ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಗಜ ಹಾಗೂ ಅಶ್ವಪಡೆಗೆ ಗುರುವಾರ ಅರಮನೆಯ ವರಾಹ ಗೇಟ್ ಬಳಿಯಿರುವ ವಾಹನ ನಿಲುಗಡೆ ಸ್ಥಳದಲ್ಲಿ ಸಿಡಿಮದ್ದು ಸಿಡಿಸುವ ತಾಲೀಮು ನಡೆಸಲಾಯಿತು. ಜಂಬೂ ಸವಾರಿ ಹಾಗೂ ಬನ್ನಿಮಂಟಪದ ಪಂಚಿನ ಕವಾಯತು ವೇಳೆ ವಿಜಯದ ಸಂಕೇತವಾಗಿ 21 ಸುತ್ತು ಕುಶಾಲ ತೋಪು ಸಿಡಿಸುವ ಪರಂಪರೆಯಿದ್ದು, ಈ ಹಿನ್ನೆಲೆಯಲ್ಲಿ ಆನೆ ಹಾಗೂ ಕುದುರೆಗಳು ಹೆದರದಂತೆ ನೋಡಿಕೊಳ್ಳುವುದಕ್ಕಾಗಿ ಸಿಡಿಮದ್ದಿನ ತಾಲೀಮು ನಡೆಸಲಾಗುತ್ತದೆ. ಇಂದು ಮಧ್ಯಾಹ್ನ ನಡೆಸಿದ ಈ ಸಾಲಿನ ಮೊದಲ ತಾಲೀಮಿನಲ್ಲಿ ಫಿರಂಗಿ ದಳದ 30 ಮಂದಿ…
ಆನ್‍ಲೈನ್ ಔಷಧ ಮಾರಾಟ ವಿರೋಧಿಸಿ ಇಂದು ದೇಶಾದ್ಯಂತ ಔಷಧ ಮಾರಾಟ ಬಂದ್
September 28, 2018ಬೆಂಗಳೂರು: ಕೇಂದ್ರ ಸರ್ಕಾರ ಆನ್‍ಲೈನ್‍ನಲ್ಲಿ ಔಷಧ ಮಾರಾಟಕ್ಕೆ ಅನುಮತಿ ನೀಡಲು ಮುಂದಾಗಿರುವುದನ್ನು ವಿರೋ ಧಿಸಿ ಶುಕ್ರವಾರ ದೇಶಾದ್ಯಂತ ಔಷಧ ಮಾರಾಟ ಬಂದ್ ಆಚರಿಸಲಾಗು ತ್ತಿದೆ. ರಾಷ್ಟ್ರಮಟ್ಟದಲ್ಲಿ ಇ-ಫಾರ್ಮಸಿ ವಿತರಣಾ ವ್ಯವಸ್ಥೆಯನ್ನು ತರಾತುರಿಯಲ್ಲಿ ಜಾರಿಗೆ ತರಲು ಕೇಂದ್ರ ಉದ್ದೇಶಿಸಿದೆ. ಇ-ಫಾರ್ಮಸಿ ಎಂಬುದು ಔಷಧ ಅಂಗಡಿಯಲ್ಲ, ಕಾನೂನಾತ್ಮಕವಲ್ಲದ ಯೋಜನೆ ಜಾರಿ ಮೂಲಕ ಗ್ರಾಹಕರ ಹಿತಾಸಕ್ತಿ ಕಡೆಗಣಿಸಲಾಗುತ್ತಿದೆ ಎಂದು ಔಷಧ ವ್ಯಾಪಾರಿಗಳ ಸಂಘ ಆರೋಪಿಸಿದೆ. ನಕಲಿ ಹಾಗೂ ಮಾದಕ ವಸ್ತುಗಳ ವ್ಯಾಪಾರಕ್ಕೆ ಇ-ಫಾರ್ಮಸಿ ಅವಕಾಶ ನೀಡಲಿದ್ದು, ಔಷಧಗಳ ಅರಿವಿಲ್ಲದ ವ್ಯಕ್ತಿ ವಿತರಕನಾಗುವುದರಿಂದ…
84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ. ಚಂದ್ರಶೇಖರ್ ಕಂಬಾರ ಆಯ್ಕೆ
September 28, 2018ಗದಗ: ಧಾರವಾಡದಲ್ಲಿ ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ್ ಕಂಬಾರ ಅವರನ್ನು ಆಯ್ಕೆ ಮಾಡಲಾಗಿದೆ. ಇಂದು ಗದಗದಲ್ಲಿ ನಡೆದ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚಂದ್ರಶೇಖರ್ ಕಂಬಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ತಿಳಿಸಿದ್ದಾರೆ. ಕಾರ್ಯಕಾರಿ ಸಭೆಯ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮನು ಬಳಿಗಾರ್, 84ನೇ ಕನ್ನಡ…
