ಮೈಸೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್ ಸ್ಮರಣಾರ್ಥ ಜ.27ರಂದು ಸಂಜೆ 5 ಗಂಟೆಗೆ ಮೈಸೂರು ಪುರಭವನ ಮೈದಾನದಲ್ಲಿ ಡಾ.ರಾಜ್‍ಕುಮಾರ್ ಮ್ಯೂಸಿಕಲ್ ಗ್ರೂಪ್ ವತಿಯಿಂದ ಡಾ.ರಾಜ್‍ಕುಮಾರ್ ಅವರ ಮರುಧ್ವನಿ ಗಾಯಕ ಜಯರಾಂ ಗಾಯನದಲ್ಲಿ `ಸಿಂಹ ಘರ್ಜನೆ’ ಸಂಗೀತ ಸಂಜೆ ಏರ್ಪಡಿಸಲಾಗಿದೆ ಎಂದು ಕಲಾವಿದ ಮೈಕ್ ಚಂದ್ರು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ವಿಷ್ಣುವರ್ಧನ್ ನಟಿಸಿರುವ ಚಿತ್ರಗಳ ಆಯ್ದೆ ಗೀತೆಗಳನ್ನು ಗಾಯಕರು ಪ್ರಸ್ತುತಪಡಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮಾಜಿ ಶಾಸಕ ಎಸ್.ಬಾಲರಾಜ್ ಚಾಲನೆ ನೀಡಲಿದ್ದು, ನಗರಪಾಲಿಕೆ ಮಾಜಿ ಸದಸ್ಯ ಆರ್.ಸೋಮಸುಂದರ್ ಅಧ್ಯಕ್ಷತೆ ವಹಿಸುವರು ಎಂದರು. ಸುದ್ದಿಗೋಷ್ಠಿಯಲ್ಲಿ ಗಾಯಕ ಜಯರಾಂ, ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಸುಚೀಂದ್ರ, ಎನ್.ಸುರೇಶ್, ವಿಕ್ರಂ ಅಯ್ಯಂಗಾರ್, ಶಿವು ಉಪಸ್ಥಿತರಿದ್ದರು.