‘ದೇವರ ಲೋಕದ ದೇವರಿಗೆ’ ಭಾವಪೂರ್ಣ ಶ್ರದ್ಧಾಂಜಲಿ
ಹಾಸನ

‘ದೇವರ ಲೋಕದ ದೇವರಿಗೆ’ ಭಾವಪೂರ್ಣ ಶ್ರದ್ಧಾಂಜಲಿ

January 23, 2019

ಅರಸೀಕೆರೆ: ಶ್ರೀ ಸಿದ್ಧಗಂಗಾ ಮಠದ ನಡೆದಾಡುವ ದೇವರು ಡಾ. ಶಿವಕುಮಾರ ಸ್ವಾಮಿಯವರಿಗೆ ನಗರದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾ ಶ್ರಯದಲ್ಲಿ ಶ್ರದ್ಧಾಂಜಲಿ ಸಲ್ಲಿಸುವುದರ ಮೂಲಕ ಗೌರವ ಸಮರ್ಪಿಸಲಾಯಿತು.

ನಗರದ ಹೃದಯ ಭಾಗದಲ್ಲಿರುವ ಪಿ.ಪಿ.ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ರೈತ ಸಂಘ, ತಾಲೂಕು ವೀರ ಶೈವ ಸಮಾಜ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಶ್ರೀಯವರ ಭಾವಚಿತ್ರವನ್ನು ಸ್ಥಾಪಿಸಿ ವಿಶೇಷ ಪೂಜೆ, ಭಜನೆ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಶ್ರದ್ಧಾಂಜಲಿ ಸಮರ್ಪಿಸಿದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ, ನಗರ ಸಭೆ ಸದಸ್ಯ ಸಮೀವುಲ್ಲಾ, ಜಿಲ್ಲಾ ಪಂಚಾ ಯಿತಿ ಸದಸ್ಯರಾದ ಪಟೇಲ್ ಶಿವಪ್ಪ, ವತ್ಸಲಾ ಶೇಖರಪ್ಪ, ಮಾಡಾಳು ಸ್ವಾಮಿ, ಕರವೇ ಹೇಮಂತ್‍ಕುಮಾರ್, ನಗರಾಧ್ಯಕ್ಷ ಕಿರಣ್‍ಕುಮಾರ್, ಜಿಲ್ಲಾ ಉಪಾಧ್ಯಕ್ಷ ತುಳಸಿದಾಸ್, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿವಿಟಿ ಬಸವರಾಜು, ಜಿಲ್ಲಾ ವಕ್ತಾರ ಎನ್.ಡಿ.ಪ್ರಸಾದ್, ನಗರಸಭೆ ಪೌರಾಯುಕ್ತ ಪರಮೇಶ್ವರಪ್ಪ, ನಗರ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ರಂಗ ಸ್ವಾಮಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್, ವೀರಶೈವ ಸಮಾಜದ ಅಧ್ಯಕ್ಷ ಕೆ.ಪಿ. ಚಂದ್ರಶೇಖರ್, ಹಿರಿಯ ಕ್ರೀಡಾಪಟು ಮಹ ದೇವ್, ಸಮಾಜ ಸೇವಕ ಗಣೇಶ್, ಯಳ ವಾರೆ ಕೇಶವಯ್ಯ ಇನ್ನಿತರರು ಇದ್ದರು.
ನಗರದ ಹೆಂಜಗೊಂಡನಹಳ್ಳಿ ಬಡಾ ವಣೆ, ಮಿನಿ ವಿಧಾನಸೌಧ ಬಡಾವಣೆ, ಪ್ರೋ.ಟಿ.ಕೃಷ್ಣಪ್ಪ ಬಡಾವಣೆ, ರೈಲ್ವೆ ಸ್ಟೇಷನ್ ರಸ್ತೆ, ಆಟೋ ನಿಲ್ದಾಣ ಸೇರಿದಂತೆ ವಿವಿಧ ಬಡಾವಣೆಗಳ ಆಟೋ ಮತ್ತು ವಾಹನ ನಿಲ್ದಾಣಗಳಲ್ಲಿ ಶ್ರೀ ಸಿದ್ಧಗಂಗಾ ಸ್ವಾಮಿ ಯವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

Translate »