‘ತ್ರಿವಿಧ ದಾಸೋಹಿ’ಗೆ ಜಿಲ್ಲಾದ್ಯಂತ ಗೌರವ ಸಮರ್ಪಣೆ
ಹಾಸನ

‘ತ್ರಿವಿಧ ದಾಸೋಹಿ’ಗೆ ಜಿಲ್ಲಾದ್ಯಂತ ಗೌರವ ಸಮರ್ಪಣೆ

January 23, 2019

ಸಂಘ ಸಂಸ್ಥೆಗಳಿಂದ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ, ಎಲ್ಲೆಡೆ ಕಾಯಕ ಯೋಗಿಯ ಗುಣಗಾನ, ಗ್ರಾಮೀಣ ಪ್ರದೇಶದಲ್ಲಿ ಶಿವಕುಮಾರ ಸ್ವಾಮೀಜಿ ಸ್ಮರಣೆ
ಸಮಾಜಕ್ಕೆ ಅರಿವನ್ನು ನೀಡುವ ಮೂಲಕ ದಾರಿದೀಪವಾಗಿದ್ದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆ ಜಿಲ್ಲಾ ದ್ಯಂತ ಶ್ರೀಗಳಿಗೆ ವಿವಿಧ ಸಂಘ ಸಂಸ್ಥೆ ಗಳು ಸೇರಿದಂತೆ ಲಕ್ಷಾಂತರ ಮಂದಿ ಭಕ್ತರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಜಿಲ್ಲೆಯ ಹಾಸನ, ಆಲೂರು, ಅರಸೀ ಕೆರೆ, ಬೇಲೂರು, ಸಕಲೇಶಪುರ, ಅರಕಲ ಗೂಡು, ಶ್ರವಣಬೆಳಗೊಳ, ರಾಮನಾಥ ಪುರ, ಹೊಳೆನರಸೀಪುರ, ಚನ್ನರಾಯ ಪಟ್ಟಣ ಸೇರಿದಂತೆ ವಿವಿಧೆಡೆ ಪ್ರಮುಖ ರಸ್ತೆ, ವೃತ್ತ ಮತ್ತು ಗ್ರಾಮೀಣ ಪ್ರದೇಶದ ದೇವಾಲಯ, ಸಮುದಾಯ ಭವನದಲ್ಲಿ ಶಿವಕುಮಾರ ಸ್ವಾಮೀಜಿ ಅವರ ಭಾವ ಚಿತ್ರವಿಟ್ಟು ಪೂಜೆ ಸಲ್ಲಿಸಿ, ಗೌರವ ಸಮರ್ಪಿಸಲಾಯಿತು.

ಕಸಾಪದಿಂದ ಶ್ರದ್ಧಾಂಜಲಿ: ಪೂಜ್ಯ ಡಾ|| ಶ್ರೀ ಶಿವಕುಮಾರ ಸ್ವಾಮೀಜಿ ನಡೆದಾ ಡುವ ದೇವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕಸಾಪ ಭವನದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಮಾತ ನಾಡಿ, ಪರಮಪೂಜ್ಯರು, ಶತಾಯುಷಿ ಗಳು ನಡೆದಾಡುವ ದೇವರು, ಸಿದ್ಧಗಂಗಾ ಮಠದ ಮಠಾಧೀಶರು ಆಗಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ತುಮ ಕೂರಿನ ಸಿದ್ಧಗಂಗಾ ಮಠದಲ್ಲಿ ಲಿಂಗೈಕ್ಯ ರಾಗಿರುವುದು ಇಡೀ ಸಮಾಜಕ್ಕೆ ನಷ್ಟ ವಾಗಿದೆ. ಶ್ರೀಗಳು ಹಾಕಿಕೊಟ್ಟ ಮಾರ್ಗ ದರ್ಶನದಲ್ಲಿ ಪ್ರತಿಯೊಬ್ಬರೂ ನಡೆಯಬೇಕು ಎಂದರು.

