ಮೈಸೂರು

ಟ್ರಾಯ್ ನೀತಿ ಜಾರಿಯಾದಲ್ಲಿ ಕೇಬಲ್ ಮಾಸಿಕ ಶುಲ್ಕ ದುಬಾರಿ ಕೇಬಲ್ ಆಪರೇಟರ್‍ಗಳ ಸಂಘದ ಅಧ್ಯಕ್ಷ ಪ್ಯಾಟ್ರಿಕ್ ರಾಜು ಆತಂಕ
ಮೈಸೂರು

ಟ್ರಾಯ್ ನೀತಿ ಜಾರಿಯಾದಲ್ಲಿ ಕೇಬಲ್ ಮಾಸಿಕ ಶುಲ್ಕ ದುಬಾರಿ ಕೇಬಲ್ ಆಪರೇಟರ್‍ಗಳ ಸಂಘದ ಅಧ್ಯಕ್ಷ ಪ್ಯಾಟ್ರಿಕ್ ರಾಜು ಆತಂಕ

January 23, 2019

ಮೈಸೂರು: ಕೇಂದ್ರ ಸರ್ಕಾರದ ಟ್ರಾಯ್ ನೀತಿ ಜಾರಿಯಾದಲ್ಲಿ ಗ್ರಾಹಕರಿಗೆ ಪ್ರಸ್ತುತ ಲಭ್ಯವಿರುವ ಚಾನಲ್‍ಗಳಿಗೆ ಒಂದೂವರೆ ಸಾವಿರ ರೂ.ಗೂ ಅಧಿಕ ಮಾಸಿಕ ಶುಲ್ಕ ಪಾವತಿಸಬೇಕಾಗುತ್ತದೆ. ಜೊತೆಗೆ ಕೇಬಲ್ ಟಿವಿ ಉದ್ಯಮಕ್ಕೂ ಮಾರಕವಾಗಲಿದೆ ಎಂದು ಕರ್ನಾಟಕ ರಾಜ್ಯ ಕೇಬಲ್ ಟಿವಿ ಆಪರೇಟರ್‍ಗಳ ಸಂಘದ ಅಧ್ಯಕ್ಷ ಪ್ಯಾಟ್ರಿಕ್ ರಾಜು ಆತಂಕ ವ್ಯಕ್ತಪಡಿಸಿದ್ದಾರೆ. ಮೂರು ದಶಕಗಳ ಹಿಂದೆ ಅಸ್ತಿತ್ವಕ್ಕೆ ಬಂದ ಕೇಬಲ್ ಟಿವಿ ಉದ್ಯಮ ದೇಶದಾದ್ಯಂತ ಉದ್ಯೋಗ ಸೃಷ್ಟಿಸಿತು. 2013ರಲ್ಲಿ ಕೇಂದ್ರ ಸರ್ಕಾರದ ಆದೇಶದ ಪ್ರಕಾರ ದೇಶದಾದ್ಯಂತ ಹಂತ ಹಂತವಾಗಿ ಕೇಬಲ್ ಟಿವಿ…

