ಆಪರೇಷನ್ ಚಾಮುಂಡಿ: ವಾರದಲ್ಲಿ 28 ಪ್ರಕರಣ ದಾಖಲು
ಮೈಸೂರು

ಆಪರೇಷನ್ ಚಾಮುಂಡಿ: ವಾರದಲ್ಲಿ 28 ಪ್ರಕರಣ ದಾಖಲು

November 6, 2018

ಮೈಸೂರು: ಆಪರೇಷನ್ ಚಾಮುಂಡಿ ತೀವ್ರಗೊಳಿಸಿರುವ ಮೈಸೂರಿನ ಕೆ.ಆರ್.ಠಾಣೆ ಪೊಲೀಸರು, ವಾರದಲ್ಲಿ 28 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಚಾಮುಂಡಿಬೆಟ್ಟದಲ್ಲಿ ಹುಡುಗಿಯ ರೊಂದಿಗೆ ಚೆಲ್ಲಾಟ, ಅಡ್ಡಾದಿಡ್ಡಿ ವಾಹನ ಚಾಲನೆ, ಬೆದರಿಸಿ ಹಣ-ಆಭರಣ ದೋಚುವುದು, ಸರ ಅಪಹರಣಗಳಂ ತಹ ಅಪರಾಧ ಚಟುವಟಿಕೆಯನ್ನು ನಿಯಂತ್ರಿಸುವ ಸಲುವಾಗಿ 2010ರಲ್ಲಿ ಆರಂಭವಾದ ‘ಆಪರೇಷನ್ ಚಾಮುಂಡಿ’ಯನ್ನು ತೀವ್ರಗೊಳಿಸಿರುವ ಪೊಲೀ ಸರು, ಗರುಡ-ಚೀತಾ ವಾಹನಗಳಲ್ಲಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಕಳೆದ 1 ವಾರದಲ್ಲಿ 28 ಪ್ರಕ ರಣಗಳನ್ನು ದಾಖಲಿಸಿಕೊಂಡಿರುವ ಕೆ.ಆರ್.ಠಾಣೆ ಇನ್‍ಸ್ಪೆಕ್ಟರ್ ಪ್ರಕಾಶ್, ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

ನಗರ ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಅವರ ನಿರ್ದೇಶನದ ಮೇರೆಗೆ ಡಿಸಿಪಿ ಡಾ.ವಿಕ್ರಂ ವಿ.ಅಮಟೆ ಅವರ ಮಾರ್ಗದರ್ಶನದಲ್ಲಿ ‘ಆಪರೇಷನ್ ಚಾಮುಂಡಿ’ಯನ್ನು ಬೇರೆ ಬೇರೆ ಸಮಯದಲ್ಲಿ ರ‍್ಯಾಂಡಮ್ ಆಗಿ ಪೊಲೀಸರು ನಡೆಸುತ್ತಿದ್ದಾರೆ.

Translate »