ಆನ್‍ಲೈನ್ ಔಷಧ ಮಾರಾಟ ವಿರೋಧಿಸಿ ಇಂದು ದೇಶಾದ್ಯಂತ ಔಷಧ ಮಾರಾಟ ಬಂದ್
ಮೈಸೂರು

ಆನ್‍ಲೈನ್ ಔಷಧ ಮಾರಾಟ ವಿರೋಧಿಸಿ ಇಂದು ದೇಶಾದ್ಯಂತ ಔಷಧ ಮಾರಾಟ ಬಂದ್

September 28, 2018

ಬೆಂಗಳೂರು: ಕೇಂದ್ರ ಸರ್ಕಾರ ಆನ್‍ಲೈನ್‍ನಲ್ಲಿ ಔಷಧ ಮಾರಾಟಕ್ಕೆ ಅನುಮತಿ ನೀಡಲು ಮುಂದಾಗಿರುವುದನ್ನು ವಿರೋ ಧಿಸಿ ಶುಕ್ರವಾರ ದೇಶಾದ್ಯಂತ ಔಷಧ ಮಾರಾಟ ಬಂದ್ ಆಚರಿಸಲಾಗು ತ್ತಿದೆ. ರಾಷ್ಟ್ರಮಟ್ಟದಲ್ಲಿ ಇ-ಫಾರ್ಮಸಿ ವಿತರಣಾ
ವ್ಯವಸ್ಥೆಯನ್ನು ತರಾತುರಿಯಲ್ಲಿ ಜಾರಿಗೆ ತರಲು ಕೇಂದ್ರ ಉದ್ದೇಶಿಸಿದೆ. ಇ-ಫಾರ್ಮಸಿ ಎಂಬುದು ಔಷಧ ಅಂಗಡಿಯಲ್ಲ, ಕಾನೂನಾತ್ಮಕವಲ್ಲದ ಯೋಜನೆ ಜಾರಿ ಮೂಲಕ ಗ್ರಾಹಕರ ಹಿತಾಸಕ್ತಿ ಕಡೆಗಣಿಸಲಾಗುತ್ತಿದೆ ಎಂದು ಔಷಧ ವ್ಯಾಪಾರಿಗಳ ಸಂಘ ಆರೋಪಿಸಿದೆ. ನಕಲಿ ಹಾಗೂ ಮಾದಕ ವಸ್ತುಗಳ ವ್ಯಾಪಾರಕ್ಕೆ ಇ-ಫಾರ್ಮಸಿ ಅವಕಾಶ ನೀಡಲಿದ್ದು, ಔಷಧಗಳ ಅರಿವಿಲ್ಲದ ವ್ಯಕ್ತಿ ವಿತರಕನಾಗುವುದರಿಂದ ಗ್ರಾಹಕನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದ್ದು, ಇ-ಫಾರ್ಮಸಿ ವ್ಯವಸ್ಥೆ ರದ್ದುಪಡಿಸಬೇಕು ಎಂದು ಸಂಘ ಒತ್ತಾಯಿಸಿದೆ.

Translate »