ಶಾಂತಿಯುತವಾಗಿ ನಡೆದ ಸಿದ್ಧಗಂಗಾ ಶ್ರೀಗಳ  ಅಂತಿಮ ವಿಧಿ ವಿಧಾನ: ಸಿಎಂ ಕೃತಜ್ಞತೆ
ಮೈಸೂರು

ಶಾಂತಿಯುತವಾಗಿ ನಡೆದ ಸಿದ್ಧಗಂಗಾ ಶ್ರೀಗಳ ಅಂತಿಮ ವಿಧಿ ವಿಧಾನ: ಸಿಎಂ ಕೃತಜ್ಞತೆ

January 23, 2019

ಬೆಂಗಳೂರು/ ತುಮಕೂರು: ಸಿದ್ಧಗಂಗಾ ಮಠದಲ್ಲಿ ಇಂದು ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಅಂತಿಮ ಕ್ರಿಯಾ ವಿಧಿಗಳು ಶ್ರದ್ಧಾಪೂರ್ವಕವಾಗಿ ಹಾಗೂ ಶಾಂತಿಯುತವಾಗಿ ನೆರವೇರಿದೆ. ಲಕ್ಷಾಂತರ ಭಕ್ತರು ಶಾಂತಿಯುತವಾಗಿ ಸರತಿಯಲ್ಲಿ ಕಾದು ತ್ರಿವಿಧ ದಾಸೋಹಿಗೆ ಅಂತಿಮ ನಮನಗಳನ್ನು ಅರ್ಪಿಸಿದರು. ಇದಕ್ಕಾಗಿ ಸಹಕರಿಸಿದ ಎಲ್ಲರಿಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಜನಸಾಗರವೇ ಹರಿದು ಬಂದರೂ ಎಲ್ಲ ವಿಧಿ ವಿಧಾನಗಳು ಅಚ್ಚುಕಟ್ಟಾಗಿ ನೆರವೇರಿದವು. ಈ ಸಂದರ್ಭದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಸಿದ್ಧತೆ ನಡೆಸಲು ಶ್ರಮಿಸಿದ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್?, ಗೃಹ ಸಚಿವ…

‘ಹಿರಿಯರ ಹಾಗೂ ಗುರು ಪರಂಪರೆಯ ಆದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಿ’
ಮೈಸೂರು

‘ಹಿರಿಯರ ಹಾಗೂ ಗುರು ಪರಂಪರೆಯ ಆದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಿ’

January 23, 2019

ಮೈಸೂರು: ‘ಜೀವನದಲ್ಲಿ ಉತ್ಸಾಹವಿಲ್ಲದಿದ್ದರೆ ವ್ಯರ್ಥ, ಬದುಕಿನಲ್ಲಿ ಏನಾದರೊಂದು ಸಾಧಿಸಬೇಕಾದರೆ ಛಲ ಮತ್ತು ಗುರಿ ಇರಬೇಕು’ ಎಂದು ಬೀರಿ ಹುಂಡಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋ ಪಾಧ್ಯಾಯ ಎಸ್.ವಿ.ಎಸ್.ಗಿರಿರಾವ್ ಅಭಿಪ್ರಾಯಪಟ್ಟರು. ಗಂಗೋತ್ರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬೀಳ್ಕೊ ಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಅವರು ಮಾತನಾಡಿದರು. ನಾನು ಕಳೆದ 30 ವರ್ಷದಿಂದ ಶಿಕ್ಷಕ ವೃತ್ತಿ ಯಲ್ಲಿ ಸೇವೆ ಸಲ್ಲಿಸಿದ್ದೇನೆ. ಗಣಿತ ಶಾಸ್ತ್ರ ನನ್ನ ಅಚ್ಚುಮೆಚ್ಚಿನ ವಿಷಯವಾಗಿದ್ದು, ಹಿರಿಯರ ಹಾಗೂ ಗುರು ಪರಂಪರೆಯ…

ಕುಂಭಮೇಳ ಹಿನ್ನೆಲೆ ತ್ರಿವೇಣಿ ಸಂಗಮ ಪರಿಶೀಲಿಸಿದ ಜಿಲ್ಲಾಧಿಕಾರಿ
ಮೈಸೂರು

ಕುಂಭಮೇಳ ಹಿನ್ನೆಲೆ ತ್ರಿವೇಣಿ ಸಂಗಮ ಪರಿಶೀಲಿಸಿದ ಜಿಲ್ಲಾಧಿಕಾರಿ

January 23, 2019

ಸಿಎಂ ಅನುಮೋದನೆ ಪಡೆದು ಪೂರ್ವ ಸಿದ್ಧತಾ ಕಾರ್ಯ ಆರಂಭ ತಿ.ನರಸೀಪುರ: ದಕ್ಷಿಣ ಪ್ರಯಾಗ ತಿರುಮಕೂಡಲು ನರಸೀಪುರ ತ್ರಿವೇಣಿ ಸಂಗಮದಲ್ಲಿ ಮುಂದಿನ ಫೆಬ್ರವರಿಯಲ್ಲಿ ಮೂರು ದಿನಗಳ ಕಾಲ ದಕ್ಷಿಣ ಭಾರತದ ಕುಂಭಮೇಳ ನಡೆಯುವುದರಿಂದ ಮುಖ್ಯಮಂತ್ರಿಗಳಿಂದ ಅನುಮೋದನೆ ಪಡೆದುಕೊಂಡು ನಂತರ ಪೂರ್ವ ಸಿದ್ಧತಾ ಕಾರ್ಯವನ್ನು ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು ಕುಂಭಮೇಳದ ಹಿನ್ನೆಲೆಯಲ್ಲಿ ಮಂಗಳವಾರ ತ್ರಿವೇಣಿ ಸಂಗಮಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕುಂಭಮೇಳ ಉತ್ಸವಕ್ಕೆ ಅಗತ್ಯವಿರುವ ಅಂತಿಮ…

