ಮೈಸೂರು: ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಮೈಸೂರಿನ ರಂಗ ಚಾವಡಿ ಜಂಟಿ ಆಶ್ರಯದಲ್ಲಿ ಜ.24 ಮತ್ತು 25ರಂದು `ರಂಗಸಂಭ್ರಮ-2019’ ಶೀರ್ಷಿಕೆಯಡಿ ಪೌರಾಣಿಕ ನಾಟಕೋತ್ಸವ ಏರ್ಪಡಿಸಲಾಗಿದೆ ಎಂದು ರಂಗ ಚಾವಡಿ ಪ್ರಧಾನ ಕಾರ್ಯದರ್ಶಿ ಸಂಗಾಪುರ ನಾಗರಾಜ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.23ರಿಂದ 25ರವರೆಗೆ ನಾಟಕೋತ್ಸವ ನಡೆಸಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೆ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾದ ಕಾರಣ ಜ.24 ಮತ್ತು 25ಕ್ಕೆ ಮುಂದೂಡಲಾಗಿದೆ ಎಂದು ಹೇಳಿದರು. ಮೈಸೂರಿನ…
ಜ.26, 27ರಂದು ನಗರ ಮಟ್ಟದ ಪ್ರೊ ಕಬಡ್ಡಿ ಪಂದ್ಯಾವಳಿ
January 23, 2019ಮೈಸೂರು: ವಿದ್ಯಾ ವರ್ಧಕ ಸಂಘದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ 40ನೇ ವರ್ಷದ ಸಂಭ್ರಮಾ ಚರಣೆ ಅಂಗವಾಗಿ ಜ.26 ಮತ್ತು 27 ರಂದು ನಗರ ಮಟ್ಟದ ಪ್ರೊ ಕಬಡ್ಡಿ ಪಂದ್ಯಾ ವಳಿ ಆಯೋಜಿಸಲಾಗಿದೆ ಎಂದು ಕಾಲೇ ಜಿನ ಪ್ರಾಂಶುಪಾಲ ಡಾ.ಎಸ್.ಮರೀಗೌಡ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಪಂದ್ಯಾವಳಿಯು ಕಾಲೇಜಿನ ಆವರಣದಲ್ಲಿ ನಡೆಯಲಿದ್ದು, ಮೈಸೂರಿನ ಕಾಲೇಜು ಮಟ್ಟದ ಪ್ರೊ ಕಬಡ್ಡಿ ಪಂದ್ಯಾ ವಳಿ ಆಯೋಜಿಸಿರುವುದು ಇದೇ ಪ್ರಥಮ. ಒಟ್ಟು 8 ತಂಡಗಳು…
ಸಾಲ ಬಾಧೆ: ವ್ಯಕ್ತಿ ನೇಣಿಗೆ ಶರಣು
January 23, 2019ಮೈಸೂರು: ಸಾಲದ ಬಾಧೆಗೆ ಹೆದರಿ ವ್ಯಕ್ತಿಯೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಜಿ ಕೊಪ್ಪಲಿನಲ್ಲಿ ಕಳೆದ ರಾತ್ರಿ ಸಂಭವಿಸಿದೆ. ಕೆಜಿ ಕೊಪ್ಪಲು ನಿವಾಸಿ ನಾರಾಯಣ ಅವರ ಮಗ ಗಂಗಾಧರ್(46) ನೇಣಿಗೆ ಶರಣಾ ದವರು. ಕಾರು ಚಾಲಕನಾದ ಅವರು, ಮಂಗಳವಾರ ರಾತ್ರಿ ಊಟ ಮಾಡಿ ಮಲಗಿದರು. ಬೆಳಿಗ್ಗೆ ಎದ್ದು ನೋಡಿದಾಗ ನೇಣು ಹಾಕಿಕೊಂಡು ಸಾವನ್ನಪ್ಪಿದ್ದರು ಎಂದು ಕುಟುಂಬ ದವರು ಪೊಲೀಸರಿಗೆ ತಿಳಿಸಿದ್ದಾರೆ. ಕಾರು ಚಾಲನೆ ಮಾಡಿ ಪತ್ನಿ, ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ ಗಂಗಾಧರ್, ತುಂಬಾ ಸಾಲ…
ಕಾಯಕ ಯೋಗಿ ಶಿವನಲ್ಲಿ ಐಕ್ಯ
January 23, 2019ಗುರು ಉದ್ಧಾನ ಶ್ರೀ ಗದ್ದುಗೆ ಸಮೀಪವೇ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಕ್ರಿಯಾ ಸಮಾಧಿ ತುಮಕೂರು: ವಿಶ್ವಚೇತನ, ವಿಶ್ವರತ್ನ, ಕಾಯಕಯೋಗಿ, ನಡೆದಾಡುವ ದೇವರು ಡಾ. ಶಿವಕುಮಾರ ಸ್ವಾಮೀಜಿಗಳ ಯುಗಾಂತ್ಯವಾಗಿದೆ. ಸೋಮವಾರ ಬೆಳಿಗ್ಗೆ 11 ಗಂಟೆ 44 ನಿಮಿಷಕ್ಕೆ ಲಿಂಗೈಕ್ಯರಾದ ಮಹಾನ್ ಮಾನವತಾವಾದಿಗೆ ಕೋಟಿ ಮನಸುಗಳು ಭಾರ ಹೃದಯದಿಂದ ಬೀಳ್ಕೊಡುಗೆ ನೀಡಿದ್ದಾರೆ. ಸಿದ್ಧಗಂಗಾ ಮಠದ ಆವರಣದಲ್ಲಿ ಗುರು ಉದ್ಧಾನ ಶಿವಯೋಗಿಗಳ ಪಕ್ಕದಲ್ಲಿ ಶಿವಕುಮಾರ ಸ್ವಾಮೀಜಿ ಅವರನ್ನು ಗದ್ದುಗೆಯಲ್ಲಿ ಐಕ್ಯಗೊಳಿಸಲಾಗಿದೆ. ಕ್ರಿಯಾ ಸಮಾಧಿ: ಮಂಗಳವಾರ ಸಂಜೆ 4.30ರ ವೇಳೆಗೆ ಆರಂಭವಾದ ಕ್ರಿಯಾ…
ಮೂರೂವರೆ ದಶಕದ ಹಿಂದೆಯೇ ನಿರ್ಮಾಣವಾಗಿತ್ತು ಸಮಾಧಿ ಭವನ
January 23, 2019ತುಮಕೂರು: ಸೋಮವಾರ ಶಿವೈಕ್ಯರಾದ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಅವರ ಕ್ರಿಯಾ ಸಮಾಧಿಗೆ ಮೂರು ದಶಕಗಳ ಹಿಂದೆಯೇ ಜಾಗ ನಿಗದಿಯಾಗಿ, ಸಮಾಧಿ ಭವನವನ್ನು ನಿರ್ಮಿಸಲಾಗಿದೆ. 1982ರಲ್ಲೇ ಕಾಯಕ ಯೋಗಿಯ ಸಮಾಧಿಗೆ ಸ್ಥಳ ನಿಗದಿ ಮಾಡಿ ಸುಮಾರು 3 ಕೋಟಿ ರೂ.ಗಳ ವೆಚ್ಚದಲ್ಲಿ ಸಮಾಧಿ ಭವನವನ್ನು ನಿರ್ಮಿಸಲಾಗಿದೆ. ಶ್ರೀ ಮಠದ ಆವರಣದಲ್ಲಿದ್ದ ಆಲದ ಮರ ಕಡಿದು ಭವನ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಆದರೆ ಶ್ರೀಗಳು ಆಲದಮರ ಕಡಿಯಲು ಒಪ್ಪಲಿಲ್ಲ. ಇದರಿಂದ ಈ ಸ್ಥಳ ನೆನೆಗುದಿಗೆ ಬಿದ್ದಿತು. ವಿಸ್ಮಯ ಎಂಬಂತೆ…
