Tag: Chamundi Hills

ಚಾಮುಂಡಿಬೆಟ್ಟ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ
ಮೈಸೂರು

ಚಾಮುಂಡಿಬೆಟ್ಟ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ

September 24, 2019

ಮೈಸೂರು,ಸೆ.23(ಆರ್‍ಕೆ)- ದಶಕಗಳ ಚಾಮುಂಡಿ ಬೆಟ್ಟ ಗ್ರಾಮಸ್ಥರ ಬೇಡಿಕೆ ಅಂತೂ ಸಾಕಾರಗೊಳ್ಳು ತ್ತಿದೆ. ಪ್ರತಿದಿನ ಸಾವಿರಾರು ಮಂದಿ ಭಕ್ತಾದಿಗಳು ಹಾಗೂ ಪ್ರವಾಸಿಗರು ಭೇಟಿ ನೀಡುವ ನಾಡಿನ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಾನವೂ ಆದ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ವಿದೆ. ಹಲವು ಸರ್ಕಾರ ಬಂದು ಹೋದರೂ, ಇಲ್ಲಿನ ಕುಡಿಯುವ ನೀರಿನ ಸಮಸ್ಯೆ ಮಾತ್ರ ಬಗೆಹರಿದಿರಲಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇ ಗೌಡ ಈ ಗಂಭೀರ ವಿಷಯವನ್ನು ದಸರಾ ಉದ್ಘಾ ಟನಾ ಸಮಾರಂಭದಲ್ಲಿ ಪ್ರಸ್ತಾಪಿಸಿ ತಕ್ಷಣವೇ ಕುಡಿ ಯುವ…

ಚಾಮುಂಡಿಬೆಟ್ಟದ ನಂದಿಗೆ ದ್ರವ್ಯ, ಫಲ, ಪತ್ರೆ, ಪುಷ್ಪಗಳಿಂದ ಮಹಾಭಿಷೇಕ
ಮೈಸೂರು

ಚಾಮುಂಡಿಬೆಟ್ಟದ ನಂದಿಗೆ ದ್ರವ್ಯ, ಫಲ, ಪತ್ರೆ, ಪುಷ್ಪಗಳಿಂದ ಮಹಾಭಿಷೇಕ

November 26, 2018

ಮೈಸೂರು: ಚಾಮುಂಡಿಬೆಟ್ಟದ ಬೃಹತ್ ನಂದಿಗೆ ಭಾನುವಾರ 36 ವಿಧದ ದ್ರವ್ಯ, ಫಲ, ಪತ್ರೆ, ಪುಷ್ಪಾದಿಗಳಿಂದ ಮಹಾಭಿಷೇಕ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಪ್ರತಿ ವರ್ಷ 3ನೇ ಕಾರ್ತಿಕ ಮಾಸದ ಹಿಂದಿನ ಭಾನುವಾರದಂದು ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ಬೆಟ್ಟದ ನಂದಿಗೆ ಮಹಾಭಿಷೇಕ ಆಯೋಜಿಸುತ್ತಾ ಬಂದಿದ್ದು, ಅಂತೆಯೇ ಭಾನುವಾರ ನಡೆದ 13ನೇ ವರ್ಷದ ಮಹಾಭಿಷೇಕದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರಾನಂದ ಸ್ವಾಮೀಜಿ, ಹೊಸ ಮಠ ಶ್ರೀ ಚಿದಾನಂದ ಸ್ವಾಮೀಜಿ…