ಹೆಚ್.ಡಿ.ಕೋಟೆಯಲ್ಲಿ ಸರ್ವ ಸಮುದಾಯದಿಂದ ಶ್ರದ್ಧಾಂಜಲಿ
ಮೈಸೂರು

ಹೆಚ್.ಡಿ.ಕೋಟೆಯಲ್ಲಿ ಸರ್ವ ಸಮುದಾಯದಿಂದ ಶ್ರದ್ಧಾಂಜಲಿ

January 23, 2019

ಹೆಚ್.ಡಿ.ಕೋಟೆ: ಪಟ್ಟಣದ ಬಾಪೂಜಿ ವೃತ್ತದಲ್ಲಿ ಸರ್ವ ಸಮುದಾಯದಿಂದ ಸಿದ್ಧಗಂಗಾ ಶ್ರೀಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಭೆಯಲ್ಲಿ ಮಾತನಾಡಿದ ವಿರಕ್ತ ಮಠದ ಶ್ರೀ ಮಹದೇಶ್ವರ ಸ್ವಾಮೀಜಿ, ಸಾರ್ವಜನಿಕರ ಸೇವೆಗಾಗಿ ದುಡಿದವರಲ್ಲಿ ಸಿದ್ಧಗಂಗಾ ಶ್ರೀಗಳು ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅದರಲ್ಲೂ ಗ್ರಾಮೀಣಾ ಪ್ರದೇಶದ ಮಕ್ಕಳಿಗೆ ಶಿಕ್ಷಣ ಮತ್ತು ಏಳಿಗೆಗಾಗಿ ಅಪಾರವಾಗಿ ಶ್ರಮಿಸಿದರು. ದಾಸೋಹದ ನಿಟ್ಟಿನಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದರು ಎಂದು ಸ್ಮರಿಸಿದರು. ಹಂಚೀಪುರ ಮಠದ ಚೆನ್ನಬಸವಸ್ವಾಮೀಜಿ ಮಾತನಾಡಿ, ಶ್ರೀಗಳು ನಡೆದ ದಾರಿಯಲ್ಲಿ ಪ್ರತಿಯೊಬ್ಬರೂ ಸಾಗಬೇಕು. ಹಾಗಾದಲ್ಲಿ ಸಮಾಜ ಬೆಳವಣಿಗೆ ಸಾಧ್ಯ ಎಂದರು….

