ಕ್ಲೀನ್ ಫೌಂಡೇಷನ್, ಯುವ ಬ್ರಿಗೇಡ್‍ನಿಂದ ಚಾಮುಂಡಿಬೆಟ್ಟದ ಮೆಟ್ಟಿಲು ಸ್ವಚ್ಛತೆ
ಮೈಸೂರು

ಕ್ಲೀನ್ ಫೌಂಡೇಷನ್, ಯುವ ಬ್ರಿಗೇಡ್‍ನಿಂದ ಚಾಮುಂಡಿಬೆಟ್ಟದ ಮೆಟ್ಟಿಲು ಸ್ವಚ್ಛತೆ

June 11, 2018

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದ ಮೆಟ್ಟಿಲುಗಳಲ್ಲಿ ಚೆಲ್ಲಾಡಿದ್ದ ಪ್ಲಾಸ್ಟಿಕ್ ತ್ಯಾಜ್ಯ ಸೇರಿದಂತೆ ಕಸವನ್ನು ಭಾನುವಾರ ಮೈಸೂರಿನ ಕ್ಲೀನ್ ಫೌಂಡೇಷನ್ ಮತ್ತು ಯುವ ಬ್ರಿಗೇಡ್ ವತಿಯಿಂದ ಸ್ವಚ್ಛಗೊಳಿಸಿ ದಾರಿಯಲ್ಲಿರುವ ಮಂಟಪಗಳಿಗೆ ಬಣ್ಣ ಬಳಿಯುವ ಮೂಲಕ ಗಮನ ಸೆಳೆದರು.

ಪ್ರಸಿದ್ಧ ಪ್ರವಾಸಿ ತಾಣವೂ ಹಾಗೂ ಧಾರ್ಮಿಕ ಕ್ಷೇತ್ರವೂ ಆಗಿರುವ ಚಾಮುಂಡಿಬೆಟ್ಟಕ್ಕೆ ಪ್ರತಿ ದಿನ ಮೆಟ್ಟಿಲುಗಳ ಮೂಲಕ ಹಲವಾರು ಮಂದಿ ಭಕ್ತರು ಮತ್ತು ಪ್ರವಾಸಿಗರು ತೆರಳಲಿದ್ದು, ಮಾರ್ಗ ಮಧ್ಯೆ ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಬಾಟಲ್‍ಗಳನ್ನು ಎಸೆದು ಹೋಗುವ ಪರಿಪಾಠವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪಾದದಿಂದ ದೇವಾಲಯದವರೆಗೆ ಒಂದು ಸಾವಿರ ಮೆಟ್ಟಿಲುಗಳಿದ್ದು, ಮೆಟ್ಟಿಲುಗಳ ಎರಡೂ ಬದಿಯಲ್ಲಿಯೂ ಕಸದ ರಾಶಿ ಬಿದ್ದಿರುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಮೈಸೂರು ಕ್ಲೀನ್ ಫೌಂಡೇಷನ್ ಮತ್ತು ಯುವ ಬ್ರಿಗೇಡ್ ಸದಸ್ಯರು ಸ್ವಚ್ಛತಾ ಅಭಿಯಾನವನ್ನು ನಡೆಸಿ ಚಾಮುಂಡಿಬೆಟ್ಟದ ಪರಿಸರವನ್ನು ಸ್ವಚ್ಛಗೊಳಿಸಿದರು.

ಬೆಟ್ಟದ ಪಾದದ ಬಳಿಯಿಂದ ಸ್ವಚ್ಛತಾ ಅಭಿಯಾನ ಆರಂಭಿಸಿದ ಸುಮಾರು 40ಕ್ಕೂ ಹೆಚ್ಚು ಮಂದಿ ಎರಡೂ ಸಂಸ್ಥೆಯ ಕಾರ್ಯಕರ್ತರು ಸುಮಾರು 3 ಟನ್ ಪ್ಲಾಸ್ಟಿಕ್ ಪೇಪರ್‍ಗಳು, ತ್ಯಾಜ್ಯಗಳು ಹಾಗೂ ನಿರುಪಯುಕ್ತ ವಸ್ತುಗಳನ್ನು ಸಂಗ್ರಹಿಸಿದರು. ಬಳಿಕ ಚಾಮುಂಡಿಬೆಟ್ಟದ ಗ್ರಾಮ ಪಂಚಾಯ್ತಿಯ ಪಿಡಿಓ ಪೂಣ ್ಮಾ ಅವರನ್ನು ಸಂಪರ್ಕಿಸಿ ಸಂಗ್ರಹವಾಗಿದ್ದ ಕಸವನ್ನು ಗ್ರಾಮ ಪಂಚಾಯ್ತಿಯ ಟ್ರಾಕ್ಟರ್‍ಗಳಲ್ಲಿ ಸಾಗಿಸಿದರು.

ಇದೇ ವೇಳೆ ಬೆಟ್ಟದ ತಪ್ಪಲಿನಲ್ಲಿರುವ 7 ಮಂಟಪಗಳಿಗೆ ಪ್ರೇಮಿಗಳು ಹಾಗೂ ಕಿಡಿಗೇಡಿಗಳು ವಿವಿಧ ಬರಗಳನ್ನು ಬರೆದು ವಿರೂಪಗೊಳಿಸಿದ್ದನ್ನು ಬಣ್ಣ ಬಳಿಯುವ ಮೂಲಕ ಮಂಟಪಗಳ ಅಂದ ಹೆಚ್ಚಿಸಿದರು. ಇದು ಭಕ್ತರು ಮತ್ತು ಪ್ರವಾಸಿಗರ ಗಮನ ಸೆಳೆಯಿತು.

Translate »