ಮ್ಯಾಕ್ಸಿಕ್ಯಾಬ್ ಡಿಕ್ಕಿ: ಮೊಪೆಡ್ ಸವಾರ ಸಾವು
ಮೈಸೂರು

ಮ್ಯಾಕ್ಸಿಕ್ಯಾಬ್ ಡಿಕ್ಕಿ: ಮೊಪೆಡ್ ಸವಾರ ಸಾವು

January 25, 2019

ಮೈಸೂರು: ಮ್ಯಾಕ್ಸಿಕ್ಯಾಬ್ ವಾಹನ ಡಿಕ್ಕಿ ಹೊಡೆದು ಮೊಪೆಡ್ ಸವಾರ ಮೃತಪಟ್ಟಿರುವ ಘಟನೆ ಮೈಸೂರಿನ ಗನ್‍ಹೌಸ್ ಸಮೀಪ ಸಂಭವಿಸಿದೆ. ಮೈಸೂರಿನ ವಿದ್ಯಾನಗರದ ನಿವಾಸಿ ಆರ್.ಗೋಪಾಲಕೃಷ್ಣ(68) ಅಪಘಾತದಲ್ಲಿ ಮೃತಪಟ್ಟವರು. ನಂಜುಮಳಿಗೆಯಲ್ಲಿ ಟೈಲರಿಂಗ್ ಕೆಲಸ ಮಾಡಿಕೊಂಡಿದ್ದ ಇವರು ಮಂಗಳವಾರ ರಾತ್ರಿ ಅಂಗಡಿಯಿಂದ ಮನೆಗೆ ತೆರಳುತ್ತಿದ್ದಾಗ ಅಪ ಘಾತ ಸಂಭವಿಸಿದೆ. ಗೋಪಾಲಕೃಷ್ಣ ತಮ್ಮ ಟಿವಿಎಸ್ ಎಕ್ಸೆಲ್ (ಕೆಎ-02, ಕ್ಯೂ-0427) ಮೊಪೆಡ್‍ನಲ್ಲಿ ಗನ್‍ಹೌಸ್ ವೃತ್ತದಿಂದ ಕುಸ್ತಿ ಅಖಾಡದ ಕಡೆಗೆ ರಾಂಗ್ ಸೈಡ್‍ನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಜಯಚಾಮರಾಜ (ಹಾರ್ಡಿಂಜ್) ವೃತ್ತದ ಕಡೆಯಿಂದ ವೇಗವಾಗಿ ಬಂದ ಮ್ಯಾಕ್ಸಿಕ್ಯಾಬ್(ಕೆಎ-02, ಎಬಿ-7389) ನಂಜನ ಗೂಡು ರಸ್ತೆ ಜಂಕ್ಷನ್‍ನಲ್ಲಿ ಮೊಪೆಡ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನೆಲಕ್ಕುರುಳಿದ ಗೋಪಾಲಕೃಷ್ಣ ಅವರ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದೆ. ಕೂಡಲೇ ಸಮೀಪದ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರ ಮನೆಯವರು ಅಲ್ಲಿಂದ ಕೆ.ಆರ್.ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದರು. ಪರೀಕ್ಷಿಸಿದ ನಂತರ ವೈದ್ಯರು ಗೋಪಾಲ ಕೃಷ್ಣ ಮೃತಪಟ್ಟಿರುವುದಾಗಿ ತಿಳಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕೃಷ್ಣರಾಜ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »