ಟೆಂಡರ್ ಗುತ್ತಿಗೆ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಭಾರೀ ಅನ್ಯಾಯ  ಮಾಜಿ ಸಚಿವ ಗಂಡಸಿ ಶಿವರಾಂ ಆರೋಪ
ಹಾಸನ

ಟೆಂಡರ್ ಗುತ್ತಿಗೆ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಭಾರೀ ಅನ್ಯಾಯ ಮಾಜಿ ಸಚಿವ ಗಂಡಸಿ ಶಿವರಾಂ ಆರೋಪ

January 25, 2019

ಹಾಸನ: ಟೆಂಡರ್ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ತೀವ್ರ ಅನ್ಯಾಯ ಎಸಗುವುದರ ಮೂಲಕ ನಿಯಮಾವಳಿಯನ್ನು ಗಾಳಿಗೆ ತೂರಲಾಗಿದೆ ಎಂದು ಮಾಜಿ ಸಚಿವ ಗಂಡಸಿ ಶಿವರಾಂ ಅವರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ಡಿ.ರೇವಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಅವರು ಮಾತನಾಡಿ, ಅಂದು ಸಿಎಂ ಆಗಿದ್ದ ಸಿದ್ದರಾ ಮಯ್ಯ ಅವರು, ತಮ್ಮ 2014-15ನೇ ಬಜೆಟ್‍ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಟೆಂಡರ್‍ನಲ್ಲಿ ಮೀಸಲಾತಿ ಕಲ್ಪಿಸುವ ದೃಷ್ಟಿಯಿಂದ 50 ಲಕ್ಷಕ್ಕಿಂತ ಒಳಗಿನ ಕಾಮಗಾರಿಗಳನ್ನು ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ವಿಧೇಯಕದಲ್ಲಿ ತಿಳಿಸ ಲಾಗಿದೆ. ಎಲ್ಲ ನಿಯಮಗಳನ್ನೂ ಜಿಲ್ಲಾ ಉಸ್ತು ವಾರಿ ಸಚಿವ ಎಚ್.ಡಿ.ರೇವಣ್ಣ ಗಾಳಿಗೆ ತೂರಿದ್ದು, ಎಲ್ಲಾ ಕಾಮಗಾರಿಗಳಲ್ಲೂ ಅಕ್ರಮಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿ ಗಳನ್ನು ತಮಗೆ ಬೇಕಾದವರಿಗೇ ನೀಡಲಾಗುತ್ತಿದೆ. ನೀರಾವರಿ, ರಸ್ತೆ ಕಾಮಗಾರಿ ಸೇರಿದಂತೆ ಬಹು ತೇಕ ಎಲ್ಲಾ ಕಾಮಗಾರಿಗಳಲ್ಲೂ ಇದೇ ರೀತಿ ಅನ್ಯಾಯವಾಗುತ್ತಿದೆ. ಅಲ್ಲದೆ ಕಾಮಗಾರಿ ವೆಚ್ಚದಲ್ಲಿ ಸುಮಾರು 100 ಕೋಟಿ ರೂ.ನಷ್ಟು ವ್ಯತ್ಯಾಸ ಕಂಡು ಬಂದಿದ್ದು, ಇದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗಾಗಲೀ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗಾಗಲೀ ಅಥವಾ ರೇವಣ್ಣನವರ ಗಮ ನಕ್ಕೆ ಬಂದಿಲ್ಲವೇ? ಎಂದು ತರಾಟೆಗೆ ತೆಗೆದುಕೊಂಡರು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದವರನ್ನು ನಿಕೃಷ್ಟವಾಗಿ ಕಾಣಲಾಗುತ್ತಿದೆ. ಆದ್ದರಿಂದ ಸಮನ್ವಯ ಸಮಿತಿ ಅಧ್ಯಕ್ಷ ರಾಗಿರುವ ಸಿದ್ದರಾಮಯ್ಯ ಅವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧೋಗತಿಗೆ ಸಾಗಲು ಅವರೇ ಕಾರಣರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದ ಲ್ಲಿದ್ದರೂ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಜೆಡಿಎಸ್ ನಾಯಕರ ಅಣತಿಯಂತೆ ಕಾಮಗಾರಿ ಗಳು ನಡೆಯುತ್ತಿವೆ ಎಂದ ಅವರು ಜಿಲ್ಲೆಯ ಕಾವೇರಿ ನೀರಾವರಿ ನಿಗಮ, ಲೋಕೋಪ ಯೋಗಿ ಇಲಾಖೆ, ಜಿಲ್ಲಾ ಪಂಚಾಯಿತಿ ವ್ಯಾಪ್ತಿ ಯಲ್ಲಿ ನಡೆಯುವ ಕಾಮಗಾರಿಗಳು ಸೇರಿದಂತೆ, ಶಾಸಕರ ಅನುದಾನದ ಕಾಮಗಾರಿಗಳನ್ನು ಸಚಿವ ರೇವಣ್ಣರ ಆದೇಶದಂತೆ ಅಧಿಕಾರಿಗಳು ಪರಿಶಿಷ್ಟ ಸಮುದಾಯದ ಗುತ್ತಿಗೆದಾರನ್ನು ವಂಚಿಸುವ ದೃಷ್ಟಿಯಿಂದ ಪ್ಯಾಕೇಜ್ ಮಾಡಿಕೊಂಡಿರುವ ಉದಾ ಹರಣೆಗಳನ್ನು ದಾಖಲೆ ಸಮೇತ ವಿವರಿಸಿದರು.