ಚಾಮುಂಡಿಬೆಟ್ಟದ ನಂದಿಗೆ ನೂರೊಂದು ಮಸ್ತಕಾಭಿಷೇಕ
ಮೈಸೂರು

ಚಾಮುಂಡಿಬೆಟ್ಟದ ನಂದಿಗೆ ನೂರೊಂದು ಮಸ್ತಕಾಭಿಷೇಕ

November 13, 2018

ಮೈಸೂರು:  ಕಾರ್ತಿಕ ಮಾಸದ ಮೊದಲ ಸೋಮವಾರವಾದ ಇಂದು ಚಾಮುಂಡಿಬೆಟ್ಟದ ನಂದಿಗೆ ಬೆಟ್ಟ ಹತ್ತುವ ಬಳಗದ ವತಿಯಿಂದ ನೂರೊಂದು ದ್ರವ್ಯಗಳಿಂದ ಶಾಸ್ತ್ರೋಕ್ತವಾಗಿ ಮಸ್ತಕಾಭಿಷೇಕ ನೆರವೇರಿಸಲಾಯಿತು. ಪ್ರತಿ ಶುಕ್ರವಾರ ಚಾಮುಂಡಿಬೆಟ್ಟ ಹತ್ತುವ ಭಕ್ತರು `ಬೆಟ್ಟ ಹತ್ತುವ ಬಳಗ’ ಸಂಘಟನೆ ಅಸ್ತಿತ್ವಕ್ಕೆ ತಂದು, ಕಳೆದ 8 ವರ್ಷದಿಂದ ಕಾರ್ತಿಕ ಮಾಸದ ಮೊದಲ ಸೋಮವಾರ ಬೆಟ್ಟದ ನಂದಿ ಮೂರ್ತಿಗೆ ಮಸ್ತಕಾಭಿಷೇಕ ನೆರವೇರಿಸುತ್ತಾ ಬಂದಿದ್ದಾರೆ. ಇಂದು ಬೆಳಿಗ್ಗೆ 10.30ಕ್ಕೆ ಆರಂಭವಾದ ಈ ಮಹಾಭಿಷೇಕ ಮಧ್ಯಾಹ್ನ 1.30ರವರೆಗೂ ನಡೆಯಿತು. ಶಾಸ್ತ್ರೋಕ್ತವಾಗಿ ನಡೆದ ಈ ಧಾರ್ಮಿಕ ಕಾರ್ಯದಲ್ಲಿ…

ನ.12ರಂದು ಚಾಮುಂಡಿಬೆಟ್ಟದ ನಂದಿಗೆ ಮಹಾರುದ್ರಾಭಿಷೇಕ
ಮೈಸೂರು

ನ.12ರಂದು ಚಾಮುಂಡಿಬೆಟ್ಟದ ನಂದಿಗೆ ಮಹಾರುದ್ರಾಭಿಷೇಕ

November 6, 2018

ಮೈಸೂರು:  ಮೈಸೂರು ಬಂಬೂಬಜಾರ್‍ನ ಮೆಟ್ಟಲು ಹತ್ತುವ ಬಳಗದ ವತಿಯಿಂದ ನ.12ರಂದು ಚಾಮುಂಡಿ ಬೆಟ್ಟದ ನಂದಿ ಪ್ರತಿಮೆಗೆ 8ನೇ ವರ್ಷದ ಮಹಾರುದ್ರಾಭಿಷೇಕ ಏರ್ಪಡಿಸ ಲಾಗಿದೆ ಎಂದು ಬಳಗದ ಸಂಚಾ ರವಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಅಭಿಷೇಕ ನಡೆಯಲಿದೆ. 500 ಲೀ. ಹಾಲು, 250 ಲೀ. ಮೊಸರು ಸೇರಿದಂತೆ 47 ಬಗೆಯ ಫಲಪುಷ್ಪ ದ್ರವ್ಯಗಳಿಂದ ಅಭಿಷೇಕ ಮಾಡಲಾಗುವುದು. ಬಳಿಕ ಪ್ರತಿಮೆಯನ್ನು ನೀರಿನಿಂದ ಶುಚಿಗೊಳಿಸಲಾಗುವುದು…

ಚಾಮುಂಡಿಬೆಟ್ಟಕ್ಕೆ ಅಂದು ರಾತ್ರಿ 8ಕ್ಕೆ ಬಸ್ ಸಂಚಾರ ಸ್ಥಗಿತ
ಮೈಸೂರು

ಚಾಮುಂಡಿಬೆಟ್ಟಕ್ಕೆ ಅಂದು ರಾತ್ರಿ 8ಕ್ಕೆ ಬಸ್ ಸಂಚಾರ ಸ್ಥಗಿತ

August 1, 2018

ಮೈಸೂರು: ಮೂರನೇ ಆಷಾಢ ಶುಕ್ರವಾರ ಆಗಸ್ಟ್ 3ರಂದು ರಾತ್ರಿ 8ಗಂಟೆಗೆ ಮೈಸೂರಿನ ಲಲಿತಮಹಲ್ ಹೆಲಿ ಪ್ಯಾಡ್‍ನಿಂದ ಚಾಮುಂಡಿ ಬೆಟ್ಟಕ್ಕೆ ಸಂಚಾರ ಸ್ಥಗಿತ ಗೊಳ್ಳಲಿದೆ ಎಂದು ಶ್ರೀ ಚಾಮುಂಡೇಶ್ವರಿ ದೇವ ಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಪ್ರಸಾದ್ ತಿಳಿಸಿದ್ದಾರೆ. 3ನೇ ಆಷಾಢ ಶುಕ್ರವಾರ ಚಾಮುಂಡೇಶ್ವರಿ ಅಮ್ಮನವರ ಜನ್ಮೋತ್ಸವ ನಡೆಯುವುದರಿಂದ ವಿಶೇಷ ಪೂಜೆ ನಡೆಯುವ ಕಾರಣ, ಆಗಸ್ಟ್ 3ರಂದು ಬೆಳಿಗ್ಗೆ 8ರಿಂದ ರಾತ್ರಿ 10ಗಂಟೆವರೆಗೆ ದರ್ಶನದ ವ್ಯವಸ್ಥೆ ಇರುತ್ತದೆ. ಭಕ್ತಾದಿಗಳ ಅನುಕೂಲಕ್ಕಾಗಿ ಲಲಿತಮಹಲ್ ಹೆಲಿಪ್ಯಾಡ್‍ನಿಂದ ಚಾಮುಂಡಿ ಬೆಟ್ಟಕ್ಕೆ ಬೆಳಿಗ್ಗೆ 6.30ರಿಂದ…

