ನಿಷ್ಕ್ರಿಯಗೊಂಡ ಮೆದುಳಿನ ಭಾಗಕ್ಕೆ ಚಿಕಿತ್ಸೆ ನೀಡುವ  ವಿಧಾನಗಳ ಬಗ್ಗೆ ನಿಮ್ಹಾನ್ಸ್‍ನಲ್ಲಿ ಸಂಶೋಧನೆ
ಮೈಸೂರು

ನಿಷ್ಕ್ರಿಯಗೊಂಡ ಮೆದುಳಿನ ಭಾಗಕ್ಕೆ ಚಿಕಿತ್ಸೆ ನೀಡುವ  ವಿಧಾನಗಳ ಬಗ್ಗೆ ನಿಮ್ಹಾನ್ಸ್‍ನಲ್ಲಿ ಸಂಶೋಧನೆ

November 6, 2018

ಮೈಸೂರು: ಪಾಶ್ರ್ವವಾಯು ಗುಣಪಡಿ ಸಲು ನಿಷ್ಕ್ರಿಯಗೊಂಡ ಮೆದುಳಿನ ಭಾಗವನ್ನು ಪರಿ ಣಾಮಕಾರಿ ಚಿಕಿತ್ಸಾ ವಿಧಾನಗಳ ಮೂಲಕ ಉದ್ದೀಪನ ಗೊಳಿಸುವ ಸಂಬಂಧ ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆ ಯಲ್ಲಿ ಸಂಶೋಧನೆ ಪ್ರಗತಿಯಲ್ಲಿದೆ ಎಂದು ನಿಮ್ಹಾನ್ಸ್ ನಿರ್ದೇಶಕ ಡಾ.ಬಿ.ಎನ್.ಗಂಗಾಧರ್ ತಿಳಿಸಿದರು.

ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಶ್ರೀರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಆಸ್ಪತ್ರೆ ಹಾಗೂ ಜೆಎಸ್‍ಎಸ್ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ಜಂಟಿ ಆಶ್ರಯದಲ್ಲಿ `ವಿಶ್ವ ಪಾಶ್ರ್ವವಾಯು ಪೀಡಿತರ ದಿನ’ದ ಅಂಗವಾಗಿ ಪಾಶ್ರ್ವವಾಯು (ಲಕ್ವ ಅಥವಾ ಮೆದುಳಿನ ಆಘಾತ) ಕುರಿತಂತೆ ಬುಧ ವಾರ ಹಮ್ಮಿಕೊಂಡಿದ್ದ ವೈಜ್ಞಾನಿಕ ವಿಚಾರ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಣಾಮಕಾರಿ ಹಾಗೂ ತ್ವರಿತವಾಗಿ ಪಾಶ್ರ್ವ ವಾಯು ಗುಣಪಡಿಸುವ ಸಂಬಂಧ ನಿಮ್ಹಾನ್ಸ್ ಸಂಸ್ಥೆ ಸಂಶೋಧನೆಯಲ್ಲಿ ತೊಡಗಿದೆ. ಕಳೆದ ಒಂದೂವರೆ ವರ್ಷದಿಂದ ನುರಿತ ವೈದ್ಯರ ತಂಡ ಈ ಸಂಶೋ ಧನಾ ಪ್ರಕ್ರಿಯೆ ನಡೆಸುತ್ತಿದೆ. ನಿಷ್ಕ್ರೀಯಗೊಂಡಿರುವ ಮೆದುಳಿನ ಭಾಗವನ್ನು ಉದ್ದೀಪನಗೊಳಿಸಿ ದೇಹ ದಲ್ಲಿ ಉಂಟಾಗಿರುವ ಊನವನ್ನು ನಿವಾರಿಸುವ ಚಿಕಿತ್ಸಾ ವಿಧಾನಗಳತ್ತ ಈ ಸಂಶೋಧನೆ ಬೆಳಕು ಚೆಲ್ಲಲಿದೆ ಎಂದು ತಿಳಿಸಿದರು.

ಎಂಬಿಬಿಎಸ್ ಹಂತದಲ್ಲೇ ಲಕ್ವ ಬಗ್ಗೆ ತಿಳಿಸಿ: ಪ್ರಾರಂ ಭಿಕ ವೈದ್ಯಕೀಯ ಶಿಕ್ಷಣದಲ್ಲೇ ಲಕ್ವದ ಬಗ್ಗೆ ಪಠ್ಯ ಹಾಗೂ ಪ್ರಾಯೋಗಿಕ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ದೊರೆ ಯುವಂತಾಗಬೇಕು. ನಮಗೆ ವೈದ್ಯಕೀಯ ಶಿಕ್ಷಣದ ಆರಂಭದಲ್ಲೇ ಪಾಶ್ರ್ವವಾಯು ಸಂಬಂಧದ ಶಿಕ್ಷಣ ಲಭ್ಯವಾಗಲಿಲ್ಲ. ಆಗ ನರಶಾಸ್ತ್ರ ವಿದ್ಯಾಭ್ಯಾಸ ಎಂದರೆ ಕಬ್ಬಿಣದ ಕಡಲೆ ಎಂಬ ಭಾವನೆಯೂ ಇತ್ತು. ಈಗಲೂ ಅದೇ ವಾತಾವರಣ ಇದ್ದು, ಹೀಗಾಗಿ ಎಂಬಿಬಿಎಸ್ ಹಂತದಲ್ಲೇ ವಿದ್ಯಾರ್ಥಿಗಳಿಗೆ ಪಾಶ್ರ್ವವಾಯು ಸಂಬಂಧಿತ ಪ್ರಾಥಮಿಕ ಚಿಕಿತ್ಸಾ ವಿಧಾನದ ಕಲಿಕೆ ಇರಬೇಕು ಎಂದು ಹೇಳಿದರು.