ರಾಜಕೀಯ ಪ್ರತಿಷ್ಠೆಯಾದ ಶ್ರದ್ಧಾಂಜಲಿ ಮೆರವಣಿಗೆ
ಮೈಸೂರು

ರಾಜಕೀಯ ಪ್ರತಿಷ್ಠೆಯಾದ ಶ್ರದ್ಧಾಂಜಲಿ ಮೆರವಣಿಗೆ

January 23, 2019

ಪಿರಿಯಾಪಟ್ಟಣ: ದೇಶ ಕಂಡ ಅಪ್ರತಿಮ ಸಂತ, ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳ ಶ್ರದ್ಧಾಂಜಲಿ ಮೆರವಣಿಗೆ ರಾಜಕೀಯ ಪ್ರತಿಷ್ಠೆಯ ಕಣವಾಗಿ ಎರಡು ಗುಂಪುಗಳಾಗಿ ಹೊರಟು ಶ್ರೀಗಳ ಭಕ್ತರಲ್ಲಿ ಗೊಂದಲ ಹಾಗೂ ಬೇಸರ ಮೂಡಿಸಿದ ಸಂಗತಿ ಪಟ್ಟಣದಲ್ಲಿ ಇಂದು ನಡೆಯಿತು. ಸೋಮವಾರ ಶ್ರೀಗಳ ಲಿಂಗೈಕ್ಯ ವಾರ್ತೆ ತಿಳಿದ ಪಟ್ಟಣದ ಜನತೆ ಬೆಟ್ಟದಪುರ ಸರ್ಕಲ್‍ನಲ್ಲಿ ಪಕ್ಷ ಭೇದ ಮರೆತು ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಅಸಂಖ್ಯಾತ ಕಾರ್ಯಕರ್ತರು ಹಾಗೂ ಶ್ರೀಗಳ ಭಕ್ತಾದಿಗಳು ಸಭೆ ಸೇರಿ ಇಂದು ಪಟ್ಟಣದ ಪೆÇಲೀಸ್ ಠಾಣೆಯಿಂದ…

ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ ಸಹಸ್ತ್ರಾರು ಭಕ್ತರ ಸಮ್ಮುಖದಲ್ಲಿ ಬಂಡಿ ಉತ್ಸವ
ಮೈಸೂರು

ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ ಸಹಸ್ತ್ರಾರು ಭಕ್ತರ ಸಮ್ಮುಖದಲ್ಲಿ ಬಂಡಿ ಉತ್ಸವ

January 23, 2019

ಮೂಗೂರು: ತಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಬಂಡಿ ಉತ್ಸವ ಸಹಸ್ತ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಬಂಡಿ ಉತ್ಸವದ ಅಂಗವಾಗಿ ಸೋಮವಾರ ಬೆಳಿಗ್ಗೆಯಿಂದಲೇ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ಆರಂಭವಾಯಿತು. ಬೆಳಿಗ್ಗೆ 10.35ರ ವೇಳೆಗೆ ಶ್ರೀ ತ್ರಿಪುರ ಸುಂದರಿ ಅಮ್ಮನವರ ಉತ್ಸವ ಮೂರ್ತಿಯನ್ನು ದೇವಾಲಯ ಸುತ್ತ ಪ್ರದಕ್ಷಿಣೆ ಹಾಕಿ ನಂತರ ರುದ್ರಾಕ್ಷಿ ಮಂಟಪದೊಂದಿಗೆ ಬಂಡಿ ಬೀದಿಗೆ ಮೆರವಣಿಗೆ ಮೂಲಕ ತರಲಾಯಿತು. ಈ…

ಜ.25 ರಂದು ಡಾಟಾ ಸೈನ್ಸ್ ಕುರಿತು ವಿಚಾರ ಸಂಕಿರಣ
ಮೈಸೂರು

ಜ.25 ರಂದು ಡಾಟಾ ಸೈನ್ಸ್ ಕುರಿತು ವಿಚಾರ ಸಂಕಿರಣ

January 23, 2019

ಮೈಸೂರು: ಮೈಸೂರಿನ ಎಂಎಂಕೆ ಮತ್ತು ಎಸ್‍ಡಿಎಂ ಮಹಿಳಾ ಮಹಾ ವಿದ್ಯಾಲಯದ ಗಣಕ ಯಂತ್ರ ವಿಭಾಗವು ಜ.25 ರಂದು ಡಾಟಾ ಸೈನ್ಸ್ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಿದೆ. ವಿಚಾರ ಸಂಕಿರಣದಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಡಾಟಾ ಸೈನ್ಸ್ ವಿಷಯ ತಿಳಿಯುವ, ಸಂಶೋಧನೆಗಳನ್ನು ನಡೆಸುವ, ಉಪಯೋಗಗಳನ್ನು ತಿಳಿಯುವ ಉದ್ದೇಶವನ್ನಾಗಿಟ್ಟುಕೊಂಡು ಆಯೋಜಿಸಲಾಗಿದೆ. ಇಂಜಿನಿಯರ್ ಹರ್‍ಮನ್ ಇಂಟರ್‍ನ್ಯಾಷನಲ್‍ನ ಪ್ರಿನ್ಸಿಪಾಲರಾದ ಡಾ. ನವೀನ್ ಓಂಕಾರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಮಂಗಳೂರು ವಿಶ್ವವಿದ್ಯಾನಿಲಯ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ವೀರಭದ್ರಪ್ಪ ವಿಷಯ ಮಂಡನೆ ಮಾಡ ಲಿದ್ದಾರೆ….