ಆಷಾಢ ಶುಕ್ರವಾರ: ಚಾಮುಂಡಿಬೆಟ್ಟದಲ್ಲಿ ವಿಶೇಷ ವ್ಯವಸ್ಥೆ
ಮೈಸೂರು

ಆಷಾಢ ಶುಕ್ರವಾರ: ಚಾಮುಂಡಿಬೆಟ್ಟದಲ್ಲಿ ವಿಶೇಷ ವ್ಯವಸ್ಥೆ

July 20, 2018

 ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತ ಸಾಗರ ನಿರೀಕ್ಷೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರ ನಾಳೆ(ಜು.20) ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾ ಲಯದಲ್ಲಿ ನಡೆಯುವ ವಿಶೇಷ ಪೂಜೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಪಾರ ಸಂಖ್ಯೆಯ ಭಕ್ತರು ಬೆಟ್ಟಕ್ಕೆ ದೇವಿ ದರ್ಶನಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪ್ರತ್ಯೇಕ ನಾಲ್ಕು ಸಾಲುಗಳು: ದೇವಾಲಯ ಪ್ರವೇಶಿಸಲು ನಾಲ್ಕು ಸಾಲುಗಳ ವ್ಯವಸ್ಥೆ ಮಾಡಲಾ ಗಿದೆ. ಧರ್ಮ ದರ್ಶನ, 50 ರೂ. ಟಿಕೆಟ್ ಪಡೆದ ವರಿಗೆ, 300 ರೂ.ಗಳ ಅಭಿಷೇಕದ…

ಚಾಮುಂಡಿಬೆಟ್ಟದ ಮೆಟ್ಟಿಲು ಸ್ವಚ್ಛಗೊಳಿಸಿದ ಸರ್ ಎಂ. ವಿಶ್ವೇಶ್ವರಯ್ಯ ನಲ್ಲಿ, ಒಳಚರಂಡಿ ಸಂಘದ ಕಾರ್ಮಿಕರು
ಮೈಸೂರು

ಚಾಮುಂಡಿಬೆಟ್ಟದ ಮೆಟ್ಟಿಲು ಸ್ವಚ್ಛಗೊಳಿಸಿದ ಸರ್ ಎಂ. ವಿಶ್ವೇಶ್ವರಯ್ಯ ನಲ್ಲಿ, ಒಳಚರಂಡಿ ಸಂಘದ ಕಾರ್ಮಿಕರು

July 19, 2018

ಮೈಸೂರು: ಆಷಾಢ ಮಾಸದ ಹಿನ್ನೆಲೆಯಲ್ಲಿ ಬುಧವಾರ ಸರ್ ಎಂ.ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಕಾರ್ಮಿಕರು ಬುಧವಾರ ಚಾಮುಂಡಿಬೆಟ್ಟದ ಮೆಟ್ಟಿಲುಗಳನ್ನು ಸ್ವಚ್ಛಗೊಳಿಸಿದರು. ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಬುಧವಾರ ಬೆಳಿಗ್ಗೆ ನಡೆದ ಸ್ವಚ್ಛತಾ ಕಾರ್ಯಕ್ರಮವನ್ನು ಶಾಸಕ ಎಸ್.ಎ.ರಾಮದಾಸ್ ಕಸಗುಡಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಆಷಾಡ ಮಾಸದ ಶುಕ್ರವಾರದಂದು ನಾಡದೇವಿ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಆರಾಧಿಸಲು ನಾಡಿನ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ. ಭಕ್ತರು ಹಾಗೂ ವಿವಿಧ ಹರಕೆ ಹೊತ್ತವರು 1001 ಮೆಟ್ಟಿಲುಗಳನ್ನು ಹತ್ತುವ ಮೂಲಕ…

