ಮೈಸೂರು: ಮೈಸೂರಿನ ಎಂಎಂಕೆ ಮತ್ತು ಎಸ್‍ಡಿಎಂ ಮಹಿಳಾ ಮಹಾ ವಿದ್ಯಾಲಯದ ಗಣಕ ಯಂತ್ರ ವಿಭಾಗವು ಜ.25 ರಂದು ಡಾಟಾ ಸೈನ್ಸ್ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಿದೆ. ವಿಚಾರ ಸಂಕಿರಣದಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಡಾಟಾ ಸೈನ್ಸ್ ವಿಷಯ ತಿಳಿಯುವ, ಸಂಶೋಧನೆಗಳನ್ನು ನಡೆಸುವ, ಉಪಯೋಗಗಳನ್ನು ತಿಳಿಯುವ ಉದ್ದೇಶವನ್ನಾಗಿಟ್ಟುಕೊಂಡು ಆಯೋಜಿಸಲಾಗಿದೆ.
ಇಂಜಿನಿಯರ್ ಹರ್‍ಮನ್ ಇಂಟರ್‍ನ್ಯಾಷನಲ್‍ನ ಪ್ರಿನ್ಸಿಪಾಲರಾದ ಡಾ. ನವೀನ್ ಓಂಕಾರಪ್ಪ ಕಾರ್ಯಕ್ರಮ ಉದ್ಘಾಟಿಸುವರು.
ಮಂಗಳೂರು ವಿಶ್ವವಿದ್ಯಾನಿಲಯ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ವೀರಭದ್ರಪ್ಪ ವಿಷಯ ಮಂಡನೆ ಮಾಡ ಲಿದ್ದಾರೆ. ಹೆಚ್ಚಿನ ಮಾಹಿತಿಗೆ ಗಣಕ ಯಂತ್ರ ವಿಭಾಗದ ಮುಖ್ಯಸ್ಥರಾದ ಕೆ.ಎಸ್. ಸುಕೃತ, ಮೊ. 9900192418 ಅವರನ್ನು ಸಂಪರ್ಕಿಸಲು ಕೋರಲಾಗಿದೆ.