ಮೈಸೂರು: ಗಣರಾಜ್ಯೋತ್ಸವದ ಅಂಗವಾಗಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಜ.26ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಚಾಮುಂಡಿಪುರಂನಲ್ಲಿರುವ ಬಾಲ ಬೋಧಿನಿ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸಾಧಕರಿಗೆ ಸನ್ಮಾನ ಹಾಗೂ ಶಾಲಾ ಮಕ್ಕಳಿಗೆ ಸ್ವಚ್ಛತೆಯ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಶಿಬಿರಕ್ಕೆ ಇಳೈ ಆಳ್ವಾರ್ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಅಖಿಲ ಕರ್ನಾಟಕ ಬ್ರಾಹ್ಮಣ…
ಜ.27 ವಿಷ್ಣು ಸ್ಮರಣಾರ್ಥ `ಸಿಂಹ ಘರ್ಜನೆ’ ಸಂಗೀತ ಸಂಜೆ
January 25, 2019ಮೈಸೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್ ಸ್ಮರಣಾರ್ಥ ಜ.27ರಂದು ಸಂಜೆ 5 ಗಂಟೆಗೆ ಮೈಸೂರು ಪುರಭವನ ಮೈದಾನದಲ್ಲಿ ಡಾ.ರಾಜ್‍ಕುಮಾರ್ ಮ್ಯೂಸಿಕಲ್ ಗ್ರೂಪ್ ವತಿಯಿಂದ ಡಾ.ರಾಜ್‍ಕುಮಾರ್ ಅವರ ಮರುಧ್ವನಿ ಗಾಯಕ ಜಯರಾಂ ಗಾಯನದಲ್ಲಿ `ಸಿಂಹ ಘರ್ಜನೆ’ ಸಂಗೀತ ಸಂಜೆ ಏರ್ಪಡಿಸಲಾಗಿದೆ ಎಂದು ಕಲಾವಿದ ಮೈಕ್ ಚಂದ್ರು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ವಿಷ್ಣುವರ್ಧನ್ ನಟಿಸಿರುವ ಚಿತ್ರಗಳ ಆಯ್ದೆ ಗೀತೆಗಳನ್ನು ಗಾಯಕರು ಪ್ರಸ್ತುತಪಡಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮಾಜಿ ಶಾಸಕ ಎಸ್.ಬಾಲರಾಜ್ ಚಾಲನೆ ನೀಡಲಿದ್ದು, ನಗರಪಾಲಿಕೆ ಮಾಜಿ…
ಮಹಾತ್ಮರ ಸ್ಮರಣೆಯಿಂದ ನಮ್ಮ ಆತ್ಮಾವಲೋಕನ ಸಾಧ್ಯ ಸುತ್ತೂರು ಶ್ರೀಗಳ ಅಭಿಮತ
January 25, 2019ಸುತ್ತೂರು: ಮಹಾತ್ಮರ ಸ್ಮರಣೆ ಮತ್ತು ದರ್ಶನ ಮಾಡುವುದರಿಂದ ಪ್ರತಿಯೊಬ್ಬರಿಗೂ ಆತ್ಮಾವಲೋಕನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿಯವರು ನುಡಿದರು. ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1059ನೆಯ ಜಯಂತಿ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಶಿವಮೊಗ್ಗದ ಕಾರ್ಯಕರ್ತರಿಗೆ ಸುತ್ತೂರು ಶ್ರೀಕ್ಷೇತ್ರದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದ ಶ್ರೀಗಳು ಶಿವಮೊಗ್ಗದಲ್ಲಿ ಆಯೋಜನೆಗೊಂಡಿದ್ದ ಜಯಂತಿ ಮಹೋತ್ಸವವನ್ನು ಶಿವಮೊಗ್ಗದ ಜನತೆ ಶ್ರದ್ಧೆ, ಭಕ್ತಿ, ಶಿಸ್ತು ಮತ್ತು ಆಸಕ್ತಿಯಿಂದ ಆಚರಿಸುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ ಎಂದು ತಿಳಿಸಿದರು….