ಶಿಕ್ಷಣ ಮತ್ತು ಬಡ ಮಕ್ಕಳಿಗೆ ನೀಡುತ್ತಿದ್ದ ಪೆÇ್ರೀತ್ಸಾಹವನ್ನು ಯಾರೂ ಮರೆಯು ವಂತಿಲ್ಲ ಎಂದು ಹೇಳಿದ ಅವರು, ಮುಂದಿನ ದಿನಗಳಲ್ಲಿ ಜಿಲ್ಲೆ ಮತ್ತು ತಾಲೂಕು ಕೇಂದ್ರ ಗಳಲ್ಲಿ ಶಿವಕುಮಾರ ಸ್ವಾಮೀಜಿ ಅವರ ಕುರಿತು ವಿಚಾರಗೋಷ್ಠಿಯನ್ನು ಏರ್ಪ ಡಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಎನ್.ಎಲ್.ಚನ್ನೇಗೌಡ, ಬಿ.ಎನ್.ರಾಮ ಸ್ವಾಮಿ, ಚಂದ್ರಕಾಂತ ಪಡೆಸೂರು, ಜಿ.ಓ. ಮಹಾಂತಪ್ಪ, ಶ್ರೀಕಾಂತ್, ಕಲ್ಲಳ್ಳಿ ಹರೀಶ್, ಗೊರೂರು ಅನಂತರಾಜು, ಪರಮೇಶ್, ಯಲಗುಂದ ರಮೇಶ್, ತಮ್ಮಣ್ಣ ಸೇರಿ ದಂತೆ ಇತರರು ಉಪಸ್ಥಿತರಿದ್ದರು.

ಸ್ವಪ್ನ ಕಟ್ಟೆ ಬಳಗದಿಂದ ಶ್ರೀಗಳ ಸ್ಮರಣೆ: ಸಿದ್ಧಗಂಗಾ ಮಠದ ಮಠಾಧೀಶರು ಆಗಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವ ರಿಗೆ ನಗರದ ಶಂಕರಮಠ ರಸ್ತೆಯಲ್ಲಿರುವ ಸ್ವಪ್ನ ಕಟ್ಟೆ ಬಳಗದಿಂದ ಶ್ರದ್ಧಾಂಜಲಿ ಸಲ್ಲಿಸಿ, ಪ್ರಸಾದ ವಿನಿಯೋಗ ಮಾಡಲಾ ಯಿತು. ಈ ಸಂದರ್ಭದಲ್ಲಿ ಸಮಾಜ ಸೇವೆಯನ್ನು ನೆನಪಿಸಿಕೊಂಡರು.

ಶ್ರೀಗಳಿಗೆ ಕುಂಚ ನಮನ: ನಗರದ ಮಹಾ ರಾಜ ಉದ್ಯಾನದಲ್ಲಿರುವ ಶ್ರೀ ವಿವೇಕಾ ನಂದ ಯೋಗ ಶಾಲೆಯಲ್ಲಿ ಲಿಂಗೈಕ್ಯರಾದ ಮಹಾನ್ ಚೇತನ ಶ್ರೀ ಶಿವಕುಮಾರ ಸ್ವಾಮೀಜಿಯವರ ಶ್ರದ್ಧಾಂಜಲಿ ಕಾರ್ಯ ಕ್ರಮದ ಅಂಗವಾಗಿ ಖ್ಯಾತ ಚಿತ್ರಕಲಾವಿದ ಕೆ.ಎನ್. ಶಂಕರಪ್ಪನವರಿಂದ ಕುಂಚ ನಮನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಯೋಗ ಶಿಕ್ಷಕ ಹೆಚ್.ಬಿ. ರಮೇಶ್, ನಡೆ, ನುಡಿ, ಆಚಾರ ವಿಚಾರಗಳಲ್ಲಿ ಸರ ಳತೆಯನ್ನು ಪ್ರತಿಪಾದಿಸಿದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರು ಸರಳತೆಯ ಪ್ರತೀಕ. ಅಕ್ಷರ ದಾಸೋಹ, ಅನ್ನದಾಸೋಹ, ಜ್ಞಾನದಾಸೋಹ ನೀಡಿದ ಶ್ರೀಗಳು ಭಾರತ ರತ್ನಕ್ಕಿಂತ ಮಿಗಿಲಾದ ವಿಶ್ವರತ್ನ ಎಂದರು.

