾಗುವ ತೊಂದರೆ ತಪ್ಪಿಸಲೆಂದು ಈ ಹಿಂದಿನಿಂದಲೂ ಮೈಸೂರು ನಗರದಾದ್ಯಂತ ಪ್ರಮುಖ ಸ್ಥಳಗಳಲ್ಲಿ ‘ನೋ ಪಾರ್ಕಿಂಗ್’ ಬೋರ್ಡ್ ಹಾಕಿ ಸಂಚಾರ ನಿಯಮ ಪಾಲಿಸುವಂತೆ ನಿರ್ಬಂಧ ಹಾಕಲಾಗುತ್ತಿತ್ತು.

ನೋ ಪಾರ್ಕಿಂಗ್ ಫಲಕವಿದ್ದರೂ ಕೆಲವರು ಅಲ್ಲೇ ತಮ್ಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಿ ದ್ದರಿಂದ ಅಂತಹ ವಾಹನಗಳನ್ನು ವಶಕ್ಕೆ ಪಡೆದು ಠಾಣೆಗೆ ಲಿಫ್ಟ್ ಮಾಡಲೆಂದು ಟೈಗರ್ ವಾಹನ ಗಳನ್ನು ಕಾರ್ಯಾಚರಣೆಗೆ ಸಂಚಾರ ಪೊಲೀಸರು ಬಳಸುತ್ತಿದ್ದರು. ಯಾವುದೇ ಮುನ್ಸೂಚನೆ ಇಲ್ಲದೆ, ನೋ ಪಾರ್ಕಿಂಗ್ ಸ್ಥಳದಲ್ಲಿದ್ದ ವಾಹನಗಳನ್ನು ಕೊಂಡೊಯ್ಯುತ್ತಿದ್ದರಿಂದ ಆತಂಕಗೊಂಡ ಮಾಲೀಕರು, ಕಡೆಗೆ ಠಾಣೆಗೆ ತೆರಳಿ ನಿಯಮ ಉಲ್ಲಂಘನೆ ದಂಡ ಹಾಗೂ ವಾಹನ ಸಾಗಿಸಿದ ಶುಲ್ಕ ಪಾವತಿಸಿ ತಮ್ಮ ವಾಹನವನ್ನು ಪಡೆಯಬೇಕಾಗಿತ್ತು. ತರುವಾಗ ವಾಹನ ಗಳಿಗೆ ಹಾನಿ ಆಗುವುದು, ಕೆಲ ಬಿಡಿ ಭಾಗಗಳು ಅಥವಾ ವಾಹನದ ಡಿಕ್ಕಿಯಲ್ಲಿದ್ದ ವಸ್ತುಗಳು ನಾಪತ್ತೆಯಾಗಿವೆ ಎಂಬಿತ್ಯಾದಿ ದೂರುಗಳು ವ್ಯಾಪಕವಾಗಿ ಕೇಳಿ ಬಂದು ಹೊಸದೊಂದು ತಲೆನೋವಿಗೂ ಕಾರಣವಾಗಿತ್ತು.

Translate »