ತಿ.ನರಸೀಪುರಕ್ಕೆ ಡಿಸಿ, ಎಸ್‍ಪಿ ಭೇಟಿ: ಕುಂಭಮೇಳ ಸಿದ್ಧತೆ ಮಾಹಿತಿ ಸಂಗ್ರಹ
January 25, 2019ತಿ.ನರಸೀಪುರ: ಮುಂದಿನ ಫೆ.17ರಿಂದ ನಡೆಯಲಿರುವ ಮೂರು ದಿನಗಳ ಧಾರ್ಮಿಕ ಉತ್ಸವ ಕುಂಭಮೇಳಕ್ಕೆ ಅಗತ್ಯ ತಯಾರಿ ನಡೆಸುವುದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಪಟ್ಟಣದ ತ್ರಿವೇಣಿ ಸಂಗಮಕ್ಕೆ ಗುರುವಾರ ಭೇಟಿ ನೀಡಿದರು. ಈ ಹಿಂದಿನ ಕುಂಭಮೇಳದಲ್ಲಿ ಭಕ್ತರಿಗೆ ಒದಗಿಸಲಾಗಿದ್ದ ಸೌಲಭ್ಯಗಳನ್ನು ಪ್ರಸಕ್ತ ಕುಂಭಮೇಳದಲ್ಲಿಯೂ ಮಾಡಿಕೊಡುವ ಸಂಬಂಧ ತ್ರಿವೇಣಿ ಸಂಗಮದ ಭಿಕ್ಷೇಶ್ವರ, ಮೂಲಸ್ಥಾನೇಶ್ವರ, ಅಗಸ್ತೇಶ್ವರ ಗುಂಜಾ ನರಸಿಂಹಸ್ವಾಮಿ ದೇವಾಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ತಾತ್ಕಾಲಿಕ ಶೌಚಾಲಯ, ವಾಹನ ನಿಲುಗಡೆ ವ್ಯವಸ್ಥೆ,…
ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಂಜನಗೂಡಿಗೆ 300 ಮನೆ ಮಂಜೂರು: ಹರ್ಷವರ್ಧನ್
January 25, 2019ನಂಜನಗೂಡು: ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ನಗರದ ಚಾಮಲಾಪುರದ ಹುಂಡಿ ಮತ್ತು ಅಶೋಕಪುರಂ ಬಡಾವಣೆಗಳಿಗೆ 300 ಮನೆಗಳು ಮಂಜೂರಾಗಿದ್ದು, ಜ.26ರಂದು ಗುದ್ದಲಿ ಪೂಜೆ ನೆರವೇರಿಸಲಾಗುತ್ತದೆ ಎಂದು ಶಾಸಕ ಬಿ.ಹರ್ಷವರ್ದನ್ ತಿಳಿಸಿದ್ದಾರೆ. ಅಶೋಕಪುರಂ ಬಡಾವಣೆಯಲ್ಲಿ ಗುರುವಾರ ಪಾದಯಾತ್ರೆ ನಡೆಸಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬದಲಾದ ರಾಜಕೀಯ ವಿದ್ಯಾಮಾನಗಳಿಂದಾಗಿ ಕಳೆದ 15 ದಿನಗಳಿಂದ ಇಲ್ಲಿಗೆ ಬರಲು ಸಾಧ್ಯವಾಗಿರಲಿಲ್ಲ. ಇಂದಿನಿಂದ ಅಧಿಕಾರಿಗಳೊಂದಿಗೆ ನಗರ ಮತ್ತು ಕ್ಷೇತ್ರಾದ್ಯಂತ ಪ್ರವಾಸ ಕೈಗೊಂಡು ಸಾರ್ವಜನಿಕರ ಸಮಸ್ಯೆಗಳು, ಬಡಾವಣೆಗಳ ಕುಂದು ಕೊರತೆಗಳು…
ಮ್ಯಾಕ್ಸಿಕ್ಯಾಬ್ ಡಿಕ್ಕಿ: ಮೊಪೆಡ್ ಸವಾರ ಸಾವು