ಚಾಮುಂಡಿಬೆಟ್ಟದಲ್ಲಿ ಮೈಸೂರು ಪಾಕ್ ಹಬ್ಬ
ಮೈಸೂರು

ಚಾಮುಂಡಿಬೆಟ್ಟದಲ್ಲಿ ಮೈಸೂರು ಪಾಕ್ ಹಬ್ಬ

July 15, 2018

ಮೈಸೂರು: ಮೈಸೂರಿನ ಅಪೂರ್ವ ಸ್ನೇಹ ಬಳಗದ ವತಿಯಿಂದ ಚಾಮುಂಡಿಬೆಟ್ಟದಲ್ಲಿ ಶನಿವಾರ ಮೈಸೂರು ಪಾಕ್ ಹಬ್ಬ ಆಚರಿಸಲಾಯಿತು. ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಮೈಸೂರು ಪಾಕ್ ವಿತರಿಸಿ ಅದರ ಇತಿಹಾಸ, ಮಹತ್ವ ಮತ್ತು ಮೈಸೂರಿನ ಸಾಂಸ್ಕೃತಿಕ ಹಿರಿಮೆಯನ್ನು ವಿವರಿಸಲಾಯಿತು. ಈ ಸಂದರ್ಭದಲ್ಲಿ ಅಡುಗೆ ಸಂಘದ ಉಪಾಧ್ಯಕ್ಷ ಹೆಚ್.ಎನ್.ಶ್ರೀಧರಮೂರ್ತಿ, ಮಾತನಾಡಿ, ಸಂತೋಷದ ಸಂಕೇತ ಸಿಹಿ. ಆದರೆ ಇದು ಕೆಲವರ ಆರೋಗ್ಯಕ್ಕೆ ಹಾನಿಕರ ಎಂದು ಭಾವಿಸಲಾಗುತ್ತಿದೆ. ಆದರೆ ಮೈಸೂರು ಪಾಕ್ ತಿಂದರೆ ಆರೋಗ್ಯ ವೃದ್ಧಿಸುತ್ತದೆ. ಕಡಲೆ ಹಿಟ್ಟು ಚರ್ಮದ ಕಾಯಿಲೆ ಗುಣಪಡಿಸುತ್ತದೆ. ಸಕ್ಕರೆಯಲ್ಲಿ…

ಕ್ಲೀನ್ ಫೌಂಡೇಷನ್, ಯುವ ಬ್ರಿಗೇಡ್‍ನಿಂದ ಚಾಮುಂಡಿಬೆಟ್ಟದ ಮೆಟ್ಟಿಲು ಸ್ವಚ್ಛತೆ
ಮೈಸೂರು

ಕ್ಲೀನ್ ಫೌಂಡೇಷನ್, ಯುವ ಬ್ರಿಗೇಡ್‍ನಿಂದ ಚಾಮುಂಡಿಬೆಟ್ಟದ ಮೆಟ್ಟಿಲು ಸ್ವಚ್ಛತೆ

June 11, 2018

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದ ಮೆಟ್ಟಿಲುಗಳಲ್ಲಿ ಚೆಲ್ಲಾಡಿದ್ದ ಪ್ಲಾಸ್ಟಿಕ್ ತ್ಯಾಜ್ಯ ಸೇರಿದಂತೆ ಕಸವನ್ನು ಭಾನುವಾರ ಮೈಸೂರಿನ ಕ್ಲೀನ್ ಫೌಂಡೇಷನ್ ಮತ್ತು ಯುವ ಬ್ರಿಗೇಡ್ ವತಿಯಿಂದ ಸ್ವಚ್ಛಗೊಳಿಸಿ ದಾರಿಯಲ್ಲಿರುವ ಮಂಟಪಗಳಿಗೆ ಬಣ್ಣ ಬಳಿಯುವ ಮೂಲಕ ಗಮನ ಸೆಳೆದರು. ಪ್ರಸಿದ್ಧ ಪ್ರವಾಸಿ ತಾಣವೂ ಹಾಗೂ ಧಾರ್ಮಿಕ ಕ್ಷೇತ್ರವೂ ಆಗಿರುವ ಚಾಮುಂಡಿಬೆಟ್ಟಕ್ಕೆ ಪ್ರತಿ ದಿನ ಮೆಟ್ಟಿಲುಗಳ ಮೂಲಕ ಹಲವಾರು ಮಂದಿ ಭಕ್ತರು ಮತ್ತು ಪ್ರವಾಸಿಗರು ತೆರಳಲಿದ್ದು, ಮಾರ್ಗ ಮಧ್ಯೆ ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಬಾಟಲ್‍ಗಳನ್ನು ಎಸೆದು ಹೋಗುವ ಪರಿಪಾಠವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ…

Translate »