ಶ್ರೀಗಳೊಂದಿಗೆ ತಮ್ಮ ಕುಟುಂಬದ ಒಡನಾಟವನ್ನು ನೆನಪಿಸಿಕೊಂಡು ಮಾತ ನಾಡಿದ ಯೋಗ ಶಿಕ್ಷಣಾರ್ಥಿ ಶ್ರೀಮತಿ ನಂದ ಸಕಲೇಶಪುರದ ಭಕ್ತಾದಿಗಳ ಮನೆಗೆ ಬಂದ ಸಂದರ್ಭದಲ್ಲಿ ಹಿರಿಯ ಕಿರಿಯರೆನ್ನದೆ ಆತ್ಮೀಯವಾಗಿ ಒಡನಾಟ ಹೊಂದಿದ್ದರು. ಶ್ರೀಗಳು ಮಕ್ಕಳೊಂದಿಗೆ ಮಕ್ಕಳಾಗಿ ಮುಗ್ಧತೆಯಿಂದ ಬೆರೆಯು ತ್ತಿದ್ದರು. ಲಕ್ಷಾಂತರ ಭಕ್ತ ಸಮೂಹವನ್ನು ಹೊಂದಿದ್ದ ಅವರು ಗುರುಕುಲಕ್ಕೆ ಮಾದರಿಯಾದವರು ಎಂದರು.
ಚಿತ್ರ ಬಿಡಿಸಿ ಮಾತನಾಡಿದ ಕೆ.ಎನ್. ಶಂಕರಪ್ಪ ಮಾತನಾಡಿ, ಕಲಾವಿದರು, ನಟರು, ಸಾಹಿತಿಗಳು, ರಾಜಕಾರಣಿಗಳು ಹೀಗೆ ಸಮಾಜದಲ್ಲಿ ವಿವಿಧ ರಂಗದಲ್ಲಿ ಇಂದು ಪ್ರಕಾಶಿಸುತ್ತಿರುವ ಬಹಳಷ್ಟು ಜನ ಸಿದ್ಧಗಂಗಾ ಮಠದಲ್ಲಿ ವಿದ್ಯಾಭ್ಯಾಸ ಪಡೆ ದವರಾಗಿದ್ದಾರೆ. ನಾನು ರಚಿಸಿದ ಒಂದು ಶ್ರೀಗಳ ಚಿತ್ರ ಶ್ರೀಗಳ ನೆನಪಿನ ಸಂಪುಟ ದಲ್ಲಿ ಸೇರ್ಪಡೆಯಾಗಿರುವುದು ನನ್ನ ಭಾಗ್ಯ ಎಂದರು.

ಲೇಖಕ ಗೊರೂರು ಶಿವೇಶ್, ಶಿಕ್ಷ ಣಾರ್ಥಿ ಸಿ.ಕೆ.ಹರೀಶ್, ನಾಗಭೂಷಣ್ ಹಾಗೂ ಪುಟ್ಟಪ್ಪ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕರಾವಿಪ ಅಧ್ಯಕ್ಷ ಉಮೇಶ್ ಹಾಗೂ ಶ್ರೀಮತಿ ನಂದ ವಚನ ಗಾಯನ ಹಾಗೂ ಗೀತ ಗಾಯನ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಣಾರ್ಥಿ ಗಳಾದ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ಹೆಚ್.ಎಲ್.ಜನಾರ್ಧನ್ ಉದ್ಯಮಿಗಳಾದ ಶೇಖರ್, ಪುಟ್ಟಪ್ಪ, ರಾಮ ಚಂದ್ರು, ಧರ್ಮಪ್ಪ, ಪರಮೇಶ್, ಉಮೇಶ್, ಜ್ಞಾನೇಶ್ವರ್, ರಾಜೇಶ್, ಅಂಬರೀಶ್, ನಾಗ ಭೂಷಣ್, ತೋಟಗಾರಿಕೆ ಇಲಾಖೆಯ ಮಂಜುನಾಥ್, ಶ್ರೀಮತಿ ನಂದ, ಶ್ರೀಮತಿ ಶಶಿಕಲಾ, ಬ್ಯಾಂಕ್ ಅಧಿಕಾರಿ ಮೈತಿ, ಶೋಭ, ವೇದ, ಮುಂತಾದವರು ಭಾಗವಹಿಸಿದ್ದರು.

ಜಿಲ್ಲೆಗೆ ಹಲವು ಬಾರಿ ಭೇಟಿ ನೀಡಿದ ‘ಅಭಿನವ ಬಸವ’
ಹಾಸನ: ಜಿಲ್ಲೆಯಲ್ಲಿಯೂ ಶಿವಕುಮಾರ ಸ್ವಾಮೀಜಿ ಅವರಿಗೆ ಅಪಾರ ಸಂಖ್ಯೆ ಭಕ್ತರಿದ್ದು, ಹಾಸನ ಮತ್ತು ಶ್ರೀಗಳಿಗೆ ಸಾಕಷ್ಟು ಅವಿನಾಭಾವ ಸಂಬಂಧ ಇತ್ತು. ಜಿಲ್ಲೆಯ ಅರಸೀಕೆರೆ, ಸಕಲೇಶಪುರ, ಚನ್ನರಾಯಪಟ್ಟಣ ಹಾಗೂ ಹೊಳೆನರಸೀಪುರ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಿದ್ದರು.