January 25, 2019ಮೈಸೂರು: ಮ್ಯಾಕ್ಸಿಕ್ಯಾಬ್ ವಾಹನ ಡಿಕ್ಕಿ ಹೊಡೆದು ಮೊಪೆಡ್ ಸವಾರ ಮೃತಪಟ್ಟಿರುವ ಘಟನೆ ಮೈಸೂರಿನ ಗನ್‍ಹೌಸ್ ಸಮೀಪ ಸಂಭವಿಸಿದೆ. ಮೈಸೂರಿನ ವಿದ್ಯಾನಗರದ ನಿವಾಸಿ ಆರ್.ಗೋಪಾಲಕೃಷ್ಣ(68) ಅಪಘಾತದಲ್ಲಿ ಮೃತಪಟ್ಟವರು. ನಂಜುಮಳಿಗೆಯಲ್ಲಿ ಟೈಲರಿಂಗ್ ಕೆಲಸ ಮಾಡಿಕೊಂಡಿದ್ದ ಇವರು ಮಂಗಳವಾರ ರಾತ್ರಿ ಅಂಗಡಿಯಿಂದ ಮನೆಗೆ ತೆರಳುತ್ತಿದ್ದಾಗ ಅಪ ಘಾತ ಸಂಭವಿಸಿದೆ. ಗೋಪಾಲಕೃಷ್ಣ ತಮ್ಮ ಟಿವಿಎಸ್ ಎಕ್ಸೆಲ್ (ಕೆಎ-02, ಕ್ಯೂ-0427) ಮೊಪೆಡ್‍ನಲ್ಲಿ ಗನ್‍ಹೌಸ್ ವೃತ್ತದಿಂದ ಕುಸ್ತಿ ಅಖಾಡದ ಕಡೆಗೆ ರಾಂಗ್ ಸೈಡ್‍ನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಜಯಚಾಮರಾಜ (ಹಾರ್ಡಿಂಜ್) ವೃತ್ತದ ಕಡೆಯಿಂದ ವೇಗವಾಗಿ ಬಂದ…
ವ್ಯಕ್ತಿ ಆತ್ಮಹತ್ಯೆ
January 25, 2019ಮೈಸೂರು: ವ್ಯಕ್ತಿ ಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂ ರಿನ ಬೋಗಾದಿಯಲ್ಲಿ ನಡೆದಿದೆ. ಬೋಗಾದಿ 2ನೇ ಹಂತದ ನಿವಾಸಿ ಶಿವಶಂಕರ್ (32) ಆತ್ಮಹತ್ಯೆ ಮಾಡಿ ಕೊಂಡವರು. ಬುಧವಾರ ಪತ್ನಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ. ಎಲೆಕ್ಟ್ರಿಷಿ ಯನ್ ಆಗಿ ಕೆಲಸ ಮಾಡಿಕೊಂಡಿದ್ದ ಶಿವಶಂಕರ್, ಕೆಲ ವರ್ಷಗಳ ಹಿಂದೆ ಆಯತಪ್ಪಿ ಬಿದ್ದಿದ್ದರು. ಚಿಕಿತ್ಸೆ ಪಡೆಯುತ್ತಿ ದ್ದರಾದರೂ ಅವರು ನೆನಪಿನ ಶಕ್ತಿ ಕಳೆದು ಕೊಂಡಿದ್ದರು. ಇದರಿಂದ ಮಾನಸಿಕ ಖಿನ್ನ ತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿ…
ಜ.27ರಂದು ಮೈಸೂರಿಗರ ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ `ಎಲಿಗ್ಸರ್ ಸೈಕ್ಲೊಥಾನ್-19’
January 25, 2019ಮೈಸೂರು: ಮೈಸೂರಿನ ಜನರ ದೈಹಿಕ ಸದೃಢತೆ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಮೈಸೂರಿನ ಎಲಿಗ್ಸರ್ ಸಂಸ್ಥೆ ಜ.27ರಂದು ಬೆಳಿಗ್ಗೆ ಸೈಕ್ಲೊಥಾನ್-19 ಆಯೋಜಿಸಿದೆ. ಒಂದು ಸಾವಿರಕ್ಕೂ ಹೆಚ್ಚು ಮಂದಿ ಸೈಕಲ್ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಮೂಲಕ ಮೈಸೂರಿನ ಜನರಿಗೆ ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಳ್ಳುವಂತೆ ಉತ್ತೇಜಿಸಲಿದ್ದಾರೆ ಎಂದು ಎಲಿಗ್ಸರ್ ತಂಡದ ಪರವಾಗಿ ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಎಂ.ಎನ್.ನಟರಾಜ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸೈಕಲ್ ಬಳಕೆ ಯಿಂದ ದೈಹಿಕ ಹಾಗೂ ಮಾನಸಿಕ…
