ಸಾಲ ಬಾಧೆ: ವ್ಯಕ್ತಿ ನೇಣಿಗೆ ಶರಣು
ಮೈಸೂರು

ಸಾಲ ಬಾಧೆ: ವ್ಯಕ್ತಿ ನೇಣಿಗೆ ಶರಣು

January 23, 2019

ಮೈಸೂರು: ಸಾಲದ ಬಾಧೆಗೆ ಹೆದರಿ ವ್ಯಕ್ತಿಯೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಜಿ ಕೊಪ್ಪಲಿನಲ್ಲಿ ಕಳೆದ ರಾತ್ರಿ ಸಂಭವಿಸಿದೆ. ಕೆಜಿ ಕೊಪ್ಪಲು ನಿವಾಸಿ ನಾರಾಯಣ ಅವರ ಮಗ ಗಂಗಾಧರ್(46) ನೇಣಿಗೆ ಶರಣಾ ದವರು. ಕಾರು ಚಾಲಕನಾದ ಅವರು, ಮಂಗಳವಾರ ರಾತ್ರಿ ಊಟ ಮಾಡಿ ಮಲಗಿದರು. ಬೆಳಿಗ್ಗೆ ಎದ್ದು ನೋಡಿದಾಗ ನೇಣು ಹಾಕಿಕೊಂಡು ಸಾವನ್ನಪ್ಪಿದ್ದರು ಎಂದು ಕುಟುಂಬ ದವರು ಪೊಲೀಸರಿಗೆ ತಿಳಿಸಿದ್ದಾರೆ. ಕಾರು ಚಾಲನೆ ಮಾಡಿ ಪತ್ನಿ, ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ ಗಂಗಾಧರ್, ತುಂಬಾ ಸಾಲ ಮಾಡಿಕೊಂಡಿದ್ದರಿಂದ ಹೆದರಿ ಆತ್ಮಹತ್ಯೆ ದಾರಿ ಹಿಡಿದಿರಬಹುದೆಂದು ಹೇಳಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಸರಸ್ವತಿಪುರಂ ಠಾಣೆ ಪೊಲೀಸರು, ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಗಾರದಲ್ಲಿ ಮರಣೋ ತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಮೃತದೇಹ ಒಪ್ಪಿಸಿದರು.

Translate »