ನಾಳೆ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಭೌತಿಕ  ಚಿಕಿತ್ಸೆ ಪುನಶ್ಚೇತನ ಕೇಂದ್ರ ಆರಂಭ
ಮೈಸೂರು

ನಾಳೆ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಭೌತಿಕ  ಚಿಕಿತ್ಸೆ ಪುನಶ್ಚೇತನ ಕೇಂದ್ರ ಆರಂಭ

September 28, 2018

ಮೈಸೂರು: ಮೈಸೂರಿನ ಜೆಎಸ್‍ಎಸ್ ಹಳೇ ಆಸ್ಪತ್ರೆಯಲ್ಲಿ ನಿರ್ಮಿಸಿರುವ ರಾಜ್ಯದ ಮೊದಲ ಭೌತಿಕ ಚಿಕಿತ್ಸೆ ಮತ್ತು ಪುನಶ್ಚೇತನ ಕೇಂದ್ರ ವನ್ನು ಸೆ.28ರಂದು ಸಂಜೆ 6 ಗಂಟೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಎಸ್.ಪಾಟೀಲ್ ಉದ್ಘಾಟಿಸಲಿದ್ದಾರೆ ಎಂದು ಜೆಎಸ್‍ಎಸ್ ಆಸ್ಪತ್ರೆ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಎಂ.ಮಹೇಶ್ ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾಮಾನ್ಯ ಚಿಕಿತ್ಸೆ, ಶಸ್ತ್ರಚಿಕಿತ್ಸೆಗಳ ಜತೆಗೆ ಭೌತಿಕ-ಮಾನಸಿಕವಾಗಿ ಪೂರ್ಣ ಗುಣಮುಖ ರಾಗುವಂತೆ ಮಾಡಲು ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ, ಆಧುನಿಕ ತಂತ್ರಜ್ಞಾನಗಳನ್ನೊಳ ಗೊಂಡ ಈ ಕೇಂದ್ರವನ್ನು ನಿರ್ಮಿಸಲಾಗಿದೆ. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಕಲಾಗುರು ಡಿ.ವಿ.ಹಾಲಭಾವಿ ಪ್ರಶಸ್ತಿ ಪುರಸ್ಕøತ ಪ್ರೊ.ಎಂ.ಜೆ. ಕಮಲಾಕ್ಷಿ, ಡಾ.ಎಸ್.ಸಿ.ಪಾಟೀಲ ಅವರಿಗೆ ಪ್ರಶಸ್ತಿ ಪ್ರದಾನ ಮಾಡ ಲಾಗುವುದು. ಶಾಸಕ ಎಸ್.ಎ.ರಾಮದಾಸ್ ಕೃತಿ ಬಿಡುಗಡೆ ಮಾಡಲಿ ದ್ದಾರೆ. ಜೈನ್ ಮಿಲನ್ ಪ್ಯಾಲೇಸ್ ಸಿಟಿ, ಲಯನ್ಸ್ ಕ್ಲಬ್, ಆಸರೆ ಫೌಂಡೇಷನ್ ಸಹಯೋಗದಲ್ಲಿ 25 ವಿಶೇಷಚೇತನರಿಗೆ ಕೃತಕಾಂಗ ಹಾಗೂ 10 ವಿಶೇಷಚೇತನರಿಗೆ ಗಾಲಿ ಕುರ್ಚಿಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಗುವುದು ಎಂದು ಹೇಳಿದರು.

