ಟ್ರಾಯ್ ನೀತಿ ಜಾರಿಯಾದಲ್ಲಿ ಕೇಬಲ್ ಮಾಸಿಕ ಶುಲ್ಕ ದುಬಾರಿ ಕೇಬಲ್ ಆಪರೇಟರ್‍ಗಳ ಸಂಘದ ಅಧ್ಯಕ್ಷ ಪ್ಯಾಟ್ರಿಕ್ ರಾಜು ಆತಂಕ
ಮೈಸೂರು

ಟ್ರಾಯ್ ನೀತಿ ಜಾರಿಯಾದಲ್ಲಿ ಕೇಬಲ್ ಮಾಸಿಕ ಶುಲ್ಕ ದುಬಾರಿ ಕೇಬಲ್ ಆಪರೇಟರ್‍ಗಳ ಸಂಘದ ಅಧ್ಯಕ್ಷ ಪ್ಯಾಟ್ರಿಕ್ ರಾಜು ಆತಂಕ

January 23, 2019

ಮೈಸೂರು: ಕೇಂದ್ರ ಸರ್ಕಾರದ ಟ್ರಾಯ್ ನೀತಿ ಜಾರಿಯಾದಲ್ಲಿ ಗ್ರಾಹಕರಿಗೆ ಪ್ರಸ್ತುತ ಲಭ್ಯವಿರುವ ಚಾನಲ್‍ಗಳಿಗೆ ಒಂದೂವರೆ ಸಾವಿರ ರೂ.ಗೂ ಅಧಿಕ ಮಾಸಿಕ ಶುಲ್ಕ ಪಾವತಿಸಬೇಕಾಗುತ್ತದೆ. ಜೊತೆಗೆ ಕೇಬಲ್ ಟಿವಿ ಉದ್ಯಮಕ್ಕೂ ಮಾರಕವಾಗಲಿದೆ ಎಂದು ಕರ್ನಾಟಕ ರಾಜ್ಯ ಕೇಬಲ್ ಟಿವಿ ಆಪರೇಟರ್‍ಗಳ ಸಂಘದ ಅಧ್ಯಕ್ಷ ಪ್ಯಾಟ್ರಿಕ್ ರಾಜು ಆತಂಕ ವ್ಯಕ್ತಪಡಿಸಿದ್ದಾರೆ.

ಮೂರು ದಶಕಗಳ ಹಿಂದೆ ಅಸ್ತಿತ್ವಕ್ಕೆ ಬಂದ ಕೇಬಲ್ ಟಿವಿ ಉದ್ಯಮ ದೇಶದಾದ್ಯಂತ ಉದ್ಯೋಗ ಸೃಷ್ಟಿಸಿತು. 2013ರಲ್ಲಿ ಕೇಂದ್ರ ಸರ್ಕಾರದ ಆದೇಶದ ಪ್ರಕಾರ ದೇಶದಾದ್ಯಂತ ಹಂತ ಹಂತವಾಗಿ ಕೇಬಲ್ ಟಿವಿ ಡಿಜಿಟಲ್ ಆಗಿ ಮಾರ್ಪಟ್ಟಿತು. ಆದರೆ ಇದೀಗ ಟ್ರಾಯ್‍ನ ಹೊಸ ನೀತಿ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಉತ್ಸುಕವಾಗಿದ್ದು, ಇದರಿಂದ ಗ್ರಾಹಕರಿಗೆ ಹೊರೆಯಾಗಲಿದೆ ಎಂದಿದ್ದಾರೆ. ಕನ್ನಡದ ಎಲ್ಲಾ ಚಾನಲ್‍ಗಳು ಬೇಕೆಂದರೆ, ಕನಿಷ್ಠ 300 ರೂ.ನಿಂದ 450 ರೂ.ವರೆಗೆ ತಿಂಗಳಿಗೆ ಪಾವತಿಸಬೇಕಾಗುತ್ತದೆ. ಅದೇ ರೀತಿ ಈಗ ನೋಡುತ್ತಿರುವ ಅಷ್ಟೂ ಚಾನಲ್‍ಗಳು ಬೇಕೆಂದರೆ 1,200 ರೂ.ನಿಂದ 1,600 ರೂ.ವರೆಗೆ ದುಬಾರಿ ಶುಲ್ಕ ಪಾವತಿಸಬೇಕು. ಜೊತೆಗೆ ಈ ಉದ್ಯಮವನ್ನೇ ನಂಬಿರುವ ಸಾವಿರಾರು ಕುಟುಂಬಗಳು ಬೀದಿಗೆ ಬೀಳಲಿವೆ. ಹೀಗಾಗಿ ಕೇಂದ್ರ ಸರ್ಕಾರ ಈ ಅವೈಜ್ಞಾನಿಕ ನೀತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

Translate »