ಪ್ರಿಯಾಂಕಾ ಸಕ್ರಿಯ ರಾಜಕಾರಣಕ್ಕೆ
January 24, 2019ನವದೆಹಲಿ: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳಿರುವಾಗ ಪಕ್ಷಕ್ಕೆ ಹೆಚ್ಚಿನ ಬಲ ತುಂಬುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಕಾಂಗ್ರೆಸ್, ನೆಹರು ಕುಟುಂಬದ ಇನ್ನೊಂದು ಕುಡಿಯನ್ನೂ ಸಕ್ರಿಯ ರಾಜಕಾರಣಕ್ಕೆ ಸೆಳೆದಿದೆ. ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹಾಗೂ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ದಂಪತಿ ಪುತ್ರಿ, ಇಂದಿರಾ ಗಾಂಧಿ ಮೊಮ್ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ( 47 ವರ್ಷ) ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿ ರಾಜಕೀಯ ಪ್ರವೇಶಕ್ಕೆ ವೇದಿಕೆ ಕಲ್ಪಿಸಲಾಗಿದೆ. ಇದರೊಂದಿಗೆ ಉತ್ತರ ಪ್ರದೇಶದ ಪೂರ್ವ…
ಇಂದು ದೋಸ್ತಿ ಸರ್ಕಾರದ ಮಹತ್ವದ ಸಮನ್ವಯ ಸಮಿತಿ ಸಭೆ
January 24, 2019ಬೆಂಗಳೂರು: ಆಪರೇಷನ್ ಕಮಲದ ಭೀತಿ ಹಾಗೂ ಕಾಂಗ್ರೆಸ್ ಶಾಸಕರ ಮಾರಾಮಾರಿ ಪ್ರಕರಣದ ಬೆನ್ನಲ್ಲೇ ದೋಸ್ತಿ ಸರ್ಕಾರದ ಕಾರ್ಯಸೂಚಿ ನಿಗದಿ ಗೊಳಿಸುವ ಮಹತ್ವದ ಸಮನ್ವಯ ಸಮಿತಿ ಸಭೆ ಗುರುವಾರ ನಡೆಯಲಿದೆ. ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ನಾಳೆ ಸಂಜೆ ಸಭೆ ಕರೆದಿದ್ದು, ಸಭೆಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜನಪ್ರಿಯ ಬಜೆಟ್ ಮಂಡನೆ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಅಂತೆಯೇ ಲೋಕಸಭಾ ಚುನಾವಣಾ ಮೈತ್ರಿ, ಸ್ಥಾನ ಹೊಂದಾಣಿಕೆ ಮತ್ತಿತರ ರಾಜಕೀಯ ವಿಚಾರಗಳ ಸಮಾಲೋಚನೆಯೂ ನಡೆಯಲಿದೆ…










