ನಂಜನಗೂಡು: ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ನಗರದ ಚಾಮಲಾಪುರದ ಹುಂಡಿ ಮತ್ತು ಅಶೋಕಪುರಂ ಬಡಾವಣೆಗಳಿಗೆ 300 ಮನೆಗಳು ಮಂಜೂರಾಗಿದ್ದು, ಜ.26ರಂದು ಗುದ್ದಲಿ ಪೂಜೆ ನೆರವೇರಿಸಲಾಗುತ್ತದೆ ಎಂದು ಶಾಸಕ ಬಿ.ಹರ್ಷವರ್ದನ್ ತಿಳಿಸಿದ್ದಾರೆ.
ಅಶೋಕಪುರಂ ಬಡಾವಣೆಯಲ್ಲಿ ಗುರುವಾರ ಪಾದಯಾತ್ರೆ ನಡೆಸಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬದಲಾದ ರಾಜಕೀಯ ವಿದ್ಯಾಮಾನಗಳಿಂದಾಗಿ ಕಳೆದ 15 ದಿನಗಳಿಂದ ಇಲ್ಲಿಗೆ ಬರಲು ಸಾಧ್ಯವಾಗಿರಲಿಲ್ಲ. ಇಂದಿನಿಂದ ಅಧಿಕಾರಿಗಳೊಂದಿಗೆ ನಗರ ಮತ್ತು ಕ್ಷೇತ್ರಾದ್ಯಂತ ಪ್ರವಾಸ ಕೈಗೊಂಡು ಸಾರ್ವಜನಿಕರ ಸಮಸ್ಯೆಗಳು, ಬಡಾವಣೆಗಳ ಕುಂದು ಕೊರತೆಗಳು ಸ್ಥಳದಲ್ಲಿಯೇ ಬಗೆಹರಿಸಲು ಕ್ರಮಕೈಗೊಳ್ಳುವೆ ಎಂದು ಭರವಸೆ ನೀಡಿದರು.
ನಂಜನಗೂಡು ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿದ್ದು, ತ್ವರಿತಗತಿಯಲ್ಲಿ ಕೆಲಸಗಳನ್ನು ಮುಗಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಬಿಜೆಪಿ ನಗರಾಧÀ್ಯಕ್ಷ ಬಾಲಚಂದ್ರು ಮಾತನಾಡಿ, ಸ್ಥಳೀಯ ಸಂಸ್ಥೆಗಳ ಮತ್ತು ಲೋಕಾಸಭಾ ಚುನಾವಣೆಗಳು ಬರುತ್ತಿರುವುದರಿಂದ ಕಾರ್ಯಕರ್ತರುಗಳು ಸಂಘಟಿತರಾಗಿ ಪಕ್ಷದ ಗೆಲುವಿಗೆ ಶ್ರಮಿಸಬೇಕು ವರಿಷ್ಠರು ಯಾರಿಗೆ ಟಿಕೆಟ್ ನೀಡಿದರೂ ಭಿನ್ನಮತ ವ್ಯಕ್ತಪಡಿಸದೆ ಅವರ ಗೆಲುವಿಗೆ ಶ್ರಮಿಸಬೇಕು ಎಂದರು.
ಬಿಜೆಪಿ ತಾಲೂಕು ಅಧÀ್ಯಕ್ಷ ಕೆಂಡಗಣ್ಣಪ್ಪ, ರಾಜ್ಯ ಎಸ್.ಟಿ ವಿಭಾಗದ ಉಪಾಧÀ್ಯಕ್ಷ ಸಿ.ಚಿಕ್ಕರಂಗನಾಯ್ಕ, ರಾಜ್ಯ ಮುಖಂಡ ಎನ್.ಆರ್ ಕೃಷ್ಣಪ್ಪ ಗೌಡ, ಜಿಲ್ಲಾ ಗ್ರಾಮಾಂತರ ಉಪಾಧÀ್ಯಕ್ಷ ಅಣ್ಣಯ್ಯಶೆಟ್ಟಿ, ತಾ.ಪಂ ಸದಸ್ಯರಾದ ರಾಮು, ಬಸವರಾಜು, ಅಶೋಕಪುರಂ ಭಾಗ್ಯ, ಸ್ವಾಮಿ, ಮಧುರಾಜ್, ಶಂಕರಪುರ ರಂಗಸ್ವಾಮಿ, ಮಾದೇಶ, ರಿಯಾಜ್‍ಅಹಮದ್, ಕಪ್ಪಸೋಗೆ ಶಿವರುದ್ರ, ನಿಧಿ ಸುರೇಶ, ಜಿ. ಬಸವರಾಜು, ಶಿರಮಳ್ಳಿ ಮಹದೇವಸ್ವಾಮಿ ಮತ್ತಿತರರು ಹಾಜರಿದ್ದರು.