ಫಿಜಿಷಿಯನ್ ವೈದ್ಯರು ಲಕ್ವ ಸಮಸ್ಯೆಗೆ ಪ್ರಾಥಮಿಕ ಹಂತದ ಚಿಕಿತ್ಸೆ ನೀಡುವಂತಹ ವಾತಾವರಣ ನಿರ್ಮಾಣ ವಾಗಬೇಕು. ಜೊತೆಗೆ ಲಕ್ವ ಸಮಸ್ಯೆಗೆ ತುತ್ತಾಗಿ ಆಸ್ಪತ್ರೆಗೆ ಧಾವಿಸುತ್ತಿದ್ದಂತೆ ಪ್ರಾಥಮಿಕ ಚಿಕಿತ್ಸೆ ನೀಡಲು ಅಗತ್ಯ ವಿರುವ ವೈದ್ಯಕೀಯ ಶಿಕ್ಷಣ ನರ್ಸ್‍ಗಳು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳಿಗೂ ಲಭ್ಯವಾಗಬೇಕು ಎಂದರು.

ಡಿಜಿಟಲ್ ತಂತ್ರಜ್ಞಾನದ ಮೂಲಕ ದೂರದ ಪ್ರದೇಶಗಳಿಗೂ ಸಂಪರ್ಕ ಸಾಧಿಸಿ ಲಕ್ವ ಪೀಡಿತರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ಆರೋಗ್ಯ ಕಾರ್ಯಕರ್ತ ರಿಂದ ಲಭ್ಯವಾಗಿಸುವ ಬಗ್ಗೆಯೂ ವೈದ್ಯಕೀಯ ಕ್ಷೇತ್ರ ಆಲೋಚನೆ ನಡೆಸಬೇಕಿದೆ. ಇದರಿಂದ ಅಗತ್ಯವಾದ ಪ್ರಾಥಮಿಕ ಚಿಕಿತ್ಸೆ ರೋಗಿಗೆ ದೊರೆಯಲಿದೆ. ಜೊತೆಗೆ ಪಾಶ್ರ್ವವಾಯು ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡ ಬೇಕಿದ್ದು, ಇದರೊಂದಿಗೆ ಲಕ್ವ ಪೀಡಿತರಿಗೆ ಪರಿಣಾಮ ಕಾರಿ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕಿದೆ. ಕಾಯಿಲೆ ಬಂದಾಗ ಪರಿತಪಿಸುವ ಬದಲು ಬಾರದಂತೆ ಎಚ್ಚರ ವಹಿಸುವುದೇ ಸೂಕ್ತ. ಇದಕ್ಕಾಗಿ ನಮ್ಮ ಜೀವನ ಶೈಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಆರೋಗ್ಯ ಕಾಯ್ದು ಕೊಳ್ಳುವ ರೀತಿಯ ಜೀವನ ಕಲೆಯಿಂದಲೂ ಲಕ್ವ ಸೇರಿದಂತೆ ಯಾವುದೇ ಕಾಯಿಲೆಗಳು ಆವರಿಸದಂತೆ ನೋಡಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.

ಕನ್ನಡ ಅಭಿಮಾನ ಮೆರೆದರು: ವೈದ್ಯಕೀಯ ವಿಷಯ ಗಳಿಗೆ ಸಂಬಂಧಿಸಿದಂತೆ ಯಾವುದೇ ಕಾರ್ಯಕ್ರಮ ನಡೆ ದರೂ ಅದು ಆಂಗ್ಲ ಭಾಷೆಯಲ್ಲಿ ನಡೆಯುವುದು ಸಾಮಾನ್ಯ. ಅಂತೆಯೇ ಈ ಕಾರ್ಯಕ್ರಮದಲ್ಲೂ ಆಂಗ್ಲ ಭಾಷೆ ಪ್ರಧಾನವಾಗಿ ಕಂಡು ಬಂದಿತು. ಆದರೆ ನಿಮ್ಹಾನ್ಸ್‍ನ ನಿರ್ದೇಶಕ ಡಾ.ಬಿ.ಎನ್.ಗಂಗಾಧರ್ ಕನ್ನಡದಲ್ಲೇ ತಮ್ಮ ಉದ್ಘಾಟನಾ ಭಾಷಣ ಮಾಡುವ ಮೂಲಕ ತಮ್ಮ ಕನ್ನಡಾಭಿಮಾನ ಮೆರೆದರು. ನಿಮ್ಹಾನ್ಸ್‍ನ ನ್ಯೂರೋ ಇಮೇಜಿಂಗ್ ಅಂಡ್ ಇಂಟರ್‍ವೆನ್ಷನಲ್ ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ.ಎ.ಕೆ.ಗುಪ್ತ, ಜೆಎಸ್‍ಎಸ್ ಆಸ್ಪತ್ರೆಯ ನಿರ್ದೇಶಕ ಡಾ.ಕರ್ನಲ್ ಎಂ.ದಯಾನಂದ, ವೈದ್ಯಕೀಯ ಅಧೀಕ್ಷಕ ಡಾ.ಎಂ.ಗುರುಸ್ವಾಮಿ, ಜೆಎಸ್‍ಎಸ್ ವೈದ್ಯ ಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ಬಸವನ ಗೌಡಪ್ಪ, ಇಂಟರ್‍ವೆನ್ಷನಲ್ ನ್ಯೂರೋ ರೇಡಿಯಾ ಲಜಿಸ್ಟ್ ವೈದ್ಯ ಡಾ.ರೂಪ ಮತ್ತಿತರರು ಹಾಜರಿದ್ದರು.

Translate »