ಸಾಹಸಿ ಬೈಕ್ ಸವಾರನ ದುರಂತ ಸಾವು
ಮೈಸೂರು

ಸಾಹಸಿ ಬೈಕ್ ಸವಾರನ ದುರಂತ ಸಾವು

January 23, 2019

ಮೈಸೂರು: ಆಯ ತಪ್ಪಿ ಬಿದ್ದು ಸಾಹಸಿ ಬೈಕ್ ಸವಾರ ರೊಬ್ಬರು ದುರಂತ ಸಾವಿಗೀಡಾಗಿದ್ದಾರೆ.

ಮೈಸೂರಿನ ಹೆಬ್ಬಾಳು ಬಡಾವಣೆಯ ಅಭಿಷೇಕ್ ಸರ್ಕಲ್ ಬಳಿಯ ನಿವಾಸಿ ದೊರೈ ಜೋಸೆಫ್ ಸುನಂದರಾಜ್(65) ಸಾವನ್ನಪ್ಪಿದವರು. ಮೈಸೂರಿನ ಸದರನ್ ಸ್ಟಾರ್ ಹೋಟೆಲಿನ ಎಫ್ ಅಂಡ್ ಬಿ ಎಕ್ಸಿಕ್ಯೂಟಿವ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಅವರು ಬೈಕ್ ಯಾತ್ರೆ ಹವ್ಯಾಸ ಹೊಂದಿದ್ದರು.

ಪತ್ನಿಯನ್ನು ಮನೆಗೆ ಡ್ರಾಪ್ ಮಾಡಿ ತಮ್ಮ ರಾಯಲ್ ಎನ್‍ಫೀಲ್ಡ್ (ಕೆಎ-51,ಎಕ್ಸ್-49) ಬೈಕಿನಲ್ಲಿ ಜಯಲಕ್ಷ್ಮೀ ಪುರಂ ಕಡೆಯಿಂದ ಸದರನ್‍ಸ್ಟಾರ್‍ಗೆ ಬರುತ್ತಿದ್ದಾಗ ವಾಲ್ಮೀಕಿ ರಸ್ತೆ ಜಂಕ್ಷನ್ ಸಮೀಪ ಹುಣಸೂರು ರಸ್ತೆಯಲ್ಲಿ ಸೋಮವಾರ ಸಂಜೆ ಭಿಕ್ಷುಕಿಯೊಬ್ಬರು ಅಡ್ಡ ಬಂದ ಕಾರಣ ನಿಯಂತ್ರಣ ತಪ್ಪಿ ಬಿದ್ದ ಸುನಂದರಾಜ್ ಅವರ ತಲೆಗೆ ತೀವ್ರ ಗಾಯಗಳಾದವು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿದ ವಿವಿ ಪುರಂ ಸಂಚಾರ ಠಾಣೆ ಪೊಲೀಸರು ಸುನಂದರಾಜ್ ಅವರನ್ನು ಜಯ ಲಕ್ಷ್ಮೀಪುರಂನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು, ಇಂದು ಮುಂಜಾನೆ ಕೊನೆ ಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿ ರುವ ವಿವಿ.ಪುರಂ ಸಂಚಾರ ಠಾಣೆ ಪೊಲೀ ಸರು, ಇಂದು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರ ದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ದೇಹವನ್ನು ವಾರಸುದಾರರಿಗೆ ಒಪ್ಪಿಸಿದರು.

ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ನಾಳೆ (ಜ.23) ಸಂಜೆ 4 ಗಂಟೆಗೆ ಮೈಸೂರಿನ ಗಾಂಧಿನಗರದ ಬಳಿಯ ಕ್ರೈಸ್ತ ರುದ್ರ ಭೂಮಿ (ಸಿಮೆಟ್ರಿ)ಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಮ್ಮ ರಾಯಲ್ ಎನ್‍ಫೀಲ್ಡ್ ಬುಲೆಟ್ ಬೈಕಿನಲ್ಲಿ ಆಗಿಂದಾಗ ಬೈಕ್ ಸಾಹಸ ಸವಾರಿ ಮಾಡುತ್ತಿದ್ದ 65 ವರ್ಷದ ದೊರೈ ಜೋಸೆಫ್ ಸುನಂದರಾಜ್ ಅವರು, 2018ರ ಜುಲೈ ಮಾಹೆಯಲ್ಲಿ ದೆಹಲಿ ಯಿಂದ ಜಲಂಧರ್‍ವರೆಗೆ ಮನಾಲಿ, ಲೇ, ಕಾರ್ಗಿಲ್, ಜಮ್ಮು-ಕಾಶ್ಮೀರ್ ಮತ್ತು ಪಟಾಣ್‍ಕೋಟ್ ಹೀಗೆÀ 2,700 ಕಿಮೀ ಸಾಹಸ ಬೈಕ್ ಸವಾರಿ ಮಾಡಿ ಯಶಸ್ವಿ ಯಾಗಿದ್ದರಲ್ಲದೆ, ಪರ್ವತ ವಲಯ (ಒouಟಿಣಚಿiಟಿ ಖಚಿಟಿge)ದಲ್ಲೂ 700 ಕಿ.ಮೀ ವರೆಗೆ ಬೈಕ್ ಸವಾರಿ ಮಾಡಿ ಸಾಹಸ ಮೆರೆದಿದ್ದನ್ನು ಸ್ಮರಿಸಬಹುದಾಗಿದೆ.

Translate »