‘ಹಿರಿಯರ ಹಾಗೂ ಗುರು ಪರಂಪರೆಯ ಆದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಿ’
ಮೈಸೂರು

‘ಹಿರಿಯರ ಹಾಗೂ ಗುರು ಪರಂಪರೆಯ ಆದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಿ’

January 23, 2019

ಮೈಸೂರು: ‘ಜೀವನದಲ್ಲಿ ಉತ್ಸಾಹವಿಲ್ಲದಿದ್ದರೆ ವ್ಯರ್ಥ, ಬದುಕಿನಲ್ಲಿ ಏನಾದರೊಂದು ಸಾಧಿಸಬೇಕಾದರೆ ಛಲ ಮತ್ತು ಗುರಿ ಇರಬೇಕು’ ಎಂದು ಬೀರಿ ಹುಂಡಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋ ಪಾಧ್ಯಾಯ ಎಸ್.ವಿ.ಎಸ್.ಗಿರಿರಾವ್ ಅಭಿಪ್ರಾಯಪಟ್ಟರು.

ಗಂಗೋತ್ರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬೀಳ್ಕೊ ಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಅವರು ಮಾತನಾಡಿದರು. ನಾನು ಕಳೆದ 30 ವರ್ಷದಿಂದ ಶಿಕ್ಷಕ ವೃತ್ತಿ ಯಲ್ಲಿ ಸೇವೆ ಸಲ್ಲಿಸಿದ್ದೇನೆ. ಗಣಿತ ಶಾಸ್ತ್ರ ನನ್ನ ಅಚ್ಚುಮೆಚ್ಚಿನ ವಿಷಯವಾಗಿದ್ದು, ಹಿರಿಯರ ಹಾಗೂ ಗುರು ಪರಂಪರೆಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹಸನಾದ ಬದುಕನ್ನು ಸಾಗಿಸಿ ಎಂದು ಆಶಿಸಿದರು.

ಆಡಳಿತಾಧಿಕಾರಿ ಶ್ರೀಮತಿ ಕಾಂತಿ ನಾಯಕ್ ಮಾತನಾಡಿ, ಕಾಲೇಜಿಗೆ ಮುಂದಿನ ವರ್ಷದಿಂದ ನೀವು ವಿದಾಯ ಹೇಳುತ್ತಿರುವುದು ಒಂದು ಕಡೆ ದುಃಖವಾ ದರೆ, ಮತ್ತೊಂದು ಕಡೆ ನೀವು ಡಾಕ್ಟರ್ ಅಥವಾ ಇಂಜಿನಿಯರ್ ಆದಾಗ ನಾನು ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದು ನೆನಪಿಸಿಕೊಂಡರೆ ಸಾಕು, ನಾವೇ ಧನ್ಯರು. ‘ಶಿಕ್ಷಣವು ವಿದ್ಯೆ ಮತ್ತು ವಿವೇಕ ವನ್ನು ಕಲಿಸುವ ಸಂಪರ್ಕ ಸಾಧನ. ಶಿಕ್ಷಣವನ್ನು ಕಲಿಯಬೇಕಾದರೆ ಏಕಾಗ್ರತೆ ಮತ್ತು ಆಸಕ್ತಿ ಬೆಳೆಸಿಕೊಂಡಲ್ಲಿ ಗುರಿ ಯನ್ನು ತಲುಪಬಹುದೆಂದು ವಿದ್ಯಾರ್ಥಿ ಗಳಿಗೆ ಕಿವಿಮಾತು ಹೇಳಿದರು. ನೀವು ನೂರಕ್ಕೆ ನೂರು ಅಂಕ ಗಳಿಸುತ್ತೇನೆ ಎಂದು ಛಲ ಇಟ್ಟುಕೊಂಡರೆ ಕಡೇ ಪಕ್ಷ ಶೇ.95 ರಷ್ಟು ಅಂಕ ಗಳಿಸಬಹುದು ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಸುನಿಲ್ ಕುಮಾರ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಜೊತೆ ಸಹಪಠ್ಯ ಚಟುವಟಿಕೆ ಗಳಾದ ಸಂಗೀತ, ನೃತ್ಯ, ನಾಟಕ, ಯೋಗ ಮುಂತಾದ ಕ್ರೀಡೆಗಳಲ್ಲಿ ಭಾಗವಹಿಸ ಬೇಕು. ಈ ಮೂಲಕ ವಿದ್ಯಾರ್ಥಿಗಳಲ್ಲಿ ರುವ ಸುಪ್ತ ಪ್ರತಿಭೆ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಝರೀನಾ ಬಾಬುಲ್, ಶಿಕ್ಷಕ ಚಿಕ್ಕಣ್ಣ ಭಾಗವಹಿಸಿದ್ದರು. ಪ್ರಾರ್ಥನೆಯನ್ನು ಪವಿತ್ರ, ನಿರೂಪಣೆಯನ್ನು ನಯನ ಹಾಗೂ ರಕ್ಷಿತ ಮತ್ತು ವಂದನಾರ್ಪಣೆ ಯನ್ನು ಚಂದನ ನಡೆಸಿಕೊಟ್ಟರು. ವೇದಿಕೆ ಕಾರ್ಯಕ್ರಮದ ನಂತರ ವರ್ಣರಂಜಿತ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

Translate »