ಭಾರವಾದ ಮನಸ್ಸಿಂದ ಭಕ್ತಸಾಗರದ ಬೀಳ್ಕೊಡುಗೆ
January 23, 2019ಸಿದ್ಧಗಂಗೆ: ಶ್ರೀ ವಿಳಂಬಿನಾಮ ಸಂವತ್ಸರದ ಉತ್ತರಾಯಣ ಪುಣ್ಯಕಾಲ. ಹೇಮಂತ ಋತುವಿನ ಪಾಡ್ಯ ದಿನ. ಮಂಗಳವಾರ ಸಂಜೆ 5ರ ವೇಳೆ. ಪಶ್ಚಿಮ ದಿಗಂತದ ಅಂಚಿನತ್ತ ಸಾಗುತ್ತಿದ್ದ ಸೂರ್ಯ ನಿರ್ಗಮಿಸುವುದನ್ನೂ ಮರೆತು ಭುವಿಯತ್ತ ತಿರುಗಿ ಒಂದೆಡೆ ದಿಟ್ಟಿಸಿ ನೋಡುತ್ತಲೇ ಇದ್ದ. ತುಮಕೂರು ಜಿಲ್ಲೆಯ ಸಿದ್ಧಗಂಗೆಯ ಬೆಟ್ಟದ ಭಾರೀ ಬಂಡೆಗಳು, ಬೃಹತ್ ಕಟ್ಟಡಗಳ ನಡುವೆ ಮತ್ತೊಂದು ಸೂರ್ಯನ ಮೆರವಣಿಗೆ ನಿಧಾನವಾಗಿ ಸಾಗುತ್ತಿತ್ತು. ಬಗೆ ಬಗೆ ಹೂವುಗಳಿಂದ ಅಲಂಕೃತವಾದ ರುದ್ರಾಕ್ಷಿ ರಥದಲ್ಲಿ ಮಂದಸ್ಮಿತರಾಗಿ ಆಸೀನರಾಗಿದ್ದ ಕಾವಿಧಾರಿ ಸೂರ್ಯನ ತೇಜಸ್ಸು ಕಂಡು ರವಿತೇಜನೇ ಬೆರಗಾಗಿದ್ದ!…
ಎಲ್ಲರೂ ದಯವಿಟ್ಟು ಪ್ರಸಾದ ಸ್ವೀಕರಿಸಿ: ಭಕ್ತರಿಗೆ ಶ್ರೀಮಠದ ಮಕ್ಕಳ ಮನವಿ
January 23, 2019ತುಮಕೂರು: ಸಿದ್ದಗಂಗೆಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳು ಹೇಗೆ ತ್ರಿವಿಧ ದಾಸೋಹಕ್ಕೆ ಹೆಸರಾಗಿದ್ದರೋ, ಅವರ ಮಠದ ಪುಟ್ಟ ವಿದ್ಯಾರ್ಥಿಗಳೂ ಅದೇ ಕಾಯಕವನ್ನು ಮುಂದುವರಿಸಿದ್ದಾರೆ. ಶ್ರೀಗಳ ಅಂತಿಮ ದರ್ಶನಕ್ಕೆ ಬಂದ ಎಲ್ಲಾ ಭಕ್ತಾದಿಗಳೂ ನಂತರ ಶ್ರೀ ಮಠದಲ್ಲಿ ಪ್ರಸಾದ ಸ್ವೀಕರಿಸಿಯೇ ತೆರಳಬೇಕು. ಆ ಮೂಲಕ ಶ್ರೀಗಳ ಮನದಾಸೆಯನ್ನು ಪೂರೈಸಬೇಕು ಎಂದು ಮಠದ ಶಿಷ್ಯರು, ಶ್ರೀಗಳ ಅನುಯಾಯಿಗಳು ಭಕ್ತಾದಿಗಳಿಗೆ ಮೈಕ್ ಮೂಲಕ ವಿನಂತಿ ಮಾಡುತ್ತಿದ್ದರು. ಸಿದ್ದಗಂಗಾ ಶ್ರೀಗಳ ಅಂತಿಮ ದರ್ಶನ ಪಡೆಯಲು ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು….