2007ರಲ್ಲಿ 100 ವರ್ಷ ಪೂರೈಸಿದ ಹಿನ್ನೆಲೆ ಶ್ರೀಗಳಿಗೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಜನತೆ ಗುರುವಂದನಾ ಕಾರ್ಯಕ್ರಮ ಮಾಡಿ ಅಭಿನಂದನೆ ಸಲ್ಲಿಸಿದ್ದರು. ಇದಕ್ಕೂ ಮುನ್ನ 2001ರಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕ್ಷೇತ್ರಕ್ಕೆ ಭೇಟಿ ನೀಡಿ ಸರ್ವಿಸ್ ಸ್ಟೇಷನ್ ಉದ್ಘಾಟಿಸಿದ್ದರು. ಅಂದಿನ ಲೋಕಸಭಾ ಸದಸ್ಯ ರಾಗಿದ್ದ ದಿ.ಜಿ.ಪುಟ್ಟಸ್ವಾಮಿ ಗೌಡರ ಕುಟುಂಬಸ್ಥರು ಪಾದ ಪೂಜೆ ಮಾಡುವ ಮೂಲಕ ಶ್ರೀಗಳಿಗೆ ಗೌರವ ಸಲ್ಲಿಸಿದ್ದರು.

ಮತ್ತೆ ಸಕಲೇಶಪುರದ ಜೆಎಸ್‍ಎಸ್ ಪದವಿಪೂರ್ವ ಕಾಲೇಜು ಕಟ್ಟಡ ಹಾಗೂ ವಿದ್ಯಾರ್ಥಿ ನಿಲಯದ ಉದ್ಘಾಟನಾ ಸಮಾ ರಂಭಕ್ಕೂ ಕೂಡ ಶ್ರೀಗಳು ಆಗಮಿಸಿದ್ದರು. ಇವರು ಆಗಮಿಸಿದ್ದ ಹಿನ್ನೆಲೆಯಲ್ಲಿ ಮಾಜಿ ರಾಷ್ಟ್ರಪತಿ ದಿ.ಅಬ್ದುಲ್ ಕಲಾಂ ಕೂಡ ಶ್ರೀಗಳ ಆರೋಗ್ಯವನ್ನು ವಿಚಾರಿಸಿದ್ದರು. ಅಷ್ಟೇ ಅಲ್ಲದೆ ಧರ್ಮ ಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಕೂಡ ವೇದಿಕೆಯ ಮೇಲಿಂದ ಎದ್ದು ಬಂದು ಶ್ರೀಗಳ ಪಾದಚರಣದಡಿ ಕುಳಿತು ಕೆಲ ಕಾಲ ಶ್ರೀಗಳ ಆರೋಗ್ಯದ ಬಗ್ಗೆ ಕುಶಲೋಪರಿ ವಿಚಾರಿಸಿದ್ದರು.

ಇದಾದ ಬಳಿಕ ಕೆಲವು ತಿಂಗಳ ಅಂತರದಲ್ಲಿ ಚನ್ನರಾಯ ಪಟ್ಟಣದ ತಗಡೂರು ಗ್ರಾಮದಲ್ಲಿ ನಿರ್ಮಾಣವಾಗಿದ್ದ ದೇವಾ ಲಯ ಉದ್ಘಾಟನಾ ಸಮಾರಂಭದಲ್ಲಿ ಕೂಡ ಶ್ರೀಗಳು ಭಾಗವ ಹಿಸಿದ್ದರು. ನಂತರ ಶ್ರೀಮಠ ಶ್ರವಣಬೆಳಗೊಳಕ್ಕೆ ಭೇಟಿ ನೀಡಿ ಸ್ವಾಮೀಜಿ ಅವರೊಂದಿಗೆ ಕುಶಲೋಪರಿ ನಡೆಸಿದ್ದರು. ಸ್ವಾಮೀ ಜಿಗೂ ಹಾಸನ ಜಿಲ್ಲೆಗೆ ಸಾಕಷ್ಟು ಅವಿನಾಭಾವ ಸಂಬಂಧವಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ. ಶ್ರೀಗಳ ಅಗಲಿಕೆಯಿಂದ ಹಾಸನ ಜಿಲ್ಲೆಯಲ್ಲೂ ದುಃಖ ಮಡುಗಟ್ಟಿದೆ.

Translate »