ಜ.26, 27ರಂದು ನಗರ ಮಟ್ಟದ ಪ್ರೊ ಕಬಡ್ಡಿ ಪಂದ್ಯಾವಳಿ
ಮೈಸೂರು

ಜ.26, 27ರಂದು ನಗರ ಮಟ್ಟದ ಪ್ರೊ ಕಬಡ್ಡಿ ಪಂದ್ಯಾವಳಿ

January 23, 2019

ಮೈಸೂರು: ವಿದ್ಯಾ ವರ್ಧಕ ಸಂಘದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ 40ನೇ ವರ್ಷದ ಸಂಭ್ರಮಾ ಚರಣೆ ಅಂಗವಾಗಿ ಜ.26 ಮತ್ತು 27 ರಂದು ನಗರ ಮಟ್ಟದ ಪ್ರೊ ಕಬಡ್ಡಿ ಪಂದ್ಯಾ ವಳಿ ಆಯೋಜಿಸಲಾಗಿದೆ ಎಂದು ಕಾಲೇ ಜಿನ ಪ್ರಾಂಶುಪಾಲ ಡಾ.ಎಸ್.ಮರೀಗೌಡ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಪಂದ್ಯಾವಳಿಯು ಕಾಲೇಜಿನ ಆವರಣದಲ್ಲಿ ನಡೆಯಲಿದ್ದು, ಮೈಸೂರಿನ ಕಾಲೇಜು ಮಟ್ಟದ ಪ್ರೊ ಕಬಡ್ಡಿ ಪಂದ್ಯಾ ವಳಿ ಆಯೋಜಿಸಿರುವುದು ಇದೇ ಪ್ರಥಮ. ಒಟ್ಟು 8 ತಂಡಗಳು ಪಾಲ್ಗೊಳ್ಳುತ್ತಿದ್ದು, ಈ ಎಲ್ಲಾ ತಂಡಗಳಿಗೆ ಫ್ರಾಂಚೈಸಿಗಳು ಮಾಲೀಕರಾಗಿರುತ್ತಾರೆ ಎಂದರು.

ವಿವಿಧ ಕಾಲೇಜುಗಳ ಆಸಕ್ತ ಕಬಡ್ಡಿ ಆಟ ಗಾರರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಈ ಪೈಕಿ ಆಟಗಾರರನ್ನು ಬಿಡ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರಥಮ ಸ್ಥಾನ ಗಳಿ ಸಿದ ತಂಡಕ್ಕೆ 20 ಸಾವಿರ ರೂ., ದ್ವಿತೀಯ ಸ್ಥಾನಕ್ಕೆ 15 ಸಾವಿರ ರೂ., ತೃತೀಯ ಹಾಗೂ 4ನೇ ಸ್ಥಾನ ಗಳಿಸಿದ ತಂಡಗಳಿಗೆ ತಲಾ 10 ಸಾವಿರ ರೂ. ನಗದು ಬಹುಮಾನ ದೊಂದಿಗೆ ಪಾರಿತೋಷಕ ನೀಡಲಾಗುವುದು. ಜ.26ರಂದು ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ಏರ್ಪಡಿಸಿದ್ದು, ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಪಂದ್ಯಾವಳಿಗೆ ಚಾಲನೆ ನೀಡಲಿ ದ್ದಾರೆ. ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ, ಜಿಪಂ ಸದಸ್ಯ ದಿನೇಶ್, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ.ಸಿ.ವೆಂಕಟೇಶ್ ಪಾಲ್ಗೊಳ್ಳಲಿ ದ್ದಾರೆ. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಸಮಾರೋಪ ಹಾಗೂ ಬಹು ಮಾನ ವಿತರಣಾ ಸಮಾರಂಭವನ್ನು ಜ.27 ರಂದು ಸಂಜೆ 6ಕ್ಕೆ ಹಮ್ಮಿಕೊಂಡಿದ್ದು, ಶಾಸಕ ಎಲ್.ನಾಗೇಂದ್ರ ಬಹುಮಾನ ವಿತರಿಸು ವರು. ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾ ಗದ ನಿವೃತ್ತ ನಿರ್ದೇಶಕ ಡಾ.ಎಂ.ಚಂದ್ರ ಕುಮಾರ್ ಸಮಾರೋಪ ಭಾಷಣ ಮಾಡಲಿ ದ್ದಾರೆ. ಅತಿಥಿಗಳಾಗಿ ಅರ್ಜುನ ಪ್ರಶಸ್ತಿ ಪುರಸ್ಕøತ ಕಬಡ್ಡಿ ಆಟಗಾರ ಹೊನ್ನಪ್ಪಗೌಡ, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ, ನಗರಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ಪಾಲ್ಗೊಳ್ಳಲಿದ್ದು, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಲಿ ದ್ದಾರೆ ಎಂದರು. ಪ್ರೊ.ಹೆಚ್.ಜೆ.ಚಂದ್ರ ಶೇಖರ್, ಪ್ರೊ.ಆರ್.ಸಿದ್ದರಾಜು, ಎಂ.ವಿ. ಪ್ರಸಾದ್ ಸುದ್ದಿಗೋಷ್ಠಿಯಲ್ಲಿದ್ದರು.

Translate »