ಮಡಿಕೇರಿ: ಮಂಡ್ಯದ ನಾಗಮಂಗಲದಲ್ಲಿನ ಶ್ರೀ ಆದಿಚುಂಚನಗಿರಿ ಮಠ ದಲ್ಲಿ ಆಯೋಜಿತ ಚುಂಚಾದ್ರಿ ಮಹಿಳಾ ಸಮಾವೇಶದಲ್ಲಿ ಸೋಮವಾರಪೇಟೆ ಮಹಿಳಾ ಪ್ರಗತಿ ಪರ ಮಹಿಳಾ ವೇದಿಕೆ ತಂಡವು ದ್ವಿತೀಯ ಸ್ಥಾನಗಳಿಸಿದೆ. ಪ್ರಗತಿಪರ ಮಹಿಳಾ ವೇದಿಕೆಯ ತಂಡದಲ್ಲಿ ಅಶ್ವಿನಿ ಕೃಷ್ಣಕಾಂತ್, ಸಂಧ್ಯಾಕೃಷ್ಣಪ್ಪ, ರೂಪ, ತೀರ್ಥ, ಭವ್ಯ, ಸೌಮ್ಯ ಮತ್ತು ವೀಣಾ ಪಾಲ್ಗೊಂಡಿದ್ದರು. ಈ ತಂಡದ ಜಾನಪದ ನೃತ್ಯ ತೀರ್ಪುಗಾರರೊಂದಿಗೆ ಪ್ರೇಕ್ಷಕರ ಅಪಾರ ಮೆಚ್ಚುಗೆಗೂ ಕಾರಣವಾಗಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಲು ಕಾರಣವಾಯಿತು.