109ನೇ ವಯಸ್ಸಿನವರೆಗೂ ಆಸ್ಪತ್ರೆ ಕಾಣದ ಶ್ರೀಗಳು
January 23, 2019ತುಮಕೂರು: ಜನರಿಂದ ಜನರಿಗಾಗಿ ಜೋಳಿಗೆ ಹಿಡಿದ ಮಹಾ ಯೋಗಿ ನಡೆದಾಡುವ ದೇವರು ತಮ್ಮ 109ನೇ ವರ್ಷದವರೆಗೂ ಆಸ್ಪತ್ರೆಯತ್ತ ಸುಳಿದಿರಲಿಲ್ಲ. ಶತಾ ಯುಷಿಯಾದರೂ ಆರೋಗ್ಯ ಕಾಪಾಡಿಕೊಂಡಿದ್ದ ಡಾ. ಶಿವಕುಮಾರ ಸ್ವಾಮೀಜಿ, ಒಂದು ಮಾತ್ರೆಯನ್ನೂ ಸಹ ಸೇವಿಸಿರಲಿಲ್ಲ. ಮಿತ ಆಹಾರ, ಎರಡು ಸೀಳು ಸೇಬು, ಬೇವಿನ ಕಷಾಯ ಸೇರಿದಂತೆ ಮಿತ ಆಹಾರ ದೊಂದಿಗೆ ಮಕ್ಕಳೊಂದಿಗೆ ಲವಲವಿಕೆ ಯಿಂದಲೇ ಇದ್ದರು. 109ನೇ ವಯಸ್ಸಿನ ನಂತರ ವಯೋಸಹಜ ಸಣ್ಣಪುಟ್ಟ ಸಮಸ್ಯೆಗಳಿಗೆ ಮಾತ್ರೆಗಳನ್ನು ಸೇವಿಸ ಲಾರಂಭಿಸಿದರು. ಕಾಲ ಕಳೆದಂತೆ 111ನೇ ವಯಸ್ಸಿಗೆ ಶ್ರೀಗಳು ಶ್ವಾಸ…
ಶ್ರೀಗಳು ನನ್ನನ್ನು ಮಗನಂತೆ ನೋಡುತ್ತಿದ್ದರು
January 23, 2019ವಾರಣಾಸಿ: ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಗಳು ಲಿಂಗೈಕ್ಯರಾಗಿದ್ದು ನಿಜಕ್ಕೂ ಬೇಸರದ ಸಂಗತಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ವಾರಾಣಸಿಯಲ್ಲಿ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ಧಗಂಗಾ ಶ್ರೀಗಳನ್ನು ನೆನಪಿಸಿ ಕೊಂಡರು. ಪ್ರತಿ ಬಾರಿ ತುಮಕೂರು ಸಮೀ ಪದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದಾಗ ಲೆಲ್ಲ ಶ್ರೀಗಳ ಆಶೀರ್ವಾದ ಪಡೆಯುವ ಸೌಭಾಗ್ಯ ದೊರೆತಿದೆ. ಶ್ರೀಗಳು ನನ್ನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು. ಅವರು ಸಮಾಜಕ್ಕೆ, ಮಾನವ ಕಲ್ಯಾಣಕ್ಕೆ ನೀಡಿರುವ ಕೊಡುಗೆ…
ನಡೆದಾಡುವ ದೇವರಿಗೆ ಮೈಸೂರಿನಲ್ಲಿ ಭಕ್ತಿ ನಮನ
January 23, 2019ಮೈಸೂರು: ನಡೆದಾಡುವ ದೇವರು, ಶತಾಯುಷಿ, ತ್ರಿವಿಧ ದಾಸೋಹಿ, ಅಭಿನವ ಬಸವಣ್ಣ ಎಂದೇ ಹೆಸರಾಗಿದ್ದ ಸಿದ್ಧಗಂಗಾ ಮಠದ ಹಿರಿಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಅಗಲಿಕೆಗೆ ಮೈಸೂರಿನಾದ್ಯಂತ ಮಂಗಳವಾರ ನಾನಾ ಕಡೆಗಳಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮಗಳು ನಡೆದವು. ಮೈಸೂರು ಜಿಲ್ಲಾ ಕುಂಚ ನಾಮಫಲಕ ಕಲಾವಿದರ ಸಂಘ, ಮೈಸೂರು ಕನ್ನಡ ವೇದಿಕೆ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಬಸವೇಶ್ವರ ಸೇವಾ ಸಂಘ, ಸಂತೇಪೇಟೆ ಕಾರ್ಮಿಕರ ಸಂಘ, ಬಸವ ಚಿಂತನ ಬಳಗ, ಶ್ರೀಗಳ ಭಕ್ತ ವೃಂದ ಸೇರಿದಂತೆ ನಾನಾ ಸಂಘಟನೆಗಳು ಶ್ರೀಗಳ ಭಾವಚಿತ್ರ ಪೂಜಿಸಿ,…