ದಲಿತ ಸಮುದಾಯದವರು ಗುತ್ತಿಗೆಯಲ್ಲಿ ಮೀಸಲು ಬೇಕು ಎಂದು ಹೋರಾಟ ಮಾಡಿದರ ಫಲವಾಗಿ ಹಾಗೂ ಮಾಜಿ ಸಚಿವರಾದ ಹೆಚ್.ಸಿ. ಮಹದೇವಪ್ಪ ಅವರು ಇವರ ಹೋರಾಟಕ್ಕೆ ಬೆಂಬಲ ನೀಡಿದ್ದರಿಂದ ಪರಿಶಿಷ್ಟ ಜಾತಿಯವರಿಗೆ ಗುತ್ತಿಗೆಯಲ್ಲಿ ಮೀಸಲು ದೊರೆತಿದೆ. ಆದರೆ ಇಂದಿನ ಸ್ಥಿತಿಗತಿಗಳನ್ನು ನೋಡಿದರೆ ಇವರ ಹೋರಾಟಕ್ಕೆ ಪ್ರತಿಫಲ ಸಿಗುತ್ತಿಲ್ಲ. ಪರಿಶಿಷ್ಟ ಸಮು ದಾಯದವರಿಗೆ ಎಲ್ಲಾ ಇಲಾಖೆಗಳು ಗುತ್ತಿಗೆ ಕಾಮಗಾರಿಗಳನ್ನು ಮೀಸಲಿಡಬೇಕು ಎಂದು ನಿಯಮ ಇದ್ದರೂ ಕೂಡ ಜಿಲ್ಲೆಯಲ್ಲಿ ಇದ್ಯಾ ವುದು ನಡೆಯುತ್ತಿಲ್ಲ.ಕೆಲವೊಂದು ಕಾಮಗಾರಿ ಗಳನ್ನು ತಪ್ಪಿಸುವ ಉದ್ದೇಶದಿಂದ ಗ್ರಾಮೀಣ ಮೂಲಸೌಕರ್ಯ ಅಭಿವೃದ್ದಿ ನಿಗಮ ಮತ್ತು ನಿರ್ಮಿತಿ ಕೇಂದ್ರಗಳ ಮೂಲಕ ಕಾಮಗಾರಿಗಳನ್ನು ನಡೆಯುವ ಮೂಲಕ ಮೀಸಲು ಗುತ್ತಿಗೆದಾರರಿಗೆ ದೋಖ ಮಾಡುವ ಹುನ್ನಾರ ಜಿಲ್ಲೆಯಲ್ಲಿ ಹೆಚ್ಚಾಗಿ ನಡೆಯುತ್ತಿದೆ ಎಂದು ಆರೋಪಿಸಿದರು. ಮ್ಯಾನು ವಲ್ ಟೆಂಡರ್ ಮಾಡಬಾರದು ಎಂದು ಸರ್ಕಾರ ಆದೇಶ ಇದ್ದರೂ ಹೆಚ್ಚಾಗಿ ಜಿಲ್ಲೆಯಲ್ಲಿ ಮ್ಯಾನು ವಲ್ ಟೆಂಡರ್‍ಗಳನ್ನು ನಡೆಯುತ್ತಿವೆ. ಯಾವ ಇಲಾಖೆಯಲ್ಲೂ ಮೀಸಲಾತಿ ನಿಯಮ ಪಾಲಿ ಸುತ್ತಿಲ್ಲ. ಇ-ಪ್ರೊಕ್ಯೂರ್‍ಮೆಂಟ್ ಟೆಂಡರ್ ಪದ್ಧತಿ ಪಾಲನೆ ಮಾಡುತ್ತಿಲ್ಲ ಎಂದು ದೂರಿದರು.

ಜಿಲ್ಲಾಡಳಿತವಾಗಲೀ, ಸಂಬಂಧಪಟ್ಟ ಅಧಿಕಾರಿ ಗಳಾಗಲಿ ಅಕ್ರಮ ಟೆಂಡರ್ ಕಾಮಗಾರಿ ಬಗ್ಗೆ ಕ್ರಮ ಕೈಗೊಳ್ಳದೆ ಮೌನ ವಹಿಸಿರುವುದು ಯಾವ ಕಾರಣಕ್ಕೆ ಎಂಬುದು ತಿಳಿಯುತ್ತಿಲ್ಲ. ಜಿಲ್ಲೆಯಲ್ಲಿ ಯಾವುದೇ ಕಾಮಗಾರಿಗಳು ಪಾರದರ್ಶಕವಾಗಿ ನಡೆಯುತ್ತಿಲ್ಲ. ಈ ಎಲ್ಲ ಅಂಶಗಳನ್ನಿಟ್ಟುಕೊಂಡು ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರ ಗಮನಕ್ಕೆ ತರುವುದಾಗಿ ಎಚ್ಚರಿಸಿದರು.

Translate »