ಮೈಸೂರು: ಸಂಚಾರ ನಿಯಮ ಉಲ್ಲಂಘಿಸುವ ಜೊತೆಗೆ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುವ ಆಟೋ ಚಾಲಕರ ವಿರುದ್ಧ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಲಿದ್ದಾರೆ.
ಪ್ರವಾಸಿ ತಾಣವಾಗಿರುವ ಮೈಸೂರಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಿದ್ದು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಆಟೋಗಳನ್ನು ಅವಲಂಬಿಸುತ್ತಾರೆ. ಆ ವೇಳೆ ಕೆಲ ಆಟೋ ಚಾಲಕರು ಪ್ರವಾಸಿಗರೊಂದಿಗೆ ಅನುಚಿತವಾಗಿ ವರ್ತಿಸಿ ತೊಂದರೆ ಕೊಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಪೊಲೀಸರಿಗೆ ಬಂದಿವೆ.
ಅಂತಹ ವರ್ತನೆಗಳಿಗೆ ಬ್ರೇಕ್ ಹಾಕಲು ಮೈಸೂರು ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಮಾಡುವುದು, ಸಾರ್ವಜ ನಿಕರು ಕರೆದಲ್ಲಿಗೆ ಬಾಡಿಗೆಗೆ ಹೋಗಲು ನಿರಾಕರಿಸುವುದು, ನಿಗದಿಗಿಂತ ಹೆಚ್ಚಿನ ಬಾಡಿಗೆ ಹಣಕ್ಕೆ ಒತ್ತಾಯಿಸುವುದು, ಸಾರ್ವ ಜನಿಕರೊಂದಿಗೆ ಉದ್ಧಟತನ, ಅಸಭ್ಯ ವಾಗಿ ವರ್ತಿಸುವುದು, ಮದ್ಯಪಾನ ಮತ್ತು ಅಮಲು ಬರುವ ಪದಾರ್ಥ ಸೇವಿಸಿ ಆಟೋರಿಕ್ಷಾ ಚಾಲನೆ ಹೀಗೆ ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವ ಜನಿಕರು ಕರೆದ ಸ್ಥಳಕ್ಕೆ ಹೋಗಲು ನಿರಾಕರಿಸುವ ಕೆಲ ಆಟೋ ಚಾಲಕರು, ಕಮಿಷನ್ ಆಸೆಗಾಗಿ ಲಾಡ್ಜ್ ಮತ್ತು ಹೋಟೆಲ್ ಗಳಿಗೆ ಪ್ರಯಾಣಿಕರು ಒಪ್ಪದೇ ಇದ್ದರೂ ಕರೆದೊಯ್ಯುತ್ತಾರೆ. ಮೈಸೂರಿಗೆ ಬರುವ ಪ್ರವಾಸಿಗರು ವೇಶ್ಯಾವಾಟಿಕೆಯಂತಹ ಅನೈತಿಕ ಹಾಗೂ ಚಟುವಟಿಕೆಗಳಲ್ಲಿ ಭಾಗಿ ಯಾಗಲು ಪ್ರೇರೇಪಿಸಿ, ವಂಚನೆ ಮಾಡುತ್ತಾರೆ ಎಂದೂ ಪೊಲೀಸರು ತಿಳಿಸಿದ್ದಾರೆ.
ದಾಖಲಾತಿಗಳನ್ನು ಹೊಂದಿಲ್ಲದಿರು ವುದು, ಆಟೋಗಳನ್ನು ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸುವುದು, ಪೊಲೀಸ್ ಇಲಾಖೆ ಯಿಂದ ನೀಡಿರುವ ವಿಶೇಷ ಸಂಖ್ಯೆ ಮತ್ತು ಆಟೋ ಡ್ರೈವರ್ ಡಿಸ್ಪ್ಲೇ ಕಾರ್ಡ್ ಅನ್ನು ಅಳವಡಿಸಿಕೊಳ್ಳದಿರುವುದೂ, ಪ್ರಯಾ ಣಿಕರು ಹಾಗೂ ಇತರೆ ವಾಹನ ಚಾಲಕರಿಗೆ ಧಮಕಿ ಹಾಕುವುದು ಸೇರಿ ದಂತೆ ಆಟೋ ಚಾಲಕರ ಉಪದ್ರವಕ್ಕೆ ಕಡಿವಾಣ ಹಾಕಲು ಪೊಲೀಸರು ಮುಂದಾಗಿದ್ದಾರೆ.
ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಡಾ.ವಿಕ್ರಂ ಅಮಟೆ ನೇತೃತ್ವ ಹಾಗೂ ಸಂಚಾರ ವಿಭಾಗದ ಎಸಿಪಿ ಜಿ.ಎನ್.ಮೋಹನ್ ಮೇಲ್ವಿಚಾರಣೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಯುತ್ತಿದ್ದು, ಆಟೋ ಚಾಲಕರು ತೊಂದರೆ ನೀಡಿದಲ್ಲಿ, ಅನುಚಿತವಾಗಿ ವರ್ತಿಸಿದಲ್ಲಿ ಸಾರ್ವಜನಿ ಕರು ನಗರ ಪೊಲೀಸ್ ಕಂಟ್ರೋಲ್ ರೂಂ (0821-2418100, 2418339)ಗೆ ಮಾಹಿತಿ ನೀಡುವಂತೆ ಕೋರಲಾಗಿದೆ.