ಸೆರೆಬ್ರಲ್ ಪಾಲ್ಸಿ, ಪಾಶ್ರ್ವವಾಯು, ವಯೋಸಹಜ ಕಾಯಿಲೆ ಗಳಿಗೆ ಒಳಗಾದ ರೋಗಿಗಳು ಚಿಕಿತ್ಸೆ ಪಡೆದು ಮನೆಗೆ ತೆರಳಿ ಸ್ವಸ್ಥರಾಗಿದ್ದರೂ ಭೌತಿಕ ನ್ಯೂನತೆಗಳಿಂದ ಸಾಮಾನ್ಯ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಅಂತಹ ವರು ಬೇರೆಯವರಿಗೆ ಹೊರೆಯಾಗದಂತೆ ಅವರ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಪರಾವಲಂಬಿಗಳಾಗುವಂತೆ ಸ್ವಸ್ಥ ಜೀವನ ನಡೆಸುವುದು ಅಗತ್ಯ. ವೈಯಕ್ತಿಕ ಕೆಲಸ ನಿರ್ವಹಣೆ ಮಾಡಿಕೊಳ್ಳಲು ದೀರ್ಘಾ ವಧಿಯಲ್ಲಿ ಅಗತ್ಯ ಥೆರಪಿ ನೀಡುವುದು ಕೇಂದ್ರದ ಮುಖ್ಯ ಉz್ದÉೀಶ. ಸೆರೆಬ್ರೆಲ್ ಪಾಲ್ಸಿ ಡೌನ್ ಸಿಂಡ್ರೋಮ್ ಅಥವಾ ಜೆನೆಟಿಕ್ ಡಿಸಾ ರ್ಡರ್, ಇಂಟೆಲೆಕ್ಚುಯಲ್ ಡಿಸೆಬಿಲಿಟಿ, ಮಸ್ಕ್ಯುಲರ್ ಡಿಸ್ಟ್ರೋಫಿ, ನ್ಯೂರೋಮಸ್ಕ್ಯು ಲರ್ ಡಿಸಾರ್ಡರ್, ಆಟಿಸಂ ಅಥವಾ ಡೆವ ಲಪ್‍ಮೆಂಟಲ್ ಡಿಸಾರ್ಡರ್, ಸೆನ್ಸರಿ ಡಿಪ್ರವೇ ಶನ್ ಡಿಸಾರ್ಡರ್, ಸ್ಪೀಚ್ ಡಿಸಾರ್ಡರ್ ಅಥವಾ ಭಾಷಾ ತೊಂದರೆಯುಳ್ಳ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಅಲ್ಲದೆ, ವಿವಿಧ ವೈದ್ಯಕೀಯ ಆಸ್ವಸ್ಥತೆಗೆ ಚಿಕಿತ್ಸೆ ಪಡೆದು ಅನಂತ ರವೂ ಭೌತಿಕ ಅಸಮತೋಲನೆಯಿಂದ ಜೀವನ ನಡೆಸಲು ಸಾಧ್ಯ ವಾಗದವರಿಗೆ ತರಬೇತಿ ನೀಡಲಾಗುವುದು. ಇದರಿಂದ ಚೇತರಿಸಿ ಕೊಳ್ಳಲು ಸಹಾಯಕವಾಗುವುದು ಎಂದರು. 24 ಹಾಸಿಗೆಗಳನ್ನು ಹೊಂದಿ ರುವ 9 ಥೆರಪಿ ಕೊಠಡಿಗಳು, 5 ಸೆಮಿ ಸ್ಪೆಷಲ್ ವಾರ್ಡುಗಳು, 7 ಸಾಮಾನ್ಯ ವಾರ್ಡುಗಳು ಹಾಗೂ ವ್ಯಾಯಾಮ ಶಾಲೆಗೆ ಅವ ಕಾಶವಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕೇಂದ್ರದ ಮುಖ್ಯಸ್ಥರಾದ ಡಾ.ಕವಿತಾರಾಜ್, ಮೂಳೆ ಮತ್ತು ಕೀಲು ವಿಭಾಗದ ಮುಖ್ಯಸ್ಥ ಡಾ.ಮೃತ್ಯುಂಜಯ, ವೈದ್ಯಕೀಯ ಅಧೀಕ್ಷಕ ಡಾ.ಗುರುಸ್ವಾಮಿ, ಡಾ.ಬಸವರಾಜ್, ಪ್ರಳಯ ಉಪಸ್ಥಿತರಿದ್ದರು.

Translate »