ನ.12ರಂದು ಚಾಮುಂಡಿಬೆಟ್ಟದ ನಂದಿಗೆ ಮಹಾರುದ್ರಾಭಿಷೇಕ
ಮೈಸೂರು

ನ.12ರಂದು ಚಾಮುಂಡಿಬೆಟ್ಟದ ನಂದಿಗೆ ಮಹಾರುದ್ರಾಭಿಷೇಕ

November 6, 2018

ಮೈಸೂರು:  ಮೈಸೂರು ಬಂಬೂಬಜಾರ್‍ನ ಮೆಟ್ಟಲು ಹತ್ತುವ ಬಳಗದ ವತಿಯಿಂದ ನ.12ರಂದು ಚಾಮುಂಡಿ ಬೆಟ್ಟದ ನಂದಿ ಪ್ರತಿಮೆಗೆ 8ನೇ ವರ್ಷದ ಮಹಾರುದ್ರಾಭಿಷೇಕ ಏರ್ಪಡಿಸ ಲಾಗಿದೆ ಎಂದು ಬಳಗದ ಸಂಚಾ ರವಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಅಭಿಷೇಕ ನಡೆಯಲಿದೆ. 500 ಲೀ. ಹಾಲು, 250 ಲೀ. ಮೊಸರು ಸೇರಿದಂತೆ 47 ಬಗೆಯ ಫಲಪುಷ್ಪ ದ್ರವ್ಯಗಳಿಂದ ಅಭಿಷೇಕ ಮಾಡಲಾಗುವುದು. ಬಳಿಕ ಪ್ರತಿಮೆಯನ್ನು ನೀರಿನಿಂದ ಶುಚಿಗೊಳಿಸಲಾಗುವುದು ಎಂದು ತಿಳಿಸಿದರು. ಬಳಗದ ಮಹದೇವು, ಪ್ರವೀಣ್, ಶ್ರೀಧರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

Translate »