ಆತ್ಮಹತ್ಯೆ ಮಹಾ ಪಾಪ…ನಕಾರಾತ್ಮಕ ಚಿಂತನೆ ಸುಳಿದರೆ ಕೂಡಲೇ ಆಪ್ತರಲ್ಲಿ ಸಮಾಲೋಚಿಸಿ
September 28, 2018ಮೈಸೂರು: ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೇ ಪರಿಹಾರವಲ್ಲ… ಈಸಬೇಕು ಇದ್ದು ಜಯಿಸಬೇಕು… ಆತ್ಮ ಹತ್ಯೆ ಮಹಾಪಾಪ… ಆಪ್ತ ಸಮಾಲೋ ಚನೆ ಪಡೆಯಿರಿ, ಆತ್ಮಹತ್ಯೆ ತಡೆಯಿರಿ… ಹೀಗೆ ಹತ್ತು ಹಲವು ಘೋಷಣೆಗಳು ಮೊಳಗುವ ಮೂಲಕ ಆತ್ಮಹತ್ಯೆ ತಡೆಗಟ್ಟುವ ಕುರಿತು ಜಾಗೃತಿ ಜಾಥಾ ನಡೆಸಲಾಯಿತು. ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಸಂಯುಕ್ತಾಶ್ರಯ ದಲ್ಲಿ ಗುರುವಾರ ಏರ್ಪಡಿಸಿದ್ದ ಜಾಥಾ ದಲ್ಲಿ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು…
ಸಮನ್ವಯ ಸಮಿತಿಗೆ ಮೈತ್ರಿ ಪಕ್ಷದ ರಾಜ್ಯಾಧ್ಯಕ್ಷರನ್ನು ಸೇರಿಸಿ
September 28, 2018ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯಲ್ಲಿ ತಮ್ಮನ್ನೂ ಒಬ್ಬ ಸದಸ್ಯನನ್ನಾಗಿ ಸೇರಿಸ ಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಇಂದಿಲ್ಲಿ ಪುನರುಚ್ಛರಿಸಿದ್ದಾರೆ. ಆಡಳಿತದಲ್ಲಿನ ಪಾಲುದಾರಿಕೆ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‍ನ ರಾಜ್ಯಾಧ್ಯಕ್ಷರುಗಳು ಸಮಿತಿಯ ಸದಸ್ಯರಾಗಿರ ಲೇಬೇಕು, ಅದನ್ನು ಈಗಲೂ ಒತ್ತಿ ಹೇಳುತ್ತೇನೆ. ಸಮನ್ವಯ ಸಮಿತಿಗೆ ಪ್ರಮುಖರಲ್ಲದೆ, ಸರ್ಕಾರ ಮತ್ತು ಪಕ್ಷದ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲು ತಮ್ಮನ್ನೂ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಸೇರಿಸಲೇಬೇಕು ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,…
ಮೈಸೂರು ಡಿಸಿ ಕಚೇರಿಯಲ್ಲಿ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ 18 ದೂರು ದಾಖಲು
September 28, 2018ಮೈಸೂರು: ಮೈಸೂರು ಜಿಲ್ಲಾಧಿ ಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಾರ್ವಜನಿಕ ಕುಂದುಕೊರತೆಗಳ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ವಾಹನಗಳ ಹೈಬೀಮ್ ದೀಪ ಗಳಿಂದ ಕಿರಿಕಿರಿ ತಪ್ಪಿಸಿ, ಖಾಸಗಿ ಆಯುರ್ವೇದಿಕ್ ಕ್ಲಿನಿಕ್‍ಗಳಲ್ಲಿ ಅಲೋಪತಿ ಔಷಧಿಗಳ ವಿತರಣೆ ನಿಲ್ಲಿಸಿ, ಸಿಗ್ನಲ್ ದೀಪ ಅಳವಡಿಸಿ, ಜನರಿಗೆ ತೊಂದರೆಯಾ ಗುವ ಮುನ್ನ ಒಣಗಿದ ಮರಗಳನ್ನು ಕಡಿಯಬೇಕು. ರಸ್ತೆ, ಚರಂಡಿ, ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡಬೇಕು ಎಂಬಿತ್ಯಾದಿ ಹಲವು ಸಮಸ್ಯೆಗಳು ಅನಾವರಣಗೊಂಡವು. ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು…
ಶಾಖಾ ವ್ಯವಸ್ಥಾಪಕರು ಸೇರಿ ನಾಲ್ವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು
September 28, 2018ಎಂಸಿಡಿಸಿಸಿ ಬ್ಯಾಂಕ್‍ನ ಹುಣಸೂರು, ಬಿಳಿಕೆರೆ ಶಾಖೆಯಲ್ಲಿನ ಕೋಟ್ಯಾಂತರ ರೂ. ಅವ್ಯವಹಾರ ಪ್ರಕರಣ ಹುಣಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ (ಎಂಸಿಡಿಸಿಸಿ) ಬ್ಯಾಂಕ್‍ನ ಹುಣಸೂರು ಮತ್ತು ಬಿಳಿಕೆರೆ ಶಾಖೆಗಳಲ್ಲಿ ನಡೆದಿರುವ ಕೋಟ್ಯಾಂತರ ರೂ. ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಹುಣಸೂರು ಶಾಖೆಯ ಹಿಂದಿನ ಮ್ಯಾನೇಜರ್ ರಾಮಪ್ಪ ಪೂಜಾರ್ ಮತ್ತು ಬಿಳಿಕೆರೆ ಶಾಖೆಯ ಹಿಂದಿನ ಮ್ಯಾನೇಜರ್ ಜಿ.ಎಸ್.ಶಶಿಧರ್ ಸೇರಿದಂತೆ ನಾಲ್ವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಬಿಳಿಕೆರೆ ಶಾಖೆಯ ಹಾಲಿ ಮ್ಯಾನೇಜರ್ ಎಂ.ಟಿ.ಶಶಿಧರ ಅವರು ಬಿಳಿಕೆರೆ ಪೊಲೀಸ್ ಠಾಣೆಗೆ ದೂರು…
ಕೇಂದ್ರ, ರಾಜ್ಯ ಸರ್ಕಾರದ ಉದ್ಯೋಗ ಯೋಜನೆಗಳ ಬಳಸಿಕೊಳ್ಳಲು ಶಾಸಕ ಎಲ್.ನಾಗೇಂದ್ರ ಕರೆ
September 28, 2018ಮೈಸೂರು: ನಿರು ದ್ಯೋಗ ನಿವಾರಣೆಗಾಗಿ ಅನೇಕ ಯೋಜನೆ ಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೊಳಿಸಿವೆ. ಎಲ್ಲಾ ವರ್ಗದಲ್ಲೂ ಈ ಯೋಜನೆಗಳನ್ನು ಸದ್ಬಳÀಕೆ ಮಾಡಿಕೊಳ್ಳು ವವರ ಸಂಖ್ಯೆ ಹೆಚ್ಚಾಗಬೇಕು ಎಂದು ಶಾಸಕ ಎಲ್.ನಾಗೇಂದ್ರ ಅಭಿಪ್ರಾಯಪಟ್ಟರು. ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂ ಗಣದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ಪರಿಶಿಷ್ಟಜಾತಿ ಮತ್ತು ಪಂಗಡದ ಉದ್ಯಮಿದಾರರ ಸಂಘದ ಆಶ್ರಯದಲ್ಲಿ ನಡೆದ 2013-18ನೇ ಹಣಕಾಸು ಯೋಜನೆ ಅಡಿ `ನೂತನ ಜವಳಿ ವಿಶೇಷ ಘಟಕ ಹಾಗೂ ಗಿರಿಜನ ಉಪ…
ನಾಳೆ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಭೌತಿಕ ಚಿಕಿತ್ಸೆ ಪುನಶ್ಚೇತನ ಕೇಂದ್ರ ಆರಂಭ
September 28, 2018ಮೈಸೂರು: ಮೈಸೂರಿನ ಜೆಎಸ್‍ಎಸ್ ಹಳೇ ಆಸ್ಪತ್ರೆಯಲ್ಲಿ ನಿರ್ಮಿಸಿರುವ ರಾಜ್ಯದ ಮೊದಲ ಭೌತಿಕ ಚಿಕಿತ್ಸೆ ಮತ್ತು ಪುನಶ್ಚೇತನ ಕೇಂದ್ರ ವನ್ನು ಸೆ.28ರಂದು ಸಂಜೆ 6 ಗಂಟೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಎಸ್.ಪಾಟೀಲ್ ಉದ್ಘಾಟಿಸಲಿದ್ದಾರೆ ಎಂದು ಜೆಎಸ್‍ಎಸ್ ಆಸ್ಪತ್ರೆ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಎಂ.ಮಹೇಶ್ ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಾಮಾನ್ಯ ಚಿಕಿತ್ಸೆ, ಶಸ್ತ್ರಚಿಕಿತ್ಸೆಗಳ ಜತೆಗೆ ಭೌತಿಕ-ಮಾನಸಿಕವಾಗಿ ಪೂರ್ಣ ಗುಣಮುಖ ರಾಗುವಂತೆ ಮಾಡಲು ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ, ಆಧುನಿಕ ತಂತ್ರಜ್ಞಾನಗಳನ್ನೊಳ ಗೊಂಡ ಈ ಕೇಂದ್ರವನ್ನು ನಿರ್ಮಿಸಲಾಗಿದೆ….
ಅ.10ರಂದು `ಚಿಕಾಗೋ ವಿಶ್ವ ವಿಜೇತ ವಿವೇಕ ವಾಣಿ-125’ ಚಾಲನೆ
September 28, 2018ಮೈಸೂರು: ಸ್ವಾಮಿ ವಿವೇಕಾನಂದರು ಅಮೆರಿಕಾದ ಚಿಕಾಗೋ ದಲ್ಲಿ ವಿಶ್ವ ಧರ್ಮ ಸಮ್ಮೇಳನದಲ್ಲಿ ದೇಶದ ಗರಿಮೆ ಸಾರಿದ 125ನೇ ವರ್ಷಾಚರಣೆ ಸ್ವರಣಾರ್ಥ ಅ.10 ರಂದು ಬೆಳಿಗ್ಗೆ 11.30 ಗಂಟೆಗೆ ಮೈಸೂರಿನ ಚಾಮುಂಡಿಬೆಟ್ಟ ದಲ್ಲಿ `ಚಿಕಾಗೋ ವಿಶ್ವ ವಿಜೇತ ವಿವೇಕಾವಾಣಿ-125’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಸ್ತ್ರ ಭಾರತದ ವ್ಯವಸ್ಥಾಪಕ ಜೆ.ವಿನೋದ್‍ಕುಮಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರು ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವೇಕಾನಂದ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಮಹಾನ್ ಸೇನಾನಿ. ಅವರ ಗೌರವಾರ್ಥ ಈ ಕಾರ್ಯಕ್ರಮ…