ನಡೆದಾಡುವ ದೇವರು ಲಿಂಗೈಕ್ಯ
ಮೈಸೂರು

ನಡೆದಾಡುವ ದೇವರು ಲಿಂಗೈಕ್ಯ

January 22, 2019

ಬೆಂಗಳೂರು: ನಡೆದಾಡುವ ದೇವರು, ಶತಾಯುಷಿ, ತ್ರಿವಿಧ ದಾಸೋಹಿ, ಅಭಿನವ ಬಸವಣ್ಣ ಎಂದೇ ಹೆಸರುವಾಸಿಯಾಗಿದ್ದ ಸಿದ್ಧಗಂಗಾ ಮಠದ ಹಿರಿಯ ಶ್ರೀ ಡಾ. ಶಿವಕುಮಾರಸ್ವಾಮೀಜಿ ಇಂದು ಶಿವ ಸಾನಿಧ್ಯ ಸೇರಿದರು. ಕಳೆದ ಕೆಲವು ದಿನಗಳಿಂದ ಶ್ರೀಗಳು ಅಸ್ವಸ್ಥರಾಗಿದ್ದು, ಇಂದು ಬೆಳಿಗ್ಗೆ 11 ಗಂಟೆ 44 ನಿಮಿಷಕ್ಕೆ ಲಿಂಗೈಕ್ಯರಾದರು ಎಂದು ಮಠದ ಆಡಳಿತ ಮಂಡಳಿ ಪ್ರಕಟಿಸಿದೆ. ತಮ್ಮ 111ನೇ ವಯಸ್ಸಿ ನಲ್ಲೂ ಸೇವಾ ಚೈತನ್ಯದ ಚಿಲುಮೆಯಾಗಿದ್ದ ಶ್ರೀಗಳ ನಿಧನ ಸುದ್ದಿಯನ್ನು ಖುದ್ದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಮಠದ ಆವರಣದಲ್ಲಿ ಪ್ರಕಟಿಸಿದರು. ಕ್ರಿಯಾಸಮಾಧಿಯ…

25 ವರ್ಷ ಹುಟ್ಟೂರಿಗೆ ಕಾಲಿಡಲಿಲ್ಲ…!
ಮೈಸೂರು

25 ವರ್ಷ ಹುಟ್ಟೂರಿಗೆ ಕಾಲಿಡಲಿಲ್ಲ…!

January 22, 2019

ತುಮಕೂರು: ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ತಮ್ಮ ಜೀವನದಿಂದಲೇ ಎಲ್ಲರಿಗೂ ಆದರ್ಶವಾಗಿದ್ದವರು. ಆದರೆ ಅಂತಹ ಸ್ವಾಮೀಜಿಗಳೂ ತಮ್ಮ ಪೋಷಕರ ಮೇಲಿನ ಬೇಸರದಿಂದ 25 ವರ್ಷ ಹುಟ್ಟೂರಿಗೆ ಕಾಲಿಡಲಿಲ್ಲ ಎನ್ನುವುದು ಅಚ್ಚರಿಯ ಸತ್ಯ. ಶಿವಕುಮಾರ ಸ್ವಾಮಿಗಳು ತಾವು ಹುಟ್ಟಿದ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೀರಾಪುರಕ್ಕೆ 25 ವರ್ಷ ಬಂದಿರಲಿಲ್ಲ.ತಮ್ಮ ಗುರುವಾಗಿದ್ದ ಉದ್ದಾನ ಶಿವಯೋಗಿಗಳ ಮೇಲಿನ ಅಪಾರ ಭಕ್ತಿ ಅವರ ಈ ನಿರ್ಧಾರದ ಹಿಂದಿತ್ತು. ಬಿಎ ಓದಿದ್ದ ಮಗ ಶಿವಣ್ಣ ಉನ್ನತ ಸರ್ಕಾರಿ ಅಧಿಕಾರಿಯಾಗಬೇಕು ಎನ್ನುವುದು ಅವರ ತಂದೆ…

1 1,164 1,165 1,166 1,167 1,